ಭಾರತದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಲೇಟೆಸ್ಟ್ Redmi A4 5G ಸ್ಮಾರ್ಟ್ಫೋನ್ ಕೇವಲ 8499 ರೂಗಳಿಗೆ 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬಿಡುಗಡೆಯಾಗಿದೆ. ಈ Redmi A4 5G ಸ್ಮಾರ್ಟ್ಫೋನ್ 27ನೇ ನವೆಂಬರ್ನಿಂದ ಮೊದಲ ಮಾರಾಟ ಶುರುವಾಗಲಿದ್ದು ಇದಕ್ಕೆ ಸಂಬಂಧಿಸಿದ ದೊಡ್ಡ ಶಾಕಿಂಗ್ ಮಾಹಿತಿಯೊಂದು ವೈರಲ್ ಆಗುತ್ತಿದೆ. ಅದೆಂದರೆ ಲೇಟೆಸ್ಟ್ Redmi A4 5G ಸ್ಮಾರ್ಟ್ಫೋನ್ ಕೇವಲ 5G Standalon ನೆಟ್‌ವರ್ಕ್‌ಗಳನ್ನು ಸಪೋರ್ಟ್ ಮಾಡುತ್ತದೆ ಆದರೆ ಭಾರತದಲ್ಲಿ ಏರ್ಟೆಲ್ 5G Non-Standalone ನೆಟ್‌ವರ್ಕ್ ಹೊಂದಿದೆ.
ಈಗ ಇವೆರಡರ ನಡುವಿನ ವ್ಯತ್ಯಾಸಗಳೇನು ಎನ್ನೋದು ನಿಮ್ಮ ತಲೆಗೆ ಬರುವ ಸಾಧಾರಣ ಪ್ರಶ್ನೆಯಾಗಿದೆ. ಸರಳ ಭಾಷೆಯಲ್ಲಿ ನಿಮಗೆ ವಿವರಿಸುವುದಾದರೆ ರಿಲಯನ್ಸ್ ಜಿಯೋ 5G ಸೇವೆಯನ್ನು ನೀಡಲು ಹೊಸ 5G ಟವರ್ ಮತ್ತು ಬೂಸ್ಟರ್ ಟವರ್ಗಳನ್ನು ಸ್ಥಾಪಿಸಿದೆ. ಆದರೆ ಭಾರ್ತಿ ಏರ್ಟೆಲ್ ಈಗಾಗಲೇ ನೆಟ್ಟಿರುವ 4G ಟವರ್ಗಳಲ್ಲಿ ಸಿಗ್ನಲ್‌ಗಳನ್ನು 5G ಆಗಿ ಮಾರ್ಪಡಿಸಿವ ಟೆಕ್ನಾಲಜಿಯನ್ನು ಅಳವಡಿಸಿದೆ.
ಆದ್ದರಿಂದ ಹೊಸ 5G ಆಧಾರಿತ ಟವರ್ಗಳನ್ನು 5G Standalon ನೆಟ್‌ವರ್ಕ್ ಮತ್ತು 4G ಟವರ್ಗಳನ್ನು 5G ಸಿಗ್ನಲ್‌ಗಳಿಗಾಗಿ ಬಳಸುವ ಟವರ್ಗಳನ್ನು 5G Non-Standalon ನೆಟ್‌ವರ್ಕ್ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ Redmi A4 5G ಏರ್ಟೆಲ್ ಹೊಂದಿರುವ 5G Non-Standalon ನೆಟ್‌ವರ್ಕ್ ಟೆಕ್ನಾಲಜಿಯನ್ನು ಸಪೋರ್ಟ್ ಮಾಡೋದಿಲ್ಲ ಎನ್ನುವುದು ಸಾರಾಂಶ.
ಈ Redmi A4 5G ಫೋನ್ 6.88 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಹೊಂದಿದೆ. 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಹೊಂದಿರುವ ವಿಭಾಗದಲ್ಲಿ ಇದು ಮೊದಲ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ ಪ್ರೀಮಿಯಂ ಹಲೋ ಗ್ಲಾಸ್ ಸ್ಯಾಂಡ್‌ವಿಚ್ ವಿನ್ಯಾಸದೊಂದಿಗೆ ಬರುತ್ತದೆ. ಫೋನ್ 50MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ ಫೋನ್ 5MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಇದು HyperOS ಆಧಾರಿತ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 2 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷಗಳ ಭದ್ರತಾ ಅಪ್ಡೇಟ್ ಪಡೆಯಲಿದೆ. Redmi A4 5G ಫೋನ್ Snapdragon 4s Gen 2 ಪ್ರೊಸೆಸರ್ ಹೊಂದಿದೆ. ಫೋನ್ ಟೈಪ್-ಸಿ ಪೋರ್ಟ್ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5160mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಫೋನ್ ಧೂಳು ಮತ್ತು ನೀರಿನಿಂದ ಸುರಕ್ಷಿತವಾಗಿರಲು IP54 ರೇಟಿಂಗ್‌ನೊಂದಿಗೆ ಬರುತ್ತದೆ. ಫೋನ್ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಹೊಂದಿದೆ. ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವೂ ಲಭ್ಯವಿದೆ.
ಈ Redmi A4 5G ಫೋನ್ ಆರಂಭಿಕ ಬೆಲೆ 8,500 ರೂಗಿಂತ ಕಡಿಮೆಯಿದೆ. ವಾಸ್ತವವಾಗಿ ಫೋನ್‌ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 8,499 ರೂಗಳಾದರೆ ಇದರ ಮತ್ತೊಂದು 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 9,499 ರೂಗಳಾಗಿವೆ. ಈ ಫೋನ್ ಮೊದಲ ಮಾರಾಟವು 27ನೇ ನವೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ. Redmi A4 5G ಸ್ಮಾರ್ಟ್‌ಫೋನ್ ಸ್ಟಾರ್ರಿ ಬ್ಲ್ಯಾಕ್ ಮತ್ತು ಸ್ಪಾರ್ಕಲ್ ಪರ್ಪಲ್ ಎಂಬ ಎರಡು ಬಣ್ಣದ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ 1,999 ರೂಪಾಯಿ ಮೌಲ್ಯದ 33W ಚಾರ್ಜರ್ ಅನ್ನು ಫೋನ್ ಬಾಕ್ಸ್‌ನಲ್ಲಿ ಉಚಿತವಾಗಿ ನೀಡಲಾಗುತ್ತಿದೆ.