Lava Blaze 5G ಸ್ಮಾರ್ಫೋನ್ ಕೇವಲ ₹9999 ರೂಗಳಿಗೆ ಲಭ್ಯ! 5G ಫೋನ್ ಖರೀದಿಸಲು ಮುಗಿಬಿದ್ದ ಜನ!

Lava Blaze 5G ಸ್ಮಾರ್ಫೋನ್ ಕೇವಲ ₹9999 ರೂಗಳಿಗೆ ಲಭ್ಯ! 5G ಫೋನ್ ಖರೀದಿಸಲು ಮುಗಿಬಿದ್ದ ಜನ!
HIGHLIGHTS

ಭಾರತದ ಲಾವಾ ಕಂಪನಿ ತನ್ನ ಹೊಚ್ಚ ಹೊಸ Lava Blaze 5G ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

Lava Blaze 5G ಬಜೆಟ್ ಶ್ರೇಣಿಯ ಪ್ರಕಾರ ಸಾಕಷ್ಟು ಉತ್ತಮವಾದ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ 5G ಫೋನ್ ಆಗಿದೆ.

Lava Blaze 5G ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಈ ಸ್ಮಾರ್ಟ್ಫೋನ್ ಮೂಲಕ ಪಡೆಯಬಹುದಾಗಿದೆ.

Lava Blaze 5G: ಭಾರತದ ಲಾವಾ ಕಂಪನಿ ತನ್ನ ಹೊಚ್ಚ ಹೊಸ Lava Blaze 5G ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಅತಿ ಹೆಚ್ಚಾಗಿ ಸದ್ದು ಮಾಡುತ್ತಿದ್ದು ಮೊದಲ ಭಾರಿಗೆ ಯಾರ್ಯಾರಿಗೆ 5G ನೆಟ್ವರ್ಕ್ ಅನುಭವ ಪಡೆಯಬೇಕು ಎಂದುಕೊಂಡಿದ್ದರೋ ಅವರಗೆ ಕೇವಲ 10,000 ರೂಗಳೊಳಗೆ ಈ Lava Blaze 5G ಅನ್ನು ಬಿಡುಗಡೆಗೊಳಿಸಿದೆ. ಕೆಲವೇ ದಿನಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. Lava Blaze 5G ಬಜೆಟ್ ಶ್ರೇಣಿಯ ಪ್ರಕಾರ ಸಾಕಷ್ಟು ಉತ್ತಮವಾದ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ 5G ಫೋನ್ ಆಗಿದೆ. ಅಲ್ಲದೆ ನೀವು ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಈ ಸ್ಮಾರ್ಟ್ಫೋನ್ ಮೂಲಕ ಪಡೆಯಬಹುದಾಗಿದೆ.

Lava Blaze 5G ಡಿಸೈನ್ ಮತ್ತು ಡಿಸ್ಪ್ಲೇ:

ಈ Lava Blaze 5G ಫೋನ್‌ನ ಗ್ಲಾಸ್ ಗ್ರೀನ್ ಬಣ್ಣದ ರೂಪಾಂತರವನ್ನು ಹೊಂದಿದ್ದು ಬ್ಯಾಕ್ ಪ್ಯಾನೆಲ್ ನೋಡಲು ತುಂಬಾ ಚೆನ್ನಾಗಿದೆ. ಪ್ರೈಮರಿ ಕ್ಯಾಮೆರಾ ಬಂಪರ್ ಅನ್ನು ಒಳಗೊಂಡಿದೆ. ಲಾವಾ ಬ್ಲೇಜ್ 5G ಸ್ಮಾರ್ಟ್ಫೋನ್ ಎಡ್ಜ್ ಸ್ವಲ್ಪ ದೊಡ್ಡದಾಗಿದೆ. ನೋಡಲು ಒಟ್ಟಾರೆ ಉತ್ತಮವಾಗಿ ಕಾಣುತ್ತದೆ. ಲಾವಾ ಬ್ಲೇಜ್ 5G 6.5-ಇಂಚಿನ HD+ IPS LCD ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 90 Hz ನ ರಿಫ್ರೆಶ್ ದರವಿದೆ. ಬಜೆಟ್ ಪ್ರಕಾರ ಫೋನ್‌ನ ವೀಡಿಯೊ ಗುಣಮಟ್ಟ ಉತ್ತಮವಾಗಿದೆ. ನೀವು ಬಿಸಿಲಿನಲ್ಲಿ ಹೋದಾಗಲು ನಿಮ್ಮ ಫೋನ್‌ನ ಬ್ರೈಟ್‌ನೆಸ್ ಜಾಸ್ತಿ ಮಾಡುವ ಮೂಲಕ ಈ ಡಿಸ್ಪ್ಲೇಯಿಂದ ಉತ್ತಮವಾದ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ.

Lava Blaze 5G ಸಾಫ್ಟ್‌ವೇರ್ ಮತ್ತು ಗೇಮಿಂಗ್:

ಈ ಫೋನ್ MediaTek Dimensity 700 ಪ್ರೊಸೆಸರ್‌ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 4GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ನೀವು Lava Blaze 5G ಫೋನ್ ಅನ್ನು ಸರಾಸರಿಯಾಗಿ ಬಳಸಿದರೆ ಫೋನ್ ಕಾರ್ಯಕ್ಷಮತೆಯಲ್ಲಿ ಯಾವುದೇ ಇಳಿಕೆ ಕಂಡು ಬರುವುದಿಲ್ಲ. ನೀವು ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರಾಲ್ ಮಾಡಿದರೂ ಅಥವಾ ಅಪ್ಲಿಕೇಶನ್‌ಗಳನ್ನು ಬದಲಾಯಿಸಿದರೂ ನೀವು ಫೋನ್‌ನಲ್ಲಿ ಯಾವುದೇ ರೀತಿಯ ಹ್ಯಾಂಗ್ ಸಮಸ್ಯೆಯನ್ನು ಪಡೆಯುವುದಿಲ್ಲ. ಆದರೆ ನೀವು ಫೋನ್ ಅನ್ನು ಹೆಚ್ಚು ಬಳಸಿದರೆ ನಂತರ ಫೋನ್ ಹ್ಯಾಂಗ್ ಆಗಬಹುದು. ಈ ಸ್ಮಾರ್ಟ್‌ಫೋನ್ ನ ಸಾಫ್ಟ್‌ವೇರ್ ಬ್ಲೋಟ್‌ವೇರ್-ಫ್ರೀಯಾಗಿದ್ದು ಆಂಡ್ರಾಯ್ಡ್ 12 ಅನ್ನು ಇದರಲ್ಲಿ ನೀಡಲಾಗಿದೆ. ಇದರಲ್ಲಿ ಯಾವುದೇ ಯೂಸ್ ಲೆಸ್ ಅಪ್ಲಿಕೇಶನ್‌ಗಳು ಇರುವುದಿಲ್ಲ. ಇದರೊಂದಿಗೆ ಕಂಪನಿಯು ಶೀಘ್ರದಲ್ಲೇ ಈ ಫೋನ್‌ನಲ್ಲಿ ಆಂಡ್ರಾಯ್ಡ್ 13 ಅನ್ನು ಲಭ್ಯವಾಗುವಂತೆ ಮಾಡುತ್ತದೆ.

Lava Blaze 5G ಕ್ಯಾಮೆರಾ: 

Lava Blaze 5G ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆನ್ಸಾರ್ ನೀಡಲಾಗಿದೆ. ಫೋನ್‌ನ ಪ್ರೈಮರಿ ಸೆನ್ಸಾರ್ 50 ಮೆಗಾಪಿಕ್ಸೆಲ್‌ ಆಗಿದ್ದು ಇದರ ಸೆಕೆಂಡರಿ ಸೆನ್ಸಾರ್ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೆಯದು VGA ಕ್ಯಾಮೆರಾ ಆಗಿದೆ. ಬೆಳಗಿನ ವೇಳೆ ನೀವು ಫೋನ್‌ನಿಂದ ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದು. ಇನ್ನು ಕಡಿಮೆ ಬೆಳಕಿನಲ್ಲಿಯು ಸಹ ಈ ಫೋನ್‌ನಲ್ಲಿ ನೀವು ಯೋಗ್ಯವಾದ ಫೋಟೋಗಳನ್ನು ತೆಗೆದುಕೊಳ್ಳಬಹುದು. ಫೋನ್‌ನ ಮ್ಯಾಕ್ರೋ ಸೆನ್ಸರ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಸೆನ್ಸರ್ ನಿಂದ ನೀವು ಉತ್ತಮ ಮ್ಯಾಕ್ರೋ ಫೋಟೋಗಳನ್ನು ಪಡೆಯಬಹುದು. ಇನ್ನು ಪೋರ್ಟ್ರೇಟ್ ಮೋಡ್ ಬಗ್ಗೆ ಹೇಳುವುದಾದರೆ ಬಜೆಟ್ ಶ್ರೇಣಿಯ ಪ್ರಕಾರ ಇದರ ಕ್ಯಾಪ್ಚರ್‌ಗಳು ಸಹ ಉತ್ತಮವಾಗಿದೆ. ಫ್ರಂಟ್ ಕ್ಯಾಮೆರಾದಲ್ಲಿ ಸುಂದರವಾದ ಸೆಲ್ಫಿಗಳನ್ನು ಸಹ ಕ್ಲಿಕ್‌ಯಿಸಬಹುದಾಗಿದೆ.

Lava Blaze 5G ಬ್ಯಾಟರಿ:

Lava Blaze 5G ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ನೀವು ಫೋನ್‌ ಅನ್ನು ಸರಾಸರಿ ಬಳಕೆ ಮಾಡಿದರೆ ಒಂದೇ ಚಾರ್ಜ್‌ನಲ್ಲಿ ಫೋನ್‌ನ ಬ್ಯಾಟರಿಯು ಒಂದು ದಿನದವರೆಗೆ ಇರುತ್ತದೆ. ಅದೇ ಸಮಯದಲ್ಲಿ ನೀವು ಫೋನ್‌ ಅನ್ನು ಹೆಚ್ಚು ಬಳಕೆ ಮಾಡಿದರೆ ಇಡೀ ದಿನ ಬ್ಯಾಟರಿ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಫೋನ್‌ನ ಚಾರ್ಜಿಂಗ್ ಗುಣಮಟ್ಟ 0% ದಿಂದ 100% ಪ್ರತಿಶತದಷ್ಟು ಚಾರ್ಜ್ ಮಾಡಲು ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಫೋನ್‌ನ ಬೆಲೆ 9,999 ರೂ. ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಅಥವಾ ನಿಮ್ಮ ಪೋಷಕರಿಗೆ ಹೊಸ ಫೋನ್ ಅನ್ನು ಉಡುಗೊರೆಯಾಗಿ ನೀಡಲು ನೀವು ಬಯಸಿದರೆ ಮತ್ತು ನಿಮ್ಮ ಬಜೆಟ್ ಕೂಡ ಕಡಿಮೆಯಿದ್ದರೆ ನೀವು ಈ ಫೋನ್ ಅನ್ನು ಆಯ್ಕೆ ಮಾಡಬಹುದಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo