Lava Blaze 3 5G ಸ್ಮಾರ್ಟ್ಫೋನ್ 50MP AI ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲು ಸಜ್ಜಾಗಿದೆ!
Lava Blaze 3 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ಒಂದಿಷ್ಟು ಡಿಸೈನಿಂಗ್ ವಿವರಗಳನ್ನು ಬಹಿರಂಗಪಡಿಸುತ್ತದೆ.
Lava Blaze 3 5G ಸ್ಮಾರ್ಟ್ಫೋನ್ ಬಿಡುಗಡೆಯ ಗಲಿದೆ ಆದರೆ ನಿಖರವಾದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
Lava Blaze 3 5G ಸ್ಮಾರ್ಟ್ಫೋನ್ 50MP AI ಬ್ಯಾಕ್ ಮತ್ತು ಮುಂಭಾಗದಲ್ಲಿ ಸೇಲ್ಫಿಗಾಗಿ 8MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ.
ಭಾರತದ ಜನಪ್ರಿಯ ಮತ್ತು ಸ್ವದೇಶಿ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ಲಾವಾ (Lava) ಕಂಪನಿ ಕೆಲವೇ ದಿನಗಳಲ್ಲಿ ತನ್ನ ಮುಂಬರಲಿರುವ Lava Blaze 3 5G ಸ್ಮಾರ್ಟ್ಫೋನ್ 50MP AI ಬ್ಯಾಕ್ ಮತ್ತು ಮುಂಭಾಗದಲ್ಲಿ ಸೇಲ್ಫಿಗಾಗಿ 8MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿರುವ ಬಗ್ಗೆ ಕಂಪನಿ ಈಗಾಗಲೇ ಟ್ವಿಟ್ಟರ್ ಮೂಲಕ ಧೃಢಪಡಿಸಿದೆ. Lava Blaze 3 5G ಸ್ಮಾರ್ಟ್ಫೋನ್ ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆಯಾಗಲಿದೆ ಆದರೆ ನಿಖರವಾದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. Lava Blaze 3 5G ಸ್ಮಾರ್ಟ್ಫೋನ್ ಬಗ್ಗೆ ಇತ್ತೀಚಿನ ಟೀಸರ್ ವೀಡಿಯೊ ಕ್ಲಿಪ್ ಸಂಪೂರ್ಣ ವಿನ್ಯಾಸ, ಬಣ್ಣ ಆಯ್ಕೆಗಳೊಂದಿಗೆ Lava Blaze 3 5G ಸ್ಮಾರ್ಟ್ಫೋನ್ ಒಂದಿಷ್ಟು ಡಿಸೈನಿಂಗ್ ವಿವರಗಳನ್ನು ಬಹಿರಂಗಪಡಿಸುತ್ತದೆ.
ಭಾರತದಲ್ಲಿ Lava Blaze 3 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
ಈ ಮುಂಬರಲಿರುವ ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ಈಗಾಗಲೇ ಅಮೆಜಾನ್ ಮೂಲಕ ಮೈಕ್ರೋಸೈಟ್ ಪೇಜ್ ಅನ್ನು ತಯಾರಿಸಿದ್ದು ಲಾವಾ (Lava) ಕಂಪನಿ ಬಿಡುಗಡೆಗೂ ಮುಂಚೆ ಸ್ಮಾರ್ಟ್ಫೋನ್ ಎಲ್ಲ ವಿಶೇಷಣಗಳನ್ನು ಬಹಿರಂಗಪಡಿಸಿದೆ. ಇದರ ಆಧಾರದ ಮೇರೆಗೆ ಈ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ಒಂದೇ ಒಂದು ರೂಪಾಂತರದೊಂದಿಗೆ ನಿರೀಕ್ಷಿಸಲಾಗಿದ್ದು 6GB RAM + 6GB Virtual RAM ಜೊತೆಗೆ 128GB ಸ್ಟೋರೇಜ್ ಅನ್ನು ಸುಮಾರು 11,999 ರೂಗಳಿಗೆ ನಿಗದಿಪಡಿಸುವ ನಿರೀಕ್ಷೆಗಳಿವೆ. ಆದರೆ ಕಂಪನಿ ಈಗಾಗಲೇ ಬಿಡುಗಡೆಯ ಆಫರ್ ಬೆಲೆಯನ್ನು ಸಹ ಘೋಷಿಸಿದ್ದು ಕೇವಲ 9999 ರೂಗಳಿಗೆ ಲಭ್ಯವಿರುವುದರ ಬಗ್ಗೆ ಮಾಹಿತಿಯನ್ನು ನೀಡಿದೆ. ಆದರೆ ಈ ಬೆಲೆ ಯಾವ ಯಾವ ಆಫರ್ಗಳನ್ನು ಒಳಗೊಂಡಿದೆ ಎನ್ನುವದರ ಬಗ್ಗೆ ಇನ್ನು ಯಾವುದೇ ಮಾಹಿತಿಗಳಿಲ್ಲ.
Lava Blaze 3 5G ಫೀಚರ್ ಮತ್ತು ವಿಶೇಷಣಗಳೇನು?
ಈಗಾಗಲೇ ಮೇಲೆ ತಿಳಿಸಿರುವಂತೆ Lava Blaze 3 5G ಸ್ಮಾರ್ಟ್ಫೋನ್ ಹಲವು ಫೀಚರ್ಗಳನ್ನು ಅಮೆಜಾನ್ ಮೂಲಕ ಲಭ್ಯವಿದ್ದು Lava Blaze 3 5G ಫೋನ್ 90Hz ರಿಫ್ರೆಶ್ ದರದೊಂದಿಗೆ 6.56 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಪಡೆಯಬಹುದು. ಸ್ಮಾರ್ಟ್‌ಫೋನ್‌ನ ಸ್ಕ್ರೀನ್ 1080×2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 1600nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ಕ್ಯಾಮೆರಾ ವೀಡಿಯೊ ರೆಕಾರ್ಡಿಂಗ್‌ಗಾಗಿ ಮುಂಭಾಗದಲ್ಲಿ 50MP + 2MP ಮೆಗಾಪಿಕ್ಸೆಲ್ ಪ್ರೈಮರಿ AI ಸೆನ್ಸರ್ Vibe Light ಫೀಚರ್ನೊಂದಿಗೆ ಬರುತ್ತದೆ. ಇದರ ಕ್ರಮವಾಗಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8MP ಕ್ಯಾಮೆರಾವನ್ನು ಒಳಗೊಂಡಿದೆ.
ಅಲ್ಲದೆ ಫೋನ್ ಪವರ್ ಬ್ಯಾಕಪ್‌ಗಾಗಿ Lava Blaze 3 5G ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪಡೆಯಬಹುದು. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ MediaTek Dimensity D6300 ಪ್ರೊಸೆಸರ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಬಗ್ಗೆ ಮಾತನಾಡುವುದಾದರೆ ಕಂಪನಿಯು 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಜೊತೆಗೆ ಚಾರ್ಜಿಂಗ್‌ಗಾಗಿ ಮೂಲ ಸಂಪರ್ಕವನ್ನು ಒದಗಿಸಬಹುದು. Lava Blaze 3 5G ಸ್ಮಾರ್ಟ್ಫೋನ್ ಪ್ರೀಮಿಯಂ ಗ್ಲಾಸ್ ಗೋಲ್ಡ್ ಮತ್ತು ಪ್ರೀಮಿಯಂ ಗ್ಲಾಸ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಸ್ಮಾರ್ಟ್ಫೋನ್ ಫೇಸ್ ಅನ್ಲಾಕ್ ಮತ್ತು ಸೈಡ್ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile