Lava Blaze 2 5G: ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ Powerful ದೇಶಿ ಫೋನ್!

Lava Blaze 2 5G: ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ Powerful ದೇಶಿ ಫೋನ್!
HIGHLIGHTS

ಭಾರತದಲ್ಲಿ ಕೈಗೆಟಕುವ ಬೆಲೆಗೆ ಹೊಸ Lava Blaze 2 5G ಸ್ಮಾರ್ಟ್ಫೋನ್ ಬಿಡುಗಡೆ

Lava Blaze 2 5G ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಬೆಲೆ ರೂ 9,999 ರೂಗಳಾಗಿದೆ.

Lava Blaze 2 5G ಸ್ಮಾರ್ಟ್ಫೋನ್ 18W ಫಾಸ್ಟ್ ಚಾರ್ಜಿಂಗ್ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು ಈಗ ಭಾರತದಲ್ಲಿ ಅತಿ ಕಡಿಮೆ ಬೆಲೆಯ 5G ಸ್ಮಾರ್ಟ್ಫೋನ್ Lava Blaze 2 5G ಎಂಬ ತನ್ನ ಹೊಸ ಎಂಟ್ರಿ ಲೇವಲ್ ಕೊಡುಗೆಯನ್ನು ಪರಿಚಯಿಸಿದೆ. ಈ ಲಾವಾ ಬ್ಲೇಜ್‌ 2 5G ಹೊಸ ಹಿಂದಿನ ಪ್ಯಾನಲ್ ವಿನ್ಯಾಸದೊಂದಿಗೆ ಪ್ರೀಮಿಯಂ ಗ್ಲಾಸ್ ಮತ್ತೆ ತಂದಿದೆ. ಬ್ಲೇಜ್ ರಿಂಗ್ ಲೈಟ್ ಅನ್ನು ಸಹ ಪಡೆಯುತ್ತದೆ. ಗ್ರಾಹಕರಿಗೆ ಉತ್ತಮ ಫೋಟೋಗ್ರಾಫಿ ಆಯ್ಕೆಗಳನ್ನು ನೀಡುವ ಸಲುವಾಗಿ ತನ್ನ ವಿಭಾಗದಲ್ಲಿ ಮೊದಲನೆಯದು.

Also Read: ನಿಮ್ಮ Aadhaar Card ಮಾಹಿತಿ ಲೀಕ್ ಆಗಿದ್ಯಾ? ಕೆಲವೇ ಕ್ಷಣಗಳಲ್ಲಿ ಈ ರೀತಿ ಲಾಕ್ ಮತ್ತು ಅನ್ಲಾಕ್ ಮಾಡಿ

Lava Blaze 2 5G ವಿಶೇಷತೆಗಳು

ಲಾವಾದ ಈ ಸ್ಮಾರ್ಟ್ಫೋನ್ 6.56 ಇಂಚಿನ HD IPS ಪಂಚ್ ಹೋಲ್ ಡಿಸ್ಪ್ಲೇ 1600 × 720 pixels ಜೊತೆಗೆ 90Hz ರಿಫ್ರೆಶ್ ರೇಟ್ ಪ್ಯಾನೆಲ್‌ನೊಂದಿಗೆ ನೀಡಲಾಗುತ್ತದೆ. ಅಲ್ಲದೆ ಇದರಲ್ಲಿ ನಿಮಗೆ 2.5D ಕರ್ವ್ ಡಿಸ್ಪ್ಲೇ ಡಿಸೈನಿಂಗ್ ಅನ್ನು ಸಹ ಕಂಪನಿ ನೀಡಿದೆ. ಇದು ಕ್ಲೀನ್ ಆಂಡ್ರಾಯ್ಡ್ ಅನುಭವಕ್ಕೆ ಲಾವಾಸ್ ಒತ್ತು ನೀಡುತ್ತದೆ. ಹೆಚ್ಚುವರಿಯಾಗಿ ಇದು ಹೆಚ್ಚಿನ ಪ್ರೊಟೆಕ್ಷನ್‌ಗಾಗಿ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ನೊಂದಿಗೆ ಹೊಂದಿದೆ. ಇದು ಮೂರು ಬಣ್ಣಗಳಲ್ಲಿ ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಲ್ಯಾವೆಂಡರ್ ಬಣ್ಣಗಳಲ್ಲಿ ಫೋನ್ ಬಿಡುಗಡೆಯಾಗಿದೆ.

Lava Blaze 2 5G

Lava Blaze 2 5G ಕ್ಯಾಮೆರಾ ವಿವರಗಳು

ಕ್ಯಾಮೆರಾದಲ್ಲಿ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾದೊಂದಿಗೆ 50MP ಪ್ರೈಮರಿ ಶೂಟರ್ ಅನ್ನು ಪಡೆಯುತ್ತದೆ. ಫಿಲ್ಮ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಯುಹೆಚ್‌ಡಿ, ಜಿಐಎಫ್, ಬ್ಯೂಟಿ, ಎಚ್‌ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ, ಫಿಲ್ಟರ್‌ಗಳು ಮತ್ತು ಇಂಟೆಲಿಜೆಂಟ್ ಸ್ಕ್ಯಾನಿಂಗ್ ಇವು ಕಂಪನಿಯು ನೀಡುವ ಕೆಲವು ಆಯ್ಕೆಗಳಾಗಿವೆ.

Lava Blaze 2 5G ಪ್ರೊಸೆಸರ್

ಲಾವಾ ಎರಡು ವರ್ಷಗಳ ತ್ರೈಮಾಸಿಕ ಭದ್ರತಾ ಅಪ್‌ಗ್ರೇಡ್‌ಗಳು ಮತ್ತು ಆಂಡ್ರಾಯ್ಡ್ 14 ಅಪ್‌ಗ್ರೇಡ್‌ಗೆ ಖಾತರಿ ನೀಡುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಅನ್ನು ಹೊಂದಿದೆ. 4GB RAM ಜೊತೆಗೆ 64GB ಸ್ಟೋರೇಜ್ ಮತ್ತು 6GB RAM ಜೊತೆಗೆ 128GB UFS 2.2 ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದು. ಅಂದ್ರೆ RAM ಮತ್ತು ಸ್ಟೋರೇಜ್‌ಗಾಗಿ ಎರಡು ಬದಲಾವಣೆಗಳು ಲಭ್ಯವಿವೆ. ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ. ಬ್ಲೋಟ್‌ವೇರ್ ಮತ್ತು ಜಾಹೀರಾತುಗಳಿಂದ ಮುಕ್ತವಾಗಿದೆ. ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಲಾವಾ ಬ್ಲೇಜ್ 2 5ಜಿ ಬೆಲೆ ಮತ್ತು ಲಭ್ಯತೆ:

Lava Blaze 2 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಅದ್ರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಬೆಲೆ ರೂ 9,999 ರೂಗಳಾಗಿದ್ದು ಇದರ ಕ್ರಮವಾಗಿ 6GB RAM ಮತ್ತು 128GB ಬೆಲೆ 10,999 ರೂಗಳಾಗಿದೆ. ಈ ಫೋನ್ 9ನೇ ನವೆಂಬರ್ 2023 ರಿಂದ ನಿಮ್ಮ ಹತ್ತಿರದ ಲಾವಾ ರಿಟೇಲ್ ಸ್ಟೋರ್, ಅಮೆಜಾನ್ ಮತ್ತು lavamobiles.com ಮೂಲಕ ದೇಶಾದ್ಯಂತ ಲಭ್ಯವಿರುತ್ತದೆ. ಇನ್ನು ಈ ಫೋನ್‌ ಖರೀದಿ ಮಾಡುವವರಿಗೆ ವಾರಂಟಿ ಅಡಿಯಲ್ಲಿ ಮನೆ ಬಾಗಿಲಿಗೆ ಸೇವೆಯನ್ನು ನೀಡಲಾಗುತ್ತದೆ. ಈ ಸೇವೆಯನ್ನು ಪಡೆಯಲು ಬಳಕೆದಾರರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Is Lava Blaze 5G is good or not?

ಸುಮಾರು 10,000 ರೂಗಳೊಳಗೆ ಇದೊಂದು ಉತ್ತಮ 5G ಸ್ಮಾರ್ಟ್ಫೋನ್ ಬೆಸ್ಟ್ ಡಿಸೈನ್ ಗ್ಲಾಸ್ ಬ್ಯಾಕ್, ಸ್ಕ್ರೀನ್ IPS ಆದರೆ ಹೊರಾಂಗಣದಲ್ಲಿ ಉತ್ತಮ ಪ್ರಕಾಶಮಾನವಾಗಿ ಭಾಸವಾಗುತ್ತದೆ. ಇದರಲ್ಲಿ ಬ್ಲೋಟ್‌ವೇರ್‌ಗಳಿಲ್ಲದ ಕ್ಲೀನ್ ಆಂಡ್ರಾಯ್ಡ್ 13 ಜೊತೆಗೆ ಸ್ಟೋರೇಜ್ ಮತ್ತು RAM ಉತ್ತಮ ಕಾಂಬೊವನ್ನು ನೀಡುವುದಲ್ಲದೆ ದೊಡ್ಡ ಬ್ಯಾಟರಿಯೊಂದಿಗೆ ಎಲ್ಲಾ ಪ್ರಮುಖ 5G ಬ್ಯಾಂಡ್‌ಗಳಿವೆ. ಅಲ್ಲದೆ ಸಾಂದರ್ಭಿಕ ಬಳಕೆಗೆ ಉತ್ತಮವಾಗಿದ್ದು ಸಾಕಾಗುವಷ್ಟು ಕಾರ್ಯಕ್ಷಮತೆ ಮತ್ತು ಉತ್ತಮ ಕ್ವಾಲಿಟಿಯೊಂದಿಗೆ ಮಾರಾಟವಾಗುವ ಬಿಂದುವಾಗಿದೆ.

Follow Us
Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo