Lava Blaze Curve 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಗೆ ಸಿದ್ದ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Lava Blaze Curve 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಗೆ ಸಿದ್ದ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಮುಂಬರಲಿರುವ Lava Blaze Curve 5G ಸ್ಮಾರ್ಟ್ಫೋನ್ 5ನೇ ಮಾರ್ಚ್ 2024 ರಂದು ಅಧಿಕೃತವಾಗಿ ಬಿಡುಗಡೆಗೆ ಸಜ್ಜು.

Lava Blaze Curve 5G ಸ್ಮಾರ್ಟ್ಫೋನ್ ಸೋಶಿಯಲ್ ಮೀಡಿಯಾ ಚಾನಲ್‌ಗಳಲ್ಲಿ ಲೈವ್‌ಸ್ಟ್ರೀಮ್ ಮೂಲಕ ಬಿಡುಗಡೆಯಾಗಲಿದೆ.

Lava Blaze Curve 5G ಸ್ಮಾರ್ಟ್ಫೋನ್ AMOLED ಕರ್ವ್ ಡಿಸ್ಪ್ಲೇ ಮತ್ತು 50MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಲಿದೆ.

ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ಲಾವಾ (Lava) ಭಾರತದಲ್ಲಿ ತನ್ನ ಮುಂಬರಲಿರುವ Lava Blaze Curve 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿ ಈ ಬಾರಿ ಡಿಸ್ಪ್ಲೇಯಲ್ಲಿ ಹೆಚ್ಚು ಆಕರ್ಷಕ ಮತ್ತು ಹೆಚ್ಚು ಜನರು ಇಷ್ಟಪಡುವ ಕರ್ವ್ ಡಿಸ್ಪ್ಲೇಯೊಂದಿಗೆ ಲೇಟೆಸ್ಟ್ ಫೀಚರ್ಸ್‌ಗಳನ್ನು ನೀಡುವುದಾಗಿ ನಿರೀಕ್ಷಿಸಲಾಗಿದೆ. ಸ್ಮಾರ್ಟ್ಫೋನ್ ಬಗ್ಗೆ ಈಗಾಗಲೇ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಾಕಷ್ಟು ಫೀಚರ್‌ಗಳನ್ನು ನೀಡಿದ್ದು ಇದರ ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತ್ರ ಇನ್ನು ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಮೂಲಕ ನಾಳೆ ಅಂದ್ರೆ 5ನೇ ಮಾರ್ಚ್ 2024 ರಂದು ಬಿಡುಗಡೆಯಾಗಲಿರುವ Lava Blaze Curve 5G ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯೋಣ.

Also Read: 84 ದಿನಗಳಿಗೆ Unlimited ಕರೆ ಮತ್ತು 5G ಡೇಟಾದೊಂದಿಗೆ Amazon Prime ನೀಡುವ Airtel ಬೆಸ್ಟ್ ಪ್ಲಾನ್!

Lava Blaze Curve 5G ಬಿಡುಗಡೆ ಮತ್ತು ನಿರೀಕ್ಷಿತ ಬೆಲೆ

ಲಾವಾ (Lava) ಭಾರತದಲ್ಲಿ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ 5ನೇ ಮಾರ್ಚ್ 2024 ರಂದು ಲಕ್ಷದ್ವೀಪದಿಂದ ಮಧ್ಯಾಹ್ನ 12:00pm ಗಂಟೆಗೆ IST ಕಂಪನಿಯು ತನ್ನ ಸೋಶಿಯಲ್ ಮೀಡಿಯಾ ಚಾನಲ್‌ಗಳಲ್ಲಿ ಈ ಬಿಡುಗಡೆಯನ್ನು ಲೈವ್‌ಸ್ಟ್ರೀಮ್ ಪ್ರಾರಂಭಿಸುವುದಾಗಿ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ Lava Blaze Curve 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತಾನಾಡುವುದಾದರೆ ಫೋನ್ ಒಟ್ಟು 2 ರೂಪಾಂತರಗಳಲ್ಲಿ ಬರುವ ನಿರೀಕ್ಷೆಗಳಿದ್ದು 8GB RAM ಮತ್ತು 128GB ಸ್ಟೋರೇಜ್ ಸುಮಾರು 16,999 ರೂಗಳಿಗೆ ಮತ್ತೊಂದು ಅದೇ 8GB RAM ಮತ್ತು 256GB ಸ್ಟೋರೇಜ್ ಸುಮಾರು 18,999 ರೂಗಳಿಗೆ ಬರುವ ನಿರೀಕ್ಷೆಗಳಿವೆ. ಅಂದ್ರೆ ಒಟ್ಟಾರೆಯಾಗಿ ಈ ಮುಂಬರಲಿರುವ Lava Blaze Curve 5G ಸ್ಮಾರ್ಟ್ಫೋನ್ ಸುಮಾರು 20,000 ರೂಗಳೊಳಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ.

ಲಾವಾ Blaze Curve 5G ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು

ಭಾರತದಲ್ಲಿ ಈ ಮುಂಬರಲಿರುವ ಸ್ಮಾರ್ಟ್ಫೋನ್ 6.67 ಇಂಚಿನ ಕರ್ವ್ AMOLED ಡಿಸ್ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಫೋನ್ 120Hz ರಿಫ್ರೆಶ್ ದರವನ್ನು ಸಹ ಹೊಂದಿರುತ್ತದೆ. ಇದರೊಂದಿಗೆ Blaze Curve 5G ಬಾಗಿದ ಪ್ರದರ್ಶನದೊಂದಿಗೆ ಭಾರತದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದೆ. ಇದರ ಕ್ಯಾಮೆರಾ ಪ್ಯಾನೆಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಫೋನ್ 64MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿರುವ ನಿರೀಕ್ಷೆ. ಫೋನ್ ಡಿಸ್ಪ್ಲೇಯಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಮೆಗಾಪಿಕ್ಸೆಲ್ ಶೂಟರ್ ಹೊಂದಿರುವ ನಿರೀಕ್ಷೆ.

ಮುಂಬರುವ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಲಾವಾ ದೃಢಪಡಿಸಿದೆ. ಸ್ಮಾರ್ಟ್‌ಫೋನ್ LPDDR5 RAM ಮತ್ತು UFS 3.1 ಸ್ಟೋರೇಜ್‌ನೊಂದಿಗೆ ಬರುವುದಾಗಿ ಕಂಪನಿಯು ಹೇಳಿದೆ. ಕೊನೆಯದಾಗಿ ಸ್ಮಾರ್ಟ್ಫೋನ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿಸುವ ನಿರೀಕ್ಷೆಗಳಿವೆ. ಇದರ ಹೊರತಾಗಿ ಹ್ಯಾಂಡ್‌ಸೆಟ್ ಉತ್ತಮ ಸೌಂಡ್ ಅನುಭವಕ್ಕಾಗಿ Dolby Atmos ಆಡಿಯೋ ಅನ್ನು ಸಪೋರ್ಟ್ ಮಾಡುವುದರೊಂದಿಗೆ 5G ಮತ್ತು ಫಾಸ್ಟ್ Wi-Fi, ಬ್ಲೂಟೂತ್, USB ಟೈಪ್-ಸಿ ಪೋರ್ಟ್ ಮತ್ತು ಇತರ ಸಂಪರ್ಕ ಆಯ್ಕೆಗಳನ್ನು ಸಹ ಒಳಗೊಂಡಿರುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo