Lava Blaze Curve 5G ಭಾರತದಲ್ಲಿ ಬಿಡುಗಡೆ! ಖರೀದಿಸುವ ಮುಂಚೆ ಬೆಲೆಯೊಂದಿಗೆ ಟಾಪ್ 5 ಫೀಚರ್ ತಿಳಿಯಿರಿ
Lava Blaze Curve 5G ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾ ಮತ್ತು 3D ಕರ್ವ್ ಡಿಸೈನಿಂಗ್‌ನೊಂದಿಗೆ ಬಿಡುಗಡೆ
Lava Blaze Curve 5G ಫ್ಲ್ಯಾಷ್‌ನೊಂದಿಗೆ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Lava Blaze Curve 5G ಸ್ಮಾರ್ಟ್ಫೋನ್ 8GB LPDDR 5 RAM ಮತ್ತು 256GB ವರೆಗಿನ UFS 3.1 ಸ್ಟೋರೇಜ್ ಹೊಂದಿದೆ.
ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ ಇಂದು ಭಾರತದಲ್ಲಿ ತನ್ನ ಲೇಟೆಸ್ಟ್ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಆಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯನ್ನು ಮರಳು ಮಾಡುತ್ತಿದೆ. ಕಂಪನಿಯು ಭಾರತದಲ್ಲಿ Lava Blaze Curve 5G ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಅದರ ಬಜೆಟ್‌ನಲ್ಲಿ ಕರ್ವ್ ಡಿಸ್ಪ್ಲೇನೊಂದಿಗೆ ಬರುತ್ತದೆ. ಈ ಬಜೆಟ್‌ನಲ್ಲಿ ಕರ್ವ್ ಸ್ಕ್ರೀನ್‌ನೊಂದಿಗೆ ನೀವು ಕೆಲವೇ ಕೆಲವು ಆಯ್ಕೆಗಳನ್ನು ಕಾಣಬಹುದು. ದೇಶಿಯ ಕಂಪನಿ ಲಾವಾ (Lava) ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕಂಪನಿಯು 20,000 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಕರ್ವ್ಡ್ AMOLED ಡಿಸ್ಪ್ಲೇ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಿದೆ.
Also Read: ನಿಮ್ಮ Aadhaar Card ಬೇರೆಯವರ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿದ್ಯಾ? ಈ ರೀತಿ ನಿಮಿಷಗಳಲ್ಲಿ ಪರಿಶೀಲಿಸಿ!
Lava Blaze Curve 5G ಡಿಸ್ಪ್ಲೇ ಡೀಟೇಲ್ಸ್
ಸ್ಮಾರ್ಟ್ಫೋನ್ ಉತ್ತಮವಾದ ವಿಷಯವೆಂದರೆ 6.67 ಇಂಚಿನ ಪೂರ್ಣ HD+ AMOLED ಪ್ಯಾನೆಲ್ ಅನ್ನು 120Hz ರಿಫ್ರೆಶ್ ರೇಟ್‌ಗೆ ಮತ್ತು 800 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ 3D ಕರ್ವ್ ಡಿಸೈನಿಂಗ್ ಜೊತೆಗೆ ಎಲ್ಲವೂ ನಿಜವಾಗಿಯೂ ನಯವಾದ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಫೋನ್ ತನ್ನ ಗಾಜಿನ ಹಿಂಭಾಗದ ವಿನ್ಯಾಸದೊಂದಿಗೆ ನಿಜವಾಗಿಯೂ ಸೊಗಸಾದವಾಗಿ ಕಾಣುತ್ತದೆ. ಆಸಕ್ತರು ಈ ಸ್ಮಾರ್ಟ್ಫೋನ್ ಅನ್ನು ಐರನ್ ಗ್ಲಾಸ್ ಮತ್ತು ವಿರಿಡಿಯನ್ ಗ್ಲಾಸ್ ಎಂಬ ಎರಡು ಬಣ್ಣಗಳಲ್ಲಿ ಖರೀದಿಸಬಹುದು.
Lava Blaze Curve 5G ಕ್ಯಾಮೆರಾ ಡೀಟೇಲ್ಸ್
ಲಾವಾ ಬ್ಲೇಜ್ ಕರ್ವ್ 5G ಎಲ್ಇಡಿ ಫ್ಲ್ಯಾಷ್ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಬದಿಯ ಕ್ಯಾಮೆರಾ ಸೆಟಪ್ 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಜೊತೆಗೆ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸೋಯೇ ಅನ್ನು ನೀಡಲಾಗಿದೆ. ಸ್ಮಾರ್ಟ್ಫೋ ಕರ್ವ್ ಡಿಸ್ಪ್ಲೇಯಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಫ್ಲ್ಯಾಷ್‌ನೊಂದಿಗೆ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Lava ಬ್ಲೇಜ್ Curve 5G ಹಾರ್ಡ್ವೇರ್ ಡೀಟೇಲ್ಸ್
Lava Blaze Curve 5G ಸ್ಮಾರ್ಟ್ಫೋನ್ ಲೇಟೆಸ್ಟ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 2 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ಗಳನ್ನು ಮತ್ತು 3 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಸ್ವೀಕರಿಸಲು ಖಾತರಿಪಡಿಸಲಾಗಿದೆ. ಲಾವಾದ ಇತ್ತೀಚಿನ ಮಿಡ್-ರೇಂಜರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ. ಜೊತೆಗೆ 8GB ಯ LPDDR 5 RAM ಮತ್ತು 256GB ವರೆಗಿನ UFS 3.1 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. Antutu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚಿಪ್‌ಸೆಟ್ 5,70,000 ಕ್ಕಿಂತ ಹೆಚ್ಚು ಸ್ಕೋರ್ ಮಾಡಿದೆ. ಇದರ ವರ್ಚುವಲ್ RAM ವೈಶಿಷ್ಟ್ಯದ ಮೂಲಕ ಆನ್‌ಬೋರ್ಡ್ ಸ್ಟೋರೇಜ್ ಅನ್ನು 16GB ವರೆಗೆ ವಿಸ್ತರಿಸಬಹುದು.
Lava Blaze ಕರ್ವ್ 5G ಬ್ಯಾಟರಿ ಮತ್ತು ಸೆನ್ಸರ್
ಇದು Dolby Atmos ನಿಂದ ನಡೆಸಲ್ಪಡುವ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದಲ್ಲದೆ ಲಾವಾ ದೃಢೀಕರಣಕ್ಕಾಗಿ ಹ್ಯಾಂಡ್‌ಸೆಟ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಹೊಂದಿದೆ. ಇದು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಲಾವಾ ಬ್ಲೇಜ್ ಕರ್ವ್ 5G ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 33W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಇದು ಸುಮಾರು 83 ನಿಮಿಷಗಳಲ್ಲಿ 0-100 ರಿಂದ ಸ್ಮಾರ್ಟ್ಫೋನ್ ತೆಗೆದುಕೊಳ್ಳುವ 5000mAh ಲಿಥಿಯಂ-ಪಾಲಿಮರ್ ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಭಾರತದಲ್ಲಿ Lava Blaze Curve 5G ಬೆಲೆ:
Lava Blaze Curve 5G ಸ್ಮಾರ್ಟ್ಫೋನ್ ಬೆಲೆ ನೋಡುವುದಾದರೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ₹17,999 ರೂಗಳಾಗಿದ್ದು ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ₹18,999 ರೂಗಳಿಗೆ ಖರೀದಿಯಬಹುದು. ಸ್ಮಾರ್ಟ್ಫೋನ್ ಮೊದಲ ಸೇಲ್ 11ನೇ ಮಾರ್ಚ್ 2024 ರಿಂದ ಅಮೆಜಾನ್ ಮತ್ತು ಲಾವಾ ವೆಬ್‌ಸೈಟ್ ಮತ್ತು ಕೆಲವು ರಿಟೇಲ್ ಔಟ್‌ಲೆಟ್‌ಗಳಿಂದ ಆರ್ಡರ್ ಮಾಡಲು ಸ್ಮಾರ್ಟ್‌ಫೋನ್ ಲಭ್ಯವಿರುತ್ತದೆ. ಲಾವಾದ ಇತ್ತೀಚಿನ ಸ್ಮಾರ್ಟ್‌ಫೋನ್ ಐರನ್ ಗ್ಲಾಸ್ ಮತ್ತು ವಿರಿಡಿಯನ್ ಗ್ಲಾಸ್ ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile