8GB RAM ಮತ್ತು Dimensity 6080 ಪ್ರೊಸೆಸರ್‌ನ Lava Storm 5G ಬಿಡುಗಡೆ! ಬೆಲೆ ಮತ್ತು ಫೀಚರ್ ತಿಳಿಯಿರಿ

8GB RAM ಮತ್ತು Dimensity 6080 ಪ್ರೊಸೆಸರ್‌ನ Lava Storm 5G ಬಿಡುಗಡೆ! ಬೆಲೆ ಮತ್ತು ಫೀಚರ್ ತಿಳಿಯಿರಿ
HIGHLIGHTS

Lava Storm 5G ಸ್ಮಾರ್ಟ್ಫೋನ್ ಅನ್ನು 8GB RAM ಮತ್ತು Dimensity 6080 ಪ್ರೊಸೆಸರ್‌ನೊಂದಿಗೆ ಬಿಡುಗಡೆ

Lava Storm 5G ಸ್ಮಾರ್ಟ್ಫೋನ್ಭಾ ರತದಲ್ಲಿ ಕೇವಲ 11,999 ರೂಗಳಿಗೆ ಬಿಡುಗಡೆಗೊಳಿಸಿದೆ.

ಭಾರತೀಯ ಬ್ರಾಂಡ್ Lava Storm 5G ಈಗ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿ ಮಾರಾಟಕ್ಕೆ ಸಿದ್ಧವಾಗಿದೆ. ಕಂಪನಿಯು ಈ ಫೋನ್‌ಗೆ ಸಂಬಂಧಿಸಿದಂತೆ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಫೋನ್‌ನ ವಿನ್ಯಾಸ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಇನ್ನು ಹಲವು ಉತ್ತಮ ಫೀಚರ್‌ಗಳನ್ನು ಈ ಫೋನ್‌ನಲ್ಲಿ ಕಾಣಬಹುದು. ಇದು ಅತಿ ಕಡಿಮೆ ಬೆಲೆಗೆ ಪ್ಯೂರ್ ಸ್ಟ್ಯಾಕ್ ಆಂಡ್ರಾಯ್ಡ್ 5G ಸ್ಮಾರ್ಟ್‌ಫೋನ್ ಆಗಿರುತ್ತದೆ. ಅದರ ಬಗ್ಗೆ ಒಂದಿಷ್ಟು ಸಂಪೂರ್ಣ ವಿವರಗಳನ್ನು ತಿಳಿಯಿರಿ.

Also Readd: Christmas Day Gifts: ನಿಮ್ಮ ಪ್ರೀತಿಪಾತ್ರರಿಗೆ ₹5000 ರೂಗಳೊಳಗೆ ಈ ಬೆಸ್ಟ್ ಕ್ರಿಸ್ಮಸ್ ಗಿಫ್ಟ್‌ಗಳನ್ನು ನೀಡಬಹುದು

ಭಾರತದಲ್ಲಿ Lava Storm 5G ಬೆಲೆ ಮತ್ತು ಲಭ್ಯತೆ

ಲಾವಾ ಸ್ಮಾರ್ಟ್ಫೋನ್ MediaTek Dimensity 6080 ಚಿಪ್‌ಸೆಟ್ ಹೊಂದಿದ್ದು ಇದು 6nm ಟೆಕ್ನಾಲಜಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ 8GB RAM ವರೆಗೆ ನೀಡುತ್ತದೆ ಬಳಕೆದಾರರಿಗೆ ಅದನ್ನು 16GB ವರೆಗೆ ವಿಸ್ತರಿಸಲು ಮತ್ತು ಸ್ಮಾರ್ಟ್ಫೋನ್ 128GB ಇಂಟರ್ನಲ್ ಸ್ಟೋರೇಜ್ ಸಹ ನೀಡುತ್ತದೆ. ಸ್ಮಾರ್ಟ್‌ಫೋನ್‌ನ ಬೆಲೆ 11,999 ರೂಗಳಾಗಿದೆ. ಜೊತೆಗೆ ಆಕರ್ಷಕ ಬ್ಯಾಂಕ್ ಕೊಡುಗೆಗಳನ್ನು ನೀಡುತ್ತದೆ. ಫೋನ್ ಡಿಸೆಂಬರ್ 28 ರಿಂದ Amazon ಮತ್ತು Lava ನ ಇ-ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ Lava Storm 5G ಫೀಚರ್ ವಿಶೇಷತೆಗಳು

Lava Storm 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಮತ್ತು Widevine L1 ಬೆಂಬಲವನ್ನು ಒಳಗೊಂಡಿರುವ 6.78 ಇಂಚಿನ FHD+ IPS ಡಿಸ್‌ಪ್ಲೇಯನ್ನು ಹೊಂದಿದೆ. Storm 5G ಸ್ಪಷ್ಟವಾದ ದೃಶ್ಯಗಳನ್ನು ನೀಡುತ್ತದೆ. ಗೇಮಿಂಗ್ ಮತ್ತು ವೀಡಿಯೊ ಸ್ಟ್ರೀಮಿಂಗ್ ಸಮಯದಲ್ಲಿ ಮಸುಕುಗಳನ್ನು ಕಡಿಮೆ ಮಾಡುತ್ತದೆ. ಫೋನ್ ಅನ್ನು ಗೇಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

Lava Storm 5G

ಲಾವಾ Storm 5G ಕ್ಯಾಮೆರಾ

ಇದು ಸೈಡ್-ಮೌಂಟೆಡ್ ಅಲ್ಟ್ರಾ-ಫಾಸ್ಟ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್‌ನಂತಹ ಉನ್ನತ ದರ್ಜೆಯ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪ್ರೀಮಿಯಂ ಗ್ಲಾಸ್ ಬ್ಯಾಕ್ ಅನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ ಸ್ಮಾರ್ಟ್‌ಫೋನ್ 50MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದರ ಕ್ರಮವಾಗಿ ಫೋನ್ 16MP ಮುಂಭಾಗದಲ್ಲಿಸೆಲ್ಫಿ ಕ್ಯಾಮೆರಾವನ್ನು ಸಹ ಫೋನ್ ಒಳಗೊಂಡಿದೆ.

ಫೋನ್ ಕ್ಲೀನ್, ಬ್ಲೋಟ್‌ವೇರ್ ಮುಕ್ತ ಸ್ಟಾಕ್ ಆಂಡ್ರಾಯ್ಡ್ 13 ನಲ್ಲಿ ರನ್ ಆಗುತ್ತಿದೆ. ಫೋನ್ ತಡೆರಹಿತ ಅನುಭವವನ್ನು ಒದಗಿಸುತ್ತದೆ. ಸ್ಮಾರ್ಟ್‌ಫೋನ್‌ ಯಾವುದೇ ಬ್ಲೋಟ್‌ವೇರ್ ಇಲ್ಲದೆ ಫೋನ್ ಆಂಡ್ರಾಯ್ಡ್ 14 ಅಪ್‌ಗ್ರೇಡ್‌ಗಳೊಂದಿಗೆ 2 ವರ್ಷಗಳ ಭದ್ರತಾ ನವೀಕರಣಗಳನ್ನು ನೀಡಲು ಬದ್ಧವಾಗಿದೆ. ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ 33W ಫಾಸ್ಟ್ ಚಾರ್ಜಿಂಗ್‌ನಿಂದ ಪೂರಕವಾಗಿ ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಲಾವಾದ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo