Lava Blaze 5G ಇಂದು Amazon ನಲ್ಲಿ ಮಾರಾಟವಾಗಲಿದೆ. ರೂ 1000 ವಿಶೇಷ ಬಿಡುಗಡೆ ದಿನದ ಕೊಡುಗೆ ರಿಯಾಯಿತಿ ಪಡೆಯಬವುದು. ಭಾರತದಲ್ಲಿ Lava Blaze 5G ಮಾರಾಟ: ಭಾರತದ ಅಗ್ಗದ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಮತ್ತು ಭಾರತೀಯ ಟೆಕ್ನಾಲಜಿ ಸ್ಮಾರ್ಟ್ಫೋನ್ ಸಂಸ್ಥೆಯಾದ Lava ಮೊಬೈಲ್ಸ್‌ನಿಂದ ಕೂಡ ಕರೆಯಲ್ಪಡುವ Lava Blaze 5G ಇಂದು Amazon ನಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಸಾಧನವು ಅಮೆಜಾನ್‌ನ ವಿಶೇಷ ಉತ್ಪನ್ನವಾಗಿದೆ. ಮತ್ತು ಸದ್ಯಕ್ಕೆ ಫ್ಲಿಪ್‌ಕಾರ್ಟ್ ಮತ್ತು ಸ್ನಾಪ್‌ಡೀಲ್ ಸೇರಿದಂತೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವುದಿಲ್ಲ.
ಇಂದು ಸ್ಮಾರ್ಟ್ಫೋನ್ ಮೊದಲ ಮಾರಾಟವಾಗಿದ್ದು ಬಿಡುಗಡೆ ದಿನದ ವಿಶೇಷ ಕೊಡುಗೆಯ ಭಾಗವಾಗಿ ಕಂಪನಿಯು ಸ್ಮಾರ್ಟ್ಫೋನ್ ಮೇಲೆ 1000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. "Blaze 5G ಮಾರಾಟವು ಇಂದು ಮಧ್ಯಾಹ್ನ 12 ಗಂಟೆಗೆ ಲೈವ್ ಆಗಿದೆ. Amazon ನಲ್ಲಿ ಮಾತ್ರ. ಬೆಲೆ: ರೂ. 10,999. ವಿಶೇಷ ಬಿಡುಗಡೆ ದಿನದ ಕೊಡುಗೆ: ರೂ. 9,999, ರೂಗಳಿಗೆ ಖರೀದಿಸಬವುದೆಂದು ಲಾವಾ ಮೊಬೈಲ್ಸ್ ಟ್ವೀಟ್‌ನಲ್ಲಿ ತಿಳಿಸಿದೆ.
https://twitter.com/LavaMobile/status/1592160752559087616?ref_src=twsrc%5Etfw
Lava Blaze 5G 7nm MediaTek ಡೈಮೆನ್ಸಿಟಿ 700 5G ಚಿಪ್‌ಸೆಟ್/ಪ್ರೊಸೆಸರ್‌ನಿಂದ ಚಾಲಿತವಾಗಿದೆ. Blaze 5G ಟ್ರಿಪಲ್ ಪ್ರೈಮರಿ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಮತ್ತು Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB RAM + 3GB ವರ್ಚುವಲ್ RAM ಮತ್ತು 128GB ಸ್ಟೋರೇಜ್ ಜೊತೆಗೆ ಬರುತ್ತದೆ. ಸ್ಮಾರ್ಟ್ಫೋನ್ 6.5 ಇಂಚಿನ HD+ IPS ಡಿಸ್ಪ್ಲೇಯನ್ನು ಹೊಂದಿದೆ. ಮತ್ತು 50MP ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳಿಗಾಗಿ 8MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ. ಮತ್ತು ಇದನ್ನು ಫೇಸ್ ಅನ್ಲಾಕ್ ಮಾಡಲು ಸಹ ಬಳಸಬಹುದು. Lava Blaze 5G 2k ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಸೌಂದರ್ಯ, HDR, ನೈಟ್, ಪ್ರೋಟ್ರೇಟ್, ಪನೋರಮಾ, ಸ್ಲೋ ಮೋಷನ್, ಮ್ಯಾಕ್ರೋ, AI, ಪ್ರೊ, UHD, ಫಿಲ್ಟರ್‌ಗಳು, GIF, ಟೈಮ್‌ಲ್ಯಾಪ್ಸ್ ಮತ್ತು QR ಸ್ಕ್ಯಾನರ್‌ನಂತಹ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತದೆ.