50MP ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನ LAVA Blaze Pro 5G ಸದ್ದಿಲ್ಲದೇ ಬಿಡುಗಡೆ | Tech News

Updated on 27-Sep-2023

ಭಾರತದ ಅತಿ ಹೆಚ್ಚು ಭರವಸೆಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ (Lava) ಸದ್ದಿಲ್ಲದೇ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ ಬ್ಲೇಜ್ (Blaze) ಸರಣಿಯ ಅಡಿಯಲ್ಲಿ ತನ್ನ 5G ಸ್ಮಾರ್ಟ್‌ಫೋನ್ Lava Blaze Pro 5G ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ ಅನ್ನು ಹೊಂದಿದೆ. ಕಂಪನಿಯ ಪ್ರಕಾರ LAVA Blaze Pro 5G ಉತ್ತಮ ಕಾರ್ಯಕ್ಷಮತೆ ಮತ್ತು ಬಳಕೆದಾರರ ಅನುಭವದ ವಿಷಯದಲ್ಲಿ ಸಂತುಷ್ಟಿಯನ್ನು ನೀಡುವ ಬೆಸ್ಟ್ 5G ಎಂದು ಹೇಳಿತ್ತದೆ. Lava Blaze Pro 5G ಸ್ಮಾರ್ಟ್ಫೋನ್ 6.78 ಇಂಚಿನ FHD+ ಡಿಸ್ಪ್ಲೇ ಜೊತೆಗೆ ಪಂಚ್ ಹೋಲ್ ವಿನ್ಯಾಸ ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಫೇಸ್ ಅನ್‌ಲಾಕ್ ಮತ್ತು ಸೈಡ್ ಫಿಂಗರ್ ಸೆನ್ಸಾರ್‌ನಂತಹ ಕೆಲವು ಸೆಕ್ಯುರಿಟಿ ಫೀಚರ್ಳೊಂದಿಗೆ ಬರುತ್ತದೆ.

LAVA Blaze Pro 5G ಕ್ಯಾಮೆರಾ ವಿವರಗಳು

ಇದು 50MP ಮುಖ್ಯ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸಿಸ್ಟಮ್ ಹೊಂದಿದೆ. ಫಿಲ್ಮ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಯುಹೆಚ್‌ಡಿ, ಜಿಫ್, ಬ್ಯೂಟಿ, ಎಚ್‌ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ, ಫಿಲ್ಟರ್‌ಗಳು ಮತ್ತು ಇಂಟೆಲಿಜೆಂಟ್ ಸ್ಕ್ಯಾನಿಂಗ್ ಸೇರಿದಂತೆ ಹಲವಾರು ಶೂಟಿಂಗ್ ಮೋಡ್‌ಗಳನ್ನು ಕ್ಯಾಮೆರಾ ನೀಡುತ್ತದೆ. ವೀಡಿಯೊಗಳಿಗಾಗಿ ಬ್ಲೇಜ್ ಪ್ರೊ 5G ಸುಗಮ ರೆಕಾರ್ಡಿಂಗ್‌ಗಾಗಿ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಜೊತೆಗೆ 2K ಬೆಂಬಲದೊಂದಿಗೆ ಬರುತ್ತದೆ.

LAVA Blaze Pro 5G launched in India 2023 – Digit

LAVA Blaze Pro 5G ಹಾರ್ಡ್ವೇರ್ ವಿವರಗಳು

Lava Blaze Pro 5G ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನೊಂದಿಗೆ ಬರುತ್ತದೆ. 128GB ಇಂಟರ್ನಲ್ ಸ್ಟೋರೇಜ್ ಮತ್ತು 8GB ವಿಸ್ತರಿಸಬಹುದಾದ RAM ಜೊತೆಗೆ ಆಂಡ್ರಾಯ್ಡ್ 13 ಅನ್ನು ಹೊಂದಿದೆ. ಇದರಲ್ಲಿ ಪವರ್ ತುಂಬಲು ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ನಿಮಗೆ ಹೆಚ್ಚುವರಿಯಾಗಿ ಸೇರಿಸಿದ ಗೌಪ್ಯತೆಗಾಗಿ ಇದು ಸ್ವಯಂ ಕರೆ ರೆಕಾರ್ಡಿಂಗ್ ಅನ್ನು ನೀಡುತ್ತದೆ. ಲಾವಾ ಮನೆಯಲ್ಲಿ ರಿಪೇರಿ ಮಾಡುವ ಉಚಿತ ಸೇವೆಯನ್ನು ಸಹ ನೀಡುತ್ತಿದೆ. ಇದರಲ್ಲಿ ಇದು ವಾರಂಟಿ ಅಡಿಯಲ್ಲಿ ಲಾವಾ ಫೋನ್‌ಗಳಿಗೆ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತದೆ.

ಭಾರತದಲ್ಲಿ Lava Blaze Pro 5G ಬೆಲೆ

ಲಾವಾದ ಈ ಲೇಟೆಸ್ಟ್ Lava Blaze Pro 5G ಸ್ಮಾರ್ಟ್ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮಾದರಿಗೆ ಭಾರತದಲ್ಲಿ ಕೇವಲ 12,499 ರೂಗಳಲ್ಲಿ ಪರಿಚಯಿಸಿದೆ. ಫೋನ್ ಬಣ್ಣವನ್ನು ಬದಲಾಯಿಸುವ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು ಫೋನ್ ನಿಮಗೆ ಸ್ಟಾರಿ ನೈಟ್ ಮತ್ತು ರೇಡಿಯಂಟ್ ಪರ್ಲ್ ಎರಡು ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. Lava Blaze Pro 5G ಸ್ಮಾರ್ಟ್ಫೋನ್ ಅನ್ನು ನೀವು ಅಕ್ಟೋಬರ್ 3 ರಿಂದ ಲಾವಾದ ಸ್ಟೋರ್ ಮತ್ತು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಾದ್ಯಂತ ಖರೀದಿಗೆ ಲಭ್ಯವಾಗಲಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :