Lava Yuva 4 ಸದ್ದಿಲ್ಲದೇ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಕೇವಲ 6999 ರೂಗಳಿಗೆ ಬಿಡುಗಡೆ!

Updated on 28-Nov-2024
HIGHLIGHTS

Lava Yuva 4 ಸ್ಮಾರ್ಟ್ಫೋನ್ ಕೇವಲ 6999 ರೂಗಳಿಗೆ 28ನೇ ನವೆಂಬರ್ 2024 ರಂದು ಬಿಡುಗಡೆಯಾಗಿದೆ.

Lava Yuva 4 ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

Lava Yuva 4 ಸ್ಮಾರ್ಟ್ಫೋನ್ 1 ವರ್ಷದ ವಾರಂಟಿ ಮತ್ತು ಮನೆಯಲ್ಲಿ ಉಚಿತ ಸೇವೆಯೊಂದಿಗೆ ಬರುತ್ತವೆ.

Lava Yuva 4: ಭಾರತದಲ್ಲಿ ಇಂದು ದೇಶಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ಲಾವಾ (LAVA) ತನ್ನ ಆ ಲೇಟೆಸ್ಟ್ ಎಂಟ್ರಿ ಲೆವೆಲ್ 4G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ Lava Yuva 4 ಎಂದು ಹೆಸರಿಸಿದ್ದು ಕೇವಲ ₹6999 ರೂಗಳಿಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ಈ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿರುವುದು ಹೊಸ ಸ್ಮಾರ್ಟ್ಫೋನ್ ಖರೀದಿಸುವವರಿಗೆ ಒಳ್ಳ ಅವಕಾಶವನ್ನು ಕಲ್ಪಿಸಿದೆ.

ಈ ಲೇಟೆಸ್ಟ್ ಸ್ಮಾರ್ಟ್ಫೋನ್ ವಿಶೇಷಣಗಳನ್ನು ನೋಡುವುದಾದರೆ 90Hz ರಿಫ್ರೆಶ್ ರೇಟ್ ಹೊಂದಿರುವ ಆಕರ್ಷಕ ಡಿಸ್ಪ್ಲೇಯೊಂದಿಗೆ 50MP ಪ್ರೈಮರಿ ಬ್ಯಾಕ್ ಕ್ಯಾಮೆರಾ ಸೆನ್ಸರ್ ಮತ್ತು 5000mAh ಬ್ಯಾಟರಿ ಈ ಸ್ಮಾರ್ಟ್ಫೋನ್ ಹೈಲೈಟ್ ಆಗಿದ್ದು ಹೆಚ್ಚುವರಿಯಾಗಿ ನಿಮಗೆ ಈ Lava Yuva 4 ಸ್ಮಾರ್ಟ್ಫೋನ್ ಈ ಫೋನ್‌ಗಳು 1 ವರ್ಷದ ವಾರಂಟಿ ಮತ್ತು ಮನೆಯಲ್ಲಿ ಉಚಿತ ಸೇವೆಯೊಂದಿಗೆ ಬರುತ್ತವೆ.

Also Read: OTP Delay: 1ನೇ ಡಿಸೆಂಬರ್‌ನಿಂದ ಬದಲಾಗುವ ಮೊಬೈಲ್‌ ಓಟಿಪಿ ಮಂದಗತಿಯ ಬಗ್ಗೆ TRAI ಸ್ಪಷ್ಟತೆ ನೀಡಿದೆ!

ಭಾರತದಲ್ಲಿ Lava Yuva 4 ಬೆಲೆ ಮತ್ತು ಲಭ್ಯತೆ

Lava Yuva 4 ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಬೆಲೆಯನ್ನು ರೂ ₹6,999 ನಿಗದಿ ಮಾಡಿದೆ. ಇದರ ಕ್ರಮವಾಗಿ 4GB RAM ಮತ್ತು 128GB ಸ್ಟೋರೇಜ್ ಅನ್ನು 7499 ರೂಗಳಿಗೆ ಬಿಡುಗಡೆಗೊಳಿಸಿದೆ. ಈ Lava Yuva 4 ಸ್ಮಾರ್ಟ್ಫೋನ್ ಈಗಾಗಲೇ ನಿಮ್ಮ ಹತ್ತಿರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕಾಣಬಹುದು.

Lava Yuva 4 Launched in India

ಈ Lava Yuva 4 ಸ್ಮಾರ್ಟ್ಫೋನ್ ಈ ನವೆಂಬರ್‌ನಿಂದ ಅದರ ರಿಟೇಲ್ ಔಟ್‌ಲೆಟ್‌ಗಳು ಮತ್ತು ಪಾಲುದಾರ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಈ Lava Yuva 4 ಫೋನ್ 1 ವರ್ಷದ ವಾರಂಟಿ ಮತ್ತು ಮನೆಯಲ್ಲಿ ಉಚಿತ ಸೇವೆಯೊಂದಿಗೆ ಬರುತ್ತವೆ. ಈ ಫೋನ್ ಗ್ಲಾಸಿ ವೈಟ್, ಗ್ಲೋಸಿ ಪರ್ಪಲ್, ಗ್ಲೋಸಿ ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ.

ಭಾರತದಲ್ಲಿ Lava Yuva 4 ವಿಶೇಷಣತೆಗಳೇನು?

ಇಂದು ಬಿಡುಗಡೆಯಾದ ಈ Lava Yuva 4 ಫೋನ್ UNISOC T606 ಚಿಪ್‌ನೊಂದಿಗೆ ಬರುತ್ತದೆ. ಈ ಫೋನ್ 4GB ಹಾರ್ಡ್‌ವೇರ್ RAM ಮತ್ತು 4GB ವರ್ಚುವಲ್ RAM ಅನ್ನು ಹೊಂದಿದೆ. ಇದು ಫೋನ್‌ನಲ್ಲಿ 8GB RAM ಅನ್ನು ನೀಡುತ್ತದೆ. ಸ್ಮಾರ್ಟ್‌ಫೋನ್ ಪಂಚ್-ಹೋಲ್ ವಿನ್ಯಾಸ, 90Hz ರಿಫ್ರೆಶ್ ದರದೊಂದಿಗೆ 6.56 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ ಫೋಟೊಗ್ರಫಿಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ.

Lava Yuva 4 Launched in India

Lava Yuva 4 ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 10W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. Lava Yuva 4 ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸಿಂಗಲ್ ಸ್ಪೀಕರ್ ಅನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :