JioPhone Next: ನಿಮಗಾಗಿ ಹೊಸ 4G ಸ್ಮಾರ್ಟ್‌ಫೋನ್ ಖರೀದಿಸಲು ನೀವು ಬಯಸಿದರೆ ಈ ಅವಕಾಶ ನಿಮಗೆ ಸದುಪಯೋಗವಾಗಬಹುದು. ಹೌದು ರಿಲಯನ್ಸ್ ಜಿಯೋ ಪ್ರಸ್ತುತ JioPhone Next ನಲ್ಲಿ ಆಫರ್‌ಗಳನ್ನು ನೀಡುತ್ತಿದೆ. ಇದು ನಿಮಗೆ ಕೈಗೆಟುಕುವ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡುತ್ತದೆ. ಕೇವಲ ಫೀಚರ್ ಫೋನ್‌ನ ಬೆಲೆಗೆ ನಿಮ್ಮ ಸ್ವಂತ 4G ಸ್ಮಾರ್ಟ್‌ಫೋನ್ ಮಾಡಲು ನಿಮಗೆ ಅವಕಾಶವಿದೆ. ರಿಲಯನ್ಸ್ ಜಿಯೋದ ಈ ಆಫರ್ ಮತ್ತು 4G ಸ್ಮಾರ್ಟ್‌ಫೋನ್‌ನ ಫೀಚರ್‌ಗಳ ಡಿಟೈಲ್ಸ್ ಇಲ್ಲಿದೆ ನೋಡಿ.
ಜಿಯೊಫೋನ್ ನೆಕ್ಸ್ಟ್ 720 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 60 Hz ನ ರಿಫ್ರೆಶ್ ದರದೊಂದಿಗೆ 5.45 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಜೊತೆಗೆ ಆಂಟಿಫಿಂಗರ್‌ಪ್ರಿಂಟ್ ಕೋಟಿಂಗ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ನಲ್ಲಿ f-1/ ಅಪರ್ಚರ್ ನೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು ಫ್ರಂಟ್ f-1/4 ಅಪರ್ಚರ್ ನೊಂದಿಗೆ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ಬ್ಯಾಕ್ ಎಲ್ಇಡಿ ಫ್ಲ್ಯಾಷ್ಲೈಟ್ ಜೊತೆಗೆ ಫ್ರಂಟ್ ಡಿಸ್ಪ್ಲೇ ಫ್ಲ್ಯಾಷ್ ಅನ್ನು ಬೆಂಬಲಿಸಲಾಗುತ್ತದೆ.
ಸೀನ್ ಮೋಡ್ ಮತ್ತು ಸೆಟ್ಟಿಂಗ್‌ಗಳನ್ನು ನೋಡುವುದಾದರೆ ಇದು HDR ಮೋಡ್, ನೈಟ್ ಮೋಡ್, ಪೋಟ್ರೇಟ್ ಮೋಡ್, ಫೋಟೋ, ವಿಡಿಯೋ, ಟ್ರಾನ್ಸ್ ಲೇಟ್, ಟೈಮರ್ ಸೆಟ್ಟಿಂಗ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಫ್ರಂಟ್ ಮತ್ತು ಬ್ಯಾಕ್ ಕ್ಯಾಮರಾಗಳಿಂದ 1080p @30fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಈ ಸ್ಮಾರ್ಟ್‌ಫೋನ್ 5V/1.5A ಚಾರ್ಜಿಂಗ್ ಅನ್ನು ಬೆಂಬಲಿಸುವ 3500 mAh ಬ್ಯಾಟರಿಯನ್ನು ಹೊಂದಿದ್ದು ಇದು ಬ್ಯಾಟರಿ ಬಾಳಿಕೆಗೆ ಉತ್ತಮವಾಗಿದೆ.
ಈ ಸ್ಮಾರ್ಟ್‌ಫೋನ್ 1.3GHz ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ QM215 ಪ್ರೊಸೆಸರ್ ಮತ್ತು Adreno 308 GPU ಹೊಂದಿದೆ. ಇನ್ನು ಸ್ಟೋರೇಜ್ ಸ್ಪೇಸ್ ಅನ್ನು ನೋಡುವುದಾದರೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದ್ದು ಮೈಕ್ರೊ SD ಕಾರ್ಡ್ ಬಳಸಿ 512GB ವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್‌ಫೋನ್ 3.5mm ಹೆಡ್‌ಫೋನ್ ಕನೆಕ್ಟರ್, ಮೈಕ್ರೋ USB ಪೋರ್ಟ್, Wi-Fi, ಬ್ಲೂಟೂತ್ v4.1 ಮತ್ತು ಡ್ಯುಯಲ್ ಸಿಮ್ ಬೆಂಬಲವನ್ನು ನೀಡುವುದರ ಜೊತೆಗೆ ಅಕ್ಸೆಲೆರೊಮೀಟರ್ ಸೆನ್ಸಾರ್, ಲೈಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ.
JioPhone Next ನ ಆರಂಭಿಕ ಬೆಲೆ ಸುಮಾರು ರೂ 6,499 ಆಗಿದೆ. ಜಿಯೋ ಅಧಿಕೃತ ಸೈಟ್ ನಲ್ಲಿ ಪ್ರಸ್ತುತ ಸೀಮಿತ ಸಮಯದ ಆಫರ್ ಅನ್ನು ನೀಡುತ್ತಿದ್ದು ಗ್ರಾಹಕರು ಯಾವುದೇ 4G ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ ಕೇವಲ 4,499 ರೂಗಳಿಗೆ JioPhone Next ಅನ್ನು ಖರೀದಿಸಬಹುದಾಗಿದೆ.