Lava Agni 3 ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು AI ಫೀಚರ್ಗಳೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್!

Updated on 02-Oct-2024
HIGHLIGHTS

ಮುಂಬರಲಿರುವ Lava Agni 3 ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು ಅಧಿಕೃವಾಗಿ ಘೋಷಿಸಿದೆ.

Lava Agni 3 ಸ್ಮಾರ್ಟ್ಫೋನ್ 4ನೇ ಅಕ್ಟೋಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗುತ್ತದೆ.

Lava Agni 3 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ (IOS) ಜೊತೆಗೆ ಬಿಡುಗಡೆಯಾಗಲಿದೆ.

ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ಲಾವಾ (Lava) ತನ್ನ ಮುಂಬರಲಿರುವ Lava Agni 3 ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು ಅಧಿಕೃವಾಗಿ ಘೋಷಿಸಿದೆ. Lava Agni 3 ಸ್ಮಾರ್ಟ್ಫೋನ್ 4ನೇ ಅಕ್ಟೋಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗುತ್ತದೆ. ಇದನ್ನು ಕಂಪನಿಯ ಅಧಿಕೃತ YouTube ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಕಂಪನಿ ಬಿಡುಗಡೆಗೂ ಮುಂಚಿತವಾಗಿ ಇದರ ಒಂದಿಷ್ಟು ಮಾಹಿತಿಯನ್ನು ಈಗಾಗಲೇ ಇಂಟೆರ್ನೆಟ್ ಮೂಲಕ ಬಹಿರಂಗಪಡಿಸಿದ್ದು 50MP ಪ್ರೈಮರಿ ಕ್ಯಾಮೆರಾವನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ (IOS) ಜೊತೆಗೆ ಬಿಡುಗಡೆಯಾಗಲಿದೆ.

Also Read: ಎಚ್ಚರ! ದಿನಕ್ಕೆ ಒಂದು ಸಾರಿಯಾದ್ರು ನಿಮ್ಮ ಮೊಬೈಲ್ Restart ಅಥವಾ Switch Off ಮಾಡಬೇಕು! ಇಲ್ಲವಾದ್ರೆ ಹ್ಯಾಕ್ ಆಗುತ್ತಂತೆ!

Lava Agni 3 ಸ್ಮಾರ್ಟ್ಫೋನ್ ಬೆಸ್ಟ್ ಫೀಚರ್

ಈ ಮುಂಬರಲಿರುವ Lava Agni 3 ಸ್ಮಾರ್ಟ್ಫೋನ್ ಡುಯಲ್ ಡಿಸ್ಪ್ಲೇಯೊಂದಿಗೆ ಬರಲಿದ್ದು ಸ್ಮಾರ್ಟ್ಫೋನ್ ಹಿಂಭಾಗದ ಪ್ಯಾನಲ್ ಬದಿಯಲ್ಲಿ 1.74 ಇಂಚಿನ ಸಣ್ಣ ಡಿಸ್ಪ್ಲೇಯನ್ನು ಸಹ ನೀಡಿರುವುದನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಅಲ್ಲದೆ ಅತ್ಯುತ್ತಮ ಆಡಿಯೋ ಅನುಭವಕ್ಕಾಗಿ Lava Agni 3 ಸ್ಮಾರ್ಟ್ಫೋನ್ ಈಗ Dolby Atmos ಡುಯಲ್ ಸ್ಟೀರಿಯೋ ಸ್ಪೀಕರ್ ಹೊಂದಿದೆ. ಇದರ ಬಗ್ಗೆ ಒಂದಿಷ್ಟು ಇಂಟೆಸ್ಟಿಂಗ್ ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಲಾವಾ Agni 3 ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು

Lava Agni 3 ನ ಹೃದಯಭಾಗದಲ್ಲಿ ಐಫೋನ್ ಮಾದರಿಯ ಆಕ್ಷನ್ ಬಟನ್ ಅನ್ನು ಪರಿಚಯಿಸಿದ ಮೊದಲ ಭಾರತೀಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದೆ. ಇದರ ಅಂಚುಗಳಲ್ಲಿ ಫೋನ್ ಈ ಬಟನ್ ಅನ್ನು ಒಳಗೊಂಡಿರುತ್ತದೆ ಅದು ಬಳಕೆದಾರರಿಗೆ ಶಾರ್ಟ್‌ಕಟ್‌ಗಳನ್ನು ಕಸ್ಟಮೈಸ್ ಮಾಡಲು ಸಹಾಯ ಮಾಡುತ್ತದೆ. Lava Agni 3 ಎರಡು AMOLED ಡಿಸ್ಪ್ಲೇಗಳು ಮುಖ್ಯ 6.78 ಇಂಚಿನ ಮುಂಭಾಗದ ಕರ್ವ್ಡ್ ಪ್ಯಾನಲ್ ಡಿಸ್ಪ್ಲೇ ಜೊತೆಗೆ 120Hz ಮತ್ತು ಇತರ ಹಿಂಭಾಗದಲ್ಲಿ 1.74 ಇಂಚಿನ ಸೆಕೆಂಡರಿ AMOLED ಡಿಸ್ಪ್ಲೇ ಕ್ಯಾಮೆರಾ ಮಾಡ್ಯೂಲ್ನ ಮುಂದಿನ ಹಿಂಭಾಗದಲ್ಲಿ ಇರುತ್ತದೆ.

ಈ ಮುಂಬರಲಿರುವ Lava Agni 3 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ (IOS) ಜೊತೆಗೆ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವು ಸೆಲ್ಫಿ ಪ್ರಿಯರಿಗೆ ಮತ್ತು ವೀಡಿಯೊ ಕರೆಗಳಿಗೆ ಸೂಕ್ತವಾಗಿದೆ. Lava Agni 3 ಸ್ಮಾರ್ಟ್ಫೋನ್ ಸುಮಾರು ರೂ 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಬರುವುದಾಗಿ ಟ್ವಿಟರ್ ಮೂಲಕ ಪೋಸ್ಟ್‌ ಮಾಡಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :