12GB RAM ಮತ್ತು 5000mAh ಬ್ಯಾಟರಿಯ Lava Blaze 3 5G ಕೇವಲ ₹9000 ರೂಗಳಿಗೆ ಲಭ್ಯ!

12GB RAM ಮತ್ತು 5000mAh ಬ್ಯಾಟರಿಯ Lava Blaze 3 5G ಕೇವಲ ₹9000 ರೂಗಳಿಗೆ ಲಭ್ಯ!
HIGHLIGHTS

Lava Blaze 3 5G ಸ್ಮಾರ್ಟ್ಫೋನ್ 6GB RAM ಕೇವಲ ₹9299 ರೂಗಳಿಗೆ ಲಭ್ಯವಿದೆ.

Lava Blaze 3 5G ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯೊಂದಿಗೆ ಬರುತ್ತದೆ.

Lava Blaze 3 5G ಸ್ಮಾರ್ಟ್ಫೋನ್ 50MP AI ಬ್ಯಾಕ್ ಮತ್ತು ಮುಂಭಾಗದಲ್ಲಿ ಸೇಲ್ಫಿಗಾಗಿ 8MP ಕ್ಯಾಮೆರಾದೊಂದಿಗೆ ಬರುತ್ತದೆ.

ಭಾರತದ ಜನಪ್ರಿಯ ಮತ್ತು ಸ್ವದೇಶಿ ಸ್ಮಾರ್ಟ್ಫೋನ್ ಬ್ರಾಂಡ್ Lava Blaze 3 5G ಸ್ಮಾರ್ಟ್ಫೋನ್ ಬರೋಬ್ಬರಿ 50MP AI ಬ್ಯಾಕ್ ಮತ್ತು ಮುಂಭಾಗದಲ್ಲಿ ಸೇಲ್ಫಿಗಾಗಿ 8MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿರುವ ಬಗ್ಗೆ ಕಂಪನಿ ಈಗಾಗಲೇ ಟ್ವಿಟ್ಟರ್ ಮೂಲಕ ಧೃಢಪಡಿಸಿದೆ. ಈ Lava Blaze 3 5G ಸ್ಮಾರ್ಟ್ಫೋನ್ 6GB RAM ಕೇವಲ ₹9299 ರೂಗಳಿಗೆ ಲಭ್ಯವಿದೆ. ಅಲ್ಲದೆ ಇತ್ತೀಚಿನ ಟೀಸರ್ ವೀಡಿಯೊ ಕ್ಲಿಪ್ ಸಂಪೂರ್ಣ ವಿನ್ಯಾಸ, ಬಣ್ಣ ಆಯ್ಕೆಗಳೊಂದಿಗೆ Lava Blaze 3 5G ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯೊಂದಿಗೆ ಬರುತ್ತದೆ.

ಭಾರತದಲ್ಲಿ Lava Blaze 3 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಈ ಮುಂಬರಲಿರುವ ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ಈಗಾಗಲೇ ಅಮೆಜಾನ್ ಮೂಲಕ ಈ ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಯಲ್ಲಿ ಒಂದೇ ಒಂದು ರೂಪಾಂತರದೊಂದಿಗೆ ನಿರೀಕ್ಷಿಸಲಾಗಿದ್ದು 6GB RAM + 6GB Virtual RAM ಜೊತೆಗೆ 128GB ಸ್ಟೋರೇಜ್ ಅನ್ನು ಸುಮಾರು ₹10,889 ರೂಗಳಿಗೆ ನಿಗದಿಪಡಿಸುವ ನಿರೀಕ್ಷೆಗಳಿವೆ. ಆದರೆ ಕಂಪನಿ ಈಗಾಗಲೇ ಬಿಡುಗಡೆಯ ಆಫರ್ ಬೆಲೆಯನ್ನು ಸಹ ಘೋಷಿಸಿದ್ದು ಕೇವಲ ₹9,299 ರೂಗಳಿಗೆ ಲಭ್ಯವಿರುವುದರ ಬಗ್ಗೆ ಮಾಹಿತಿಯನ್ನು ನೀಡಿದೆ. ಆದರೆ ಈ ಬೆಲೆ ಯಾವ ಆಫರ್ಗಳನ್ನು ಒಳಗೊಂಡಿದೆ ಎನ್ನುವದರ ಬಗ್ಗೆ ಇನ್ನು ಯಾವುದೇ ಮಾಹಿತಿಗಳಿಲ್ಲ.

Lava Blaze 3 5G Price Drop
Lava Blaze 3 5G Price Drop

Lava Blaze 3 5G ಫೀಚರ್ ಮತ್ತು ವಿಶೇಷಣಗಳೇನು?

ಈಗಾಗಲೇ ಮೇಲೆ ತಿಳಿಸಿರುವಂತೆ Lava Blaze 3 5G ಸ್ಮಾರ್ಟ್ಫೋನ್ ಹಲವು ಫೀಚರ್ಗಳನ್ನು ಅಮೆಜಾನ್ ಮೂಲಕ ಲಭ್ಯವಿದ್ದು Lava Blaze 3 5G ಫೋನ್ 90Hz ರಿಫ್ರೆಶ್ ದರದೊಂದಿಗೆ 6.56 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಪಡೆಯಬಹುದು. ಸ್ಮಾರ್ಟ್‌ಫೋನ್‌ನ ಸ್ಕ್ರೀನ್ 1080×2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 1600nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ಕ್ಯಾಮೆರಾ ವೀಡಿಯೊ ರೆಕಾರ್ಡಿಂಗ್‌ಗಾಗಿ ಮುಂಭಾಗದಲ್ಲಿ 50MP + 2MP ಮೆಗಾಪಿಕ್ಸೆಲ್ ಪ್ರೈಮರಿ AI ಸೆನ್ಸರ್ Vibe Light ಫೀಚರ್ನೊಂದಿಗೆ ಬರುತ್ತದೆ. ಇದರ ಕ್ರಮವಾಗಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8MP ಕ್ಯಾಮೆರಾವನ್ನು ಒಳಗೊಂಡಿದೆ.

Lava Blaze 3 5G Price Drop
Lava Blaze 3 5G Price Drop

ಫೋನ್ ಪವರ್ ಬ್ಯಾಕಪ್‌ಗಾಗಿ Lava Blaze 3 5G ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪಡೆಯಬಹುದು. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ MediaTek Dimensity D6300 ಪ್ರೊಸೆಸರ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಬಗ್ಗೆ ಮಾತನಾಡುವುದಾದರೆ ಕಂಪನಿಯು 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಜೊತೆಗೆ ಚಾರ್ಜಿಂಗ್‌ಗಾಗಿ ಮೂಲ ಸಂಪರ್ಕವನ್ನು ಒದಗಿಸಬಹುದು. Lava Blaze 3 5G ಸ್ಮಾರ್ಟ್ಫೋನ್ ಪ್ರೀಮಿಯಂ ಗ್ಲಾಸ್ ಗೋಲ್ಡ್ ಮತ್ತು ಪ್ರೀಮಿಯಂ ಗ್ಲಾಸ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಸ್ಮಾರ್ಟ್ಫೋನ್ ಫೇಸ್ ಅನ್ಲಾಕ್ ಮತ್ತು ಸೈಡ್ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo