Lava Blaze Duo 5G launched in India: ಭಾರತದಲ್ಲಿ ಸ್ವದೇಶಿಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ (Lava) ತನ್ನ ಲೇಟೆಸ್ಟ್ Lava Blaze Duo 5G ಸ್ಮಾರ್ಟ್ಫೋನ್ ಡ್ಯುಯಲ್ ಡಿಸ್ಪ್ಲೇಯೊಂದಿಗೆ ಅಧಿಕೃತವಾಗಿ 16ನೇ ಡಿಸೆಂಬರ್ 2024 ರಂದು ಬಿಡುಗಡೆಗಡೆಗೊಳಿಸಿದೆ. ಈ Lava Blaze Duo 5G ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಕೇವಲ ₹14,999 ರೂಗಳಿಗೆ ಬಿಡುಗಡೆಯಾಗಿದೆ. ಈ 3D Curved AMOLED ಡಿಸ್ಪ್ಲೇಯ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ನೀವು ಅಮೆಜಾನ್ ಮೂಲಕ 20ನೇ ಡಿಸೆಂಬರ್ 2024 ರಂದು ಮೊದಲ ಮಾರಾಟಕ್ಕೆ ಬರಲಿದೆ. Lava Blaze Duo 5G ಸ್ಮಾರ್ಟ್ಫೋನ್ ಈ ವರ್ಷದ ಕೊನೆ ಸ್ಮಾರ್ಟ್ಫೋನ್ ಆಗಿದೆ ಎನ್ನುವುದು ಗಮನಿಸಬಹುದು.
ಈ ಲೇಟೆಸ್ಟ್ Lava Blaze Duo 5G ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಮೊದಲನೆಯದು 6GB RAM ಜೊತೆಗೆ 128GB ಸ್ಟೋರೇಜ್ ಇದರ ಬೆಲೆ 14,999 ರೂಗಳಾಗಿದ್ದು ಇದರ ಕ್ರಮವಾಗಿ 8GB RAM ಜೊತೆಗೆ 128GB ಸ್ಟೋರೇಜ್ ಇದರ ಬೆಲೆ 15,999 ರೂಗಳಾಗಿವೆ. ಆದರೆ ಹೆಚ್ಚುವರಿಯಾಗಿ HDFC ಬ್ಯಾಂಕ್ ಕಾರ್ಡ್ ಬಳಕೆದಾರರು ಫ್ಲಾಟ್ ರೂ 2,000 ರಿಯಾಯಿತಿಯನ್ನು ಪಡೆಯುತ್ತಾರೆ. ಅಮೆಜಾನ್ ಮೂಲಕ 20ನೇ ಡಿಸೆಂಬರ್ 2024 ರಂದು ಮೊದಲ ಮಾರಾಟಕ್ಕೆ ಬರಲಿದೆ.
Lava Blaze Duo 5G ಸ್ಮಾರ್ಟ್ಫೋನ್ 2K ರೆಸಲ್ಯೂಶನ್‌ನೊಂದಿಗೆ 6.67ಇಂಚಿನ ಪ್ರೈಮರಿ 3D Curved AMOLED ಡಿಸ್ಟ್ರೇಯನ್ನು 1080 x 2400 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ ಹೊಂದಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. Lava Blaze Duo 5G ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಜೊತೆಗೆ 64MP ಪ್ರೈಮರಿ ಕ್ಯಾಮೆರಾ ಮತ್ತು 8MP ಲೆನ್ಸ್ ಹೊಂದಿದೆ. ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ.
Also Read: Passport: ಆನ್‌ಲೈನ್ ಮೂಲಕ ಹೊಸ ಪಾಸ್‌ಪೋರ್ಟ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ ಸಾಕು! ಮನೆಗೆ ಬಂದು ಸೇರುತ್ತೆ!
ಈ ಸ್ಮಾರ್ಟ್ಫೋನ್ ಹ್ಯಾಂಡ್‌ಸೆಟ್‌ನ ಸುರಕ್ಷತೆಗಾಗಿ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಜೊತೆಗೆ ಬರುತ್ತದೆ. ಸ್ಮಾರ್ಟ್ರೋನ್ MediaTek Dimensity 7025 ಪ್ರೊಸೆಸರ್ನೊಂದಿಗೆ ಬರುತ್ತದೆ. ಆಂಡ್ರಾಯ್ಡ್ 14 ಆಧಾರಿತ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. Lava Blaze Duo 5G ಸ್ಮಾರ್ಟ್ಫೋನ್ ಪವರ್ ಮಾಡಲು 5000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 33W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. Lava Blaze Duo 5G ಸ್ಮಾರ್ಟ್ಫೋನ್ ಟೈಪ್-ಸಿ ಪೋರ್ಟ್, ವೈ-ಫೈ 7 ಮತ್ತು ಎನ್‌ಎಫ್‌ಸಿ ಬೆಂಬಲದೊಂದಿಗೆ ಬರುತ್ತದೆ.