Realme NARZO N61 ಸ್ಮಾರ್ಟ್​ಫೋನ್‌ ಅಮೆಜಾನ್‌ನಲ್ಲಿ 6499 ರೂಪಾಯಿಗೆ ಲಭ್ಯ! ಇಂದಿನ ಜಬರ್ದಸ್ತ್ ಡೀಲ್ ಕೈ ಬಿಡಿಬೇಡಿ!

Updated on 07-Jan-2025
HIGHLIGHTS

Realme NARZO N61 ಅಮೆಜಾನ್ ಮೂಲಕ ಆರಂಭಿಕ ಕೇವಲ 6499 ರೂಗಳಿಗೆ ಮಾರಾಟವಾಗುತ್ತಿದೆ.

Realme NARZO N61 ಸ್ಮಾರ್ಟ್​ಫೋನ್‌ 90Hz ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

Realme NARZO N61: ನಿಮಗೆ ಅಥವಾ ನಿಮಗೆ ಪ್ರೀತಿ ಪಾತ್ರರಿಗೆ ಹೊಸ 2025 ವರ್ಷದಲ್ಲಿ ಲೇಟೆಸ್ಟ್ ಸ್ಮಾರ್ಟ್​ಫೋನ್‌ ಅನ್ನು ಅತಿ ಕಡಿಮೆ ಬೆಲೆಗೆ ಅಂದ್ರೆ ಸುಮಾರು ₹7000 ರೂಗಳೊಳಗೆ ಹುಡುಕುತ್ತಿದ್ದರೆ ನಿಮಗೊಂದು ಜಬರ್ದಸ್ತ್ ಡೀಲ್ ಈ ಅಮೆಜಾನ್ ನೀಡುತ್ತಿದೆ. ಹೌದು, ಅಮೆಜಾನ್‌ನಲ್ಲಿ Realme NARZO N61 ಸ್ಮಾರ್ಟ್​ಫೋನ್‌ 90Hz ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಕೇವಲ 6499 ರೂಗಳಿಗೆ ಮಾರಾಟವಾಗುತ್ತಿದೆ. Realme NARZO N61 ಸ್ಮಾರ್ಟ್​ಫೋನ್‌ ಮತ್ತಷ್ಟು ಡಿಸ್ಕೌಂಟ್ ಮಾಹಿತಿ ಮತ್ತು ಸಂಪೂರ್ಣ ಫೋನ್ ಫೀಚರ್ ಮತ್ತು ವಿಶೇಷಣಗಳೇನು ಎಲ್ಲವನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ Realme NARZO N61 ಆಫರ್ ಬೆಲೆ ಎಷ್ಟು?

ಈ Realme NARZO N61 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು ₹7,499 ರೂಗಳಿಗೆ ಮತ್ತು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹8,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಉಚಿತ ಸ್ಪೆಷಲ್ ಕೂಪನ್ ಬಳಸಿಕೊಂಡು ₹1000 ರೂಗಳ ಡಿಸ್ಕೌಂಟ್ ಪಡೆಯಬಹುದು. ಈ ಮೂಲಕ ಕೇವಲ ಆರಂಭಿಕ ₹6,499 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು.

Realme NARZO N61 Sale 2025

ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Realme NARZO N61 ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 7,100 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: Realme 14 Pro Series ಅಧಿಕೃತ ಭಾರತದ ಬಿಡುಗಡೆಗೆ ಡೇಟ್ ಫಿಕ್ಸ್! ಯಾವಾಗ ಎಲ್ಲಿ ವೀಕ್ಷಿಸುವುದು ಗೊತ್ತಾ?

Realme NARZO N61 ಫೀಚರ್ ಮತ್ತು ವಿಶೇಷಣಗಳೇನು?

Realme NARZO N61 ಸ್ಮಾರ್ಟ್​ಫೋನ್‌ 90Hz ರಿಫ್ರೆಶ್ ರೇಟ್ನೊಂದಿಗೆ 6.74 ಇಂಚಿನ HD+ (720×1600 ಪಿಕ್ಸೆಲ್‌ಗಳು) LCD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ Realme NARZO N61 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 32MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್​ಫೋನ್‌ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP54 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.

Realme NARZO N61 Sale 2025

Realme NARZO N61 ಸ್ಮಾರ್ಟ್​ಫೋನ್‌ Unisoc Tiger T612 ಪ್ರೊಸೆಸರ್‌ನೊಂದಿಗೆ ಬರುತ್ತದೆ. Realme NARZO N61 ಸ್ಮಾರ್ಟ್ಫೋನ್ ಇದರ 6GB RAM + ವರ್ಚುಯಲ್ 6GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್​ಫೋನ್‌ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :