ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ ಈಗಷ್ಟೇ Lava Yuva 3 Pro ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು ಈಗ ಮತ್ತೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ತೋರಿಸಿ ಇದನ್ನು Lava Storm 5G ಎಂದು ಹೆಸರಿಸಿದೆ. ಈ ಲಾವಾ ಸ್ಟೋರ್ಮ್ 5G ಇದೇ 21ನೇ ಡಿಸೆಂಬರ್ 2023 ರಂದು ಭಾರತದ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಫೋನ್ ಬಿಡುಗಡೆಗೂ ಮುಂಚೆಯೇ ಕಂಪನಿ ಇದರ ಕೆಲವೊಂದು ಹೈಲೈಟ್ ಫೀಚರ್ಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಮುಂಬರಲಿರುವ ಈ ಸ್ಮಾರ್ಟ್ಫೋನ್ ಬ್ಯಾಕ್ ಪ್ಯಾನಲ್ ಬ್ಲಾಕ್ ಬಣ್ಣದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದಾಗಿ ತೋರಿಸಿದೆ.
Also Read: WhatsApp ಗ್ರೂಪ್‌ಗಳಿಗೆ ಶೀಘ್ರದಲ್ಲೇ Automatic Album ಫೀಚರ್! ಇದೇಗೆ ಕಾರ್ಯನಿರ್ವಹಿಸುತ್ತದೆ
ಲಾವಾದ ಈ Lava Blaze 2 5G ಸ್ಮಾರ್ಟ್ಫೋನ್ ಫ್ಲಾಟ್ ಫ್ರೇಮ್, ಫ್ಲಾಟ್ ಎಡ್ಜ್‌ಗಳು ಮತ್ತು ಸ್ಯಾಮ್‌ಸಂಗ್‌ನ ಇತ್ತೀಚಿನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಹೋಲುವ ಎತ್ತರದ ಕ್ಯಾಮೆರಾ ಮಾಡ್ಯೂಲ್. ಇದರ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಲೆನ್ಸ್‌ಗಳಿವೆ ಮತ್ತು ಮೂರನೇ ಮುಂಚಾಚಿರುವಿಕೆ LED ಫ್ಲ್ಯಾಷ್ ಅನ್ನು ಹೊಂದಿದೆ. ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಸೌಲಭ್ಯವಿದೆ. ಇದರ ಹೊರತಾಗಿ ಮುಕುಲ್ ಸ್ಮಾರ್ಟ್ಫೋನ್ ಕೆಲವು ಪ್ರಮುಖ ಫೀಚರ್ಗಳು ಮತ್ತು ಬೆಲೆಯನ್ನು ಸಹ ಬಹಿರಂಗಪಡಿಸಲಾಗಿದೆ. ಟ್ವೀಟ್ ಪ್ರಕಾರ ಸ್ಟಾರ್ಮ್ 5G ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಿಂದ ಚಾಲಿತವಾಗುವ ನಿರೀಕ್ಷೆಗಳಿವೆ.
Lava Blaze 2 5G ಸ್ಮಾರ್ಟ್ಫೋನ್ 6.56 ಇಂಚಿನ HD+ (720×1,600 ಪಿಕ್ಸೆಲ್‌ಗಳು) ಡಿಸ್‌ಪ್ಲೇಯೊಂದಿಗೆ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ನೊಂದಿಗೆ ಲೇಟೆಸ್ಟ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 6GB RAM ವರೆಗೆ ಇರುತ್ತದೆ. ಇದು 50MP ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಇದು ಸ್ಕ್ರೀನ್ ಫ್ಲ್ಯಾಷ್‌ನೊಂದಿಗೆ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಗಳಿವೆ. ಫೋನ್ 128GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು 1TB ವರೆಗೆ ಹೆಚ್ಚುವರಿಯಾಗಿ ವಿಸ್ತರಿಸಬಹುದು. ಇದು 18W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಮುಂಬರಲಿರುವ 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಫೋನ್ 6GB RAM ಮತ್ತು 128GB ಸ್ಟೋರೇಜ್ ಕ್ರಮವಾಗಿ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಹೊಂದುವ ನಿರೀಕ್ಷೆಗಳಿವೆ. ಅಲ್ಲದೆ Lava Blaze 2 5G ಸ್ಮಾರ್ಟ್ಫೋನ್ ನಿಮಗೆ ಅಮೆಜಾನ್ ಇಂಡಿಯಾದ ಮೂಲಕ ಖರೀದಿಗೆ ಲಭ್ಯವಾಗಲು ಈಗಾಗಲೇ ಘೋಷಿಸಿದೆ. ಇದರ ಬೆಲೆಯನ್ನು ಸುಮಾರು 14,999 ರೂಗಳಿಂದ ಆರಂಭವಾಗುವ ನಿರೀಕ್ಷೆಗಳಿವೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ