Curved ಡಿಸ್ಪ್ಲೇ ಮತ್ತು 64MP ಕ್ಯಾಮೆರಾದ Lava Blaze X 5G ಅತಿ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟ!
Curved ಡಿಸ್ಪ್ಲೇ ಮತ್ತು 64MP ಕ್ಯಾಮೆರಾದ ಸ್ಮಾರ್ಟ್ಫೋನ್ ಅನ್ನುವ ಪಟ್ಟಿಗೆ ಈ Lava Blaze X 5G ಸೇರಿಕೊಂಡಿದೆ.
ಈ ಬೆಲೆಗೆ ಪೂರ್ತಿ ಮಾರುಕಟ್ಟೆಯಲ್ಲಿ ಬೇರೆ ಯಾರು ನೀಡದ ಲೇಟೆಸ್ಟ್ ಫೀಚರ್ ಮತ್ತು ಆಫರ್ಗಳನ್ನು ಲಾವಾ ನೀಡುತ್ತಿದೆ.
ಇಂದು 22ನೇ ಜೂಲೈ 2024 ರಿಂದ ಎರಡು ದಿನಗಳಿಗೆ ಮಾತ್ರ ಬಿಡುಗಡೆಯಾದ ಕೊಡುಗೆಯಾಗಿ 1000 ರೂಗಳನ್ನು ಡಿಸ್ಕೌಂಟ್ ನೀಡುತ್ತಿದೆ.
ಭಾರತದ ಜನಪ್ರಿಯ ಸ್ವದೇಶಿ ಕಂಪನಿಯಾಗಿರುವ ಲಾವಾ (Lava) ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಎರಡು ದಿನಗಳ ಹಿಂದೆ ಬಿಡುಗಡೆಗೊಳಿಸಿದ್ದು ಇದನ್ನು ಭಾರತದಲ್ಲಿ ಅತಿ ಕಡಿಮೆ ಬೆಲೆಗೆ Curved ಡಿಸ್ಪ್ಲೇ ಮತ್ತು 64MP ಕ್ಯಾಮೆರಾದ ಸ್ಮಾರ್ಟ್ಫೋನ್ ಅನ್ನುವ ಪಟ್ಟಿಗೆ ಈ Lava Blaze X 5G ಸೇರಿಕೊಂಡಿದೆ. ಯಾಕೆಂದರೆ ಈ ಬೆಲೆಗೆ ಪೂರ್ತಿ ಮಾರುಕಟ್ಟೆಯಲ್ಲಿ ಬೇರೆ ಯಾರು ನೀಡದ ಲೇಟೆಸ್ಟ್ ಫೀಚರ್ ಮತ್ತು ಆಫರ್ಗಳನ್ನು ಲಾವಾ ನೀಡುತ್ತಿದೆ. ಅಲ್ಲದೆ ಸ್ಮಾರ್ಟ್ಫೋನ್ ಇಂದು 22ನೇ ಜೂಲೈ 2024 ರಿಂದ ಎರಡು ದಿನಗಳಿಗೆ ಮಾತ್ರ ಬಿಡುಗಡೆಯಾದ ಕೊಡುಗೆಯಾಗಿ 1000 ರೂಗಳನ್ನು ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಬಹುದು.
Also Read: ಅಮೆಜಾನ್ Prime Day ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಲೇಟೆಸ್ಟ್ Smart Watch ಮೇಲೆ ಭಾರಿ ಆಫರ್ಗಳು ಲಭ್ಯ!
ಭಾರತದಲ್ಲಿ Lava Blaze X 5G ಬೆಲೆ ಮತ್ತು ಆಫರ್ಗಳೇನು?
ಅತಿ ಕಡಿಮೆ ಬೆಲೆಗೆ ಲಾವಾ ಸ್ಮಾರ್ಟ್ಫೋನ್ ಇಂದಿನಿಂದ ಖರೀದಿಗೆ ಲಭ್ಯವಿದ್ದು ಇದನ್ನು ಬಿಡುಗಡೆಯ ಕೊಡುಗೆಯಾಗಿ ನೀವು ಯಾವುದೇ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ ಬರೋಬ್ಬರಿ 1000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಆದರೆ ಗಮನದಲ್ಲಿರಲಿ ಇದು ಲಿಮಿಟೆಡ್ ಅವಧಿಯ ಆಫರ್ ಆಗಿದ್ದು ಇಂದಿನಿಂದ 24ನೇ ಜೂಲೈ 2024 ಮಧ್ಯರಾತ್ರಿವಗೆರೆ ಪಡೆಯಬಹುದು. ಅಲ್ಲದೆ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ರೂಪಾಂತರದಲ್ಲಿ ಬಿಡುಗಡೆಯಾಗಿದ್ದು ಪ್ರತಿಯೊಂದು ವೇರಿಯೆಂಟ್ ಕೇವಲ 1000 ರೂಗಳ ವ್ಯತ್ಯಾಸದಲ್ಲಿ ಲಭ್ಯವಿದೆ. ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಸ್ಮಾರ್ಟ್ಫೋನ್ ಕೇವಲ 14,999 ರೂಗಳಿಗೆ ಲಭ್ಯವಿದ್ದು ಬ್ಯಾಂಕ್ ಆಫರ್ ನಂತರ ಇದನ್ನು 13,999 ರೂಗಳಿಗೆ ಖರೀದಿಸಬಹುದು.
ಲಾವಾ Blaze X 5G ಫೀಚರ್ ಮತ್ತು ವಿಶೇಷತೆಗಳೇನು?
Lava Blaze X 5G ಸ್ಮಾರ್ಟ್ಫೋನ್ 6.67 ಇಂಚಿನ ಪೂರ್ಣ HD+ ಕರ್ವ್ AMOLED ಸ್ಕ್ರೀನ್ ಅನ್ನು 120Hz ರಿಫ್ರೆಶ್ ದರ ಮತ್ತು 800 nits ಗರಿಷ್ಠ ಹೊಳಪನ್ನು ಹೊಂದಿದೆ. ಇದರ ಉತ್ತಮ ವೀಕ್ಷಣೆ ಗುಣಮಟ್ಟಕ್ಕಾಗಿ HDR 10+ ಅನ್ನು ಬೆಂಬಲಿಸುತ್ತದೆ. ಬಯೋಮೆಟ್ರಿಕ್ಸ್‌ಗಾಗಿ ಸ್ಮಾರ್ಟ್ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ಸೋನಿ ಸೆನ್ಸರ್‌ನೊಂದಿಗೆ 64MP ಪ್ರೈಮರಿ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಸೆಲ್ಫಿಗಳಿಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಅಲ್ಲದೆ 2.4GHz ನಲ್ಲಿ 2x ಕಾರ್ಟೆಕ್ಸ್-A76 ಕೋರ್‌ಗಳು ಮತ್ತು 2GHz ನಲ್ಲಿ 6x ಕಾರ್ಟೆಕ್ಸ್-A55 ಕೋರ್‌ಗಳು, ಆರ್ಮ್ ಮಾಲಿ-G57 MC2 GPU ನೊಂದಿಗೆ ಜೋಡಿಯಾಗಿವೆ. Blaze X ಮೂರು RAM ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿನ ಎಲ್ಲ ರೂಪಾಂತರಗಳು UFS 2.2 ಸ್ಟೋರೇಜ್ ಸಪೋರ್ಟ್ ಮಾಡುತ್ತವೆ. ಅಲ್ಲದೆ ಈ ಸ್ಮಾರ್ಟ್ಫೋನ್ 5G, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್ 5.3, ಮತ್ತು GPS/GLONASS/Beidou ಸೇರಿದಂತೆ ವಿವಿಧ ಸಂಪರ್ಕ ಆಯ್ಕೆಗಳನ್ನು ಬೆಂಬಲಿಸುತ್ತದೆ ಮತ್ತು 33W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯಿಂದ ಚಾಲಿತವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile