Lava Agni 2 vs OnePlus Nord CE 3 Lite ಟಾಪ್ 5 ಅದ್ದೂರಿಯ ಫೀಚರ್‌ಗಳು! ಆದರೆ ನಿಮ್ಮ ಆಯ್ಕೆ ಯಾವುದು?

Updated on 25-May-2023
HIGHLIGHTS

LAVA ಈಗ ಚೀನಿ ಕಂಪನಿಗಳಿಗೆ ನೇರವಾಗಿ ಠಕ್ಕರ್ ನೀಡಲು ಅತ್ಯುತ್ತಮ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ

Lava Agni 2 ಮತ್ತು OnePlus Nord CE 3 Lite ಸ್ಮಾರ್ಟ್ಫೋನ್ಗಳನ್ನು ಒಂದಕ್ಕೊಂದು ನೆರೆವಾಗಿ ಹೋಲಿಸಿದ್ದೇವೆ.

Lava Agni 2 ಮತ್ತು OnePlus Nord CE 3 Lite ಸ್ಮಾರ್ಟ್‌ಫೋನ್‌ಗಳನ್ನು ರೂ.20,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಭಾರತೀಯ ಸ್ಮಾರ್ಟ್ಫೋನ್ ಕಂಪನಿ LAVA ಈಗ ಚೀನಿ ಕಂಪನಿಗಳಿಗೆ ನೇರವಾಗಿ ಠಕ್ಕರ್ ನೀಡಲು ಅತ್ಯುತ್ತಮ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಈ ಲೇಖನದಲ್ಲಿ ನಾವು ನಿಮಗೆ ಇತ್ತೀಚೆಗೆ ಬಿಡುಗಡೆಯಾಗಿರುವ Lava Agni 2 ಮತ್ತು OnePlus Nord CE 3 Lite ಸ್ಮಾರ್ಟ್ಫೋನ್ಗಳನ್ನು ಒಂದಕ್ಕೊಂದು ನೆರೆವಾಗಿ ಹೋಲಿಸಿದ್ದೇವೆ. ಏಕೆಂದರೆ ಸದ್ಯದ ಮಾರುಕಟ್ಟೆಯಲ್ಲಿ ಸುಮಾರು 20,000 ರೂಗಳೊಳಗೆ ಲಭ್ಯವಿರುವ 2 ಉತ್ತಮ ಫೋನ್ಗಳಾಗಿವೆ. ಈ ಎರಡೂ ಫೋನ್‌ಗಳು ನಿಮಗೆ ಉತ್ತಮ ಆಯ್ಕೆಯಾಗಿದೆ. Lava Agni 2 ಮತ್ತು OnePlus Nord CE 3 Lite ಸ್ಮಾರ್ಟ್‌ಫೋನ್‌ಗಳನ್ನು ರೂ.20,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಈ ಸ್ಮಾರ್ಟ್‌ಫೋನ್‌ಗಳ ಡಿಸ್ಪ್ಲೇಯಲ್ಲಿ ಯಾವುದು ಬೆಸ್ಟ್

ಮೊದಲಿಗೆ ನಾವು Lava Agni 2 5G ಫೋನ್ ನೋಡುವುದಾದರೆ ಇದರಲ್ಲಿ ನಿಮಗೆ 1080 x 2460 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ AMOLED ಸ್ಕ್ರಿನ್ ಅನ್ನು ನೀಡಲಾಗಿದೆ. ಇದರೊಂದಿಗೆ HDR10+ ಅನ್ನು 950 nits ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಬೆಂಬಲಿಸುತ್ತದೆ. ಇದರ ಕ್ರಮವಾಗಿ OnePlus Nord CE 3 Lite ಸ್ಮಾರ್ಟ್ಫೋನ್ 1080 x 2460 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ AMOLED 6.78 ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದು ಸಹ HDR10+ ಅನ್ನು 950 nits ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಬೆಂಬಲಿಸುತ್ತದೆ.

ಈ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯಲ್ಲಿ ಯಾವುದು ಉತ್ತಮ

ಈಗಾಗಲೇ ಮೇಲೆ ತಿಳಿಸಿರುವಂತೆ Lava Agni 2 ಸ್ಮಾರ್ಟ್ಫೋನ್ ನಿಮಗೆ 66W ವೈರ್ಡ್ ಚಾರ್ಜಿಂಗ್‌ನೊಂದಿಗೆ 4700mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 16 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು 50% ಚಾರ್ಜ್ ಮಾಡುತ್ತದೆ. ಇದರ ಕ್ರಮವಾಗಿ ನಿಮಗೆ OnePlus Nord CE 3 Lite ಸ್ಮಾರ್ಟ್ಫೋನ್ ಸಹ 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದ. ಇದು ಸ್ಮಾರ್ಟ್‌ಫೋನ್ ಅನ್ನು 30 ನಿಮಿಷಗಳಲ್ಲಿ 80% ವರೆಗೆ ಚಾರ್ಜ್ ಮಾಡುತ್ತದೆ. 

ಈ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಸೆನ್ಸರ್ಗಳು

ಮೊದಲಿಗೆ ದೇಶಿ ಕಂಪನಿಯ ಕ್ಯಾಮೆರಾ ಸಿಸ್ಟಮ್ ನೋಡುವುದಾದರೆ ಇದರಲ್ಲಿ ನಿಮಗೆ Lava Agni 2 ಸ್ಮಾರ್ಟ್ಫೋನ್ 50MP + 8MP + 2MP + 2MP ಜೊತೆಗೆ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಆದರೆ ಡ್ಯುಯಲ್-LED ಫ್ಲ್ಯಾಷ್‌ನೊಂದಿಗೆ 16MP ಮುಂಭಾಗದ ಕ್ಯಾಮೆರಾ ಇರುತ್ತದೆ. ಇದರ ಕ್ರಮವಾಗಿ OnePlus Nord CE 3 Lite ಸ್ಮಾರ್ಟ್ಫೋನ್ HDR ಬೆಂಬಲದೊಂದಿಗೆ 108MP + 2MP + 2MP ಸ್ಪೋರ್ಟಿಂಗ್ LED ಫ್ಲ್ಯಾಷ್‌ನೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 16MP ಯೊಂದಿಗೆ ಮುಂಭಾಗದ ಕ್ಯಾಮರಾವನ್ನು ಒಳಗೊಂಡಿರುತ್ತದೆ.

ಈ ಸ್ಮಾರ್ಟ್‌ಫೋನ್‌ಗಳ ಪ್ರೊಸೆಸರ್‌ನಲ್ಲಿ ಯಾವುದು ಉತ್ತಮ

Lava Agni 2 ಸ್ಮಾರ್ಟ್ಫೋನ್ ನಿಮಗೆ Android 13 ನಲ್ಲಿ Mali-G68 GPU ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್ ಜೊತೆಗೆ ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದರ ಕ್ರಮವಾಗಿ OnePlus Nord CE 3 Lite ಅಡ್ರಿನೋ 619 ಜೊತೆಗೆ Android 13 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತದೆ ಮತ್ತು ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ Qualcomm SM6375 ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

ನಮ್ಮ ಅನಿಸಿಕೆ

ಒಟ್ಟಾರೆಯಾಗಿ OnePlus Nord ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ವಿಷಯದಲ್ಲಿ ಮುಂದಿದೆ. ಮತ್ತೊಂದೆಡೆ ಕ್ಯಾಮೆರಾಗಳ ವಿಷಯದಲ್ಲಿ Lava Agni 2 ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ ಮತ್ತು ಒನ್‌ಪ್ಲಸ್ 3 ಕ್ಯಾಮೆರಾಗಳನ್ನು ಹೊಂದಿದೆ. ಆದರೆ OnePlus ನ ಪ್ರೈಮರಿ ಕ್ಯಾಮೆರಾ 108MP ಮತ್ತು ಲಾವಾದ 50MP ಆಗಿದೆ. ಇದು ಚಿತ್ರದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಡಿಸ್‌ಪ್ಲೇ ಬಗ್ಗೆ ಮಾತನಾಡುವುದಾದರೆ ಎರಡರ ಡಿಸ್‌ಪ್ಲೇ ವಿಶೇಷಣಗಳು ಒಂದೇ ಆಗಿರುತ್ತವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :