JioPhone 2: ರಿಲಯನ್ಸ್ ಜಿಯೋ ಫೋನ್ 2 ಇದೇ 4ನೇ ಏಪ್ರಿಲ್ 2019 ರಂದು ಮುಂದಿನ ಮಾರಾಟಕ್ಕೆ ಸಿದ್ಧವಾಗಿದೆ.

Updated on 02-Apr-2019
HIGHLIGHTS

ಈ JioPhone 2 ಫೋನ್ ಕೇವಲ 2999 ರೂಗಳಲ್ಲಿ ಲಭ್ಯವಿರುತ್ತದೆ.

JioPhone 2 ಇದೇ 4ನೇ ಏಪ್ರಿಲ್ 2019 ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ.

ಈ ಹ್ಯಾಂಡ್ಸೆಟ್ 2000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಈ ಫೋನ್ 4ನೇ ಏಪ್ರಿಲ್ 2019 ರಂದು ಮಧ್ಯಾಹ್ನ 12 ಗಂಟೆಯ ನಂತರ jio.com ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.

ಈಗಾಗಲೇ ನಿಮಗೆ ಹೇಳಿರುವಂತೆ ಜಿಯೋ ಹೈ ಸ್ಪೀಡ್ ಇಂಟರ್ನೆಟ್ ಸೇವೆಯೊಂದಿಗೆ ಮೊಬೈಲ್ ತಂತ್ರಜ್ಞಾನದ ನಾಲ್ಕನೇ ಪೀಳಿಗೆಯ (4G) ಆಗಿದೆ.  ಅದು ಭಾರತದಲ್ಲಿ  ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗಳ ವಿತರಣೆಯನ್ನು ಶಕ್ತಗೊಳಿಸುತ್ತದೆ. ಹೈ ಡೆಫಿನಿಷನ್ ವಾಯ್ಸ್ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಪ್ರವೇಶವನ್ನು ಶಕ್ತಗೊಳಿಸುವ ದೂರಸಂಪರ್ಕ ತಂತ್ರಜ್ಞಾನದ ಧೀರ್ಘಕಾಲಿಕ ವಿಕಸನವನ್ನು LTE ಉಲ್ಲೇಖಿಸುತ್ತದೆ. ಇದರ ಮಧ್ಯೆ ಜಿಯೋ ತನ್ನ ಎರಡನೇ ಫೋನ್ ಆಗಿರುವ JioPhone 2 ಅನ್ನು ಮತ್ತೊಂಮ್ಮೆ ಮಾರಾಟಕ್ಕೆ ತರಲಿದೆ. 

ಈ ಫೋನ್ 4ನೇ ಏಪ್ರಿಲ್ 2019 ರಂದು ಮಧ್ಯಾಹ್ನ 12 ಗಂಟೆಯ ನಂತರ jio.com ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ಇದು ರಿಲಯನ್ಸ್ ಜಿಯೋವಿನ ಮೊದಲ 4G ಫೀಚರ್ ಫೋನಿನ ಉತ್ತರಾಧಿಕಾರಿಯಾಗಿದೆ. JioPhone 2 ಫೋನ್ ಕೇವಲ 2999 ರೂಗಳಲ್ಲಿ ಲಭ್ಯವಿರುತ್ತದೆ. ಈ ಫೀಚರ್ ಫೋನ್ ಉಚಿತ ಧ್ವನಿ ಮತ್ತು ಡೇಟಾ ಕೊಡುಗೆಗಳೊಂದಿಗೆ ಜತೆಗೂಡಿಸಲ್ಪಟ್ಟಿದೆ. ಸ್ಮಾರ್ಟ್ಫೋನ್ ಖರೀದಿಸುವವರು ಮೂರು ವಿಭಿನ್ನ ಯೋಜನೆಗಳನ್ನು ಆಯ್ಕೆ ಮಾಡಬಹುದು ಅವೆಂದರೆ 49, 99 ಮತ್ತು 153 ರೂಗಳ ಯೋಜನೆಗಳನ್ನು ಈ ಅನುಕೂಲ ಪಡೆಯಲು ಬಳಸಬೇಕೆಗುತ್ತದೆ.

ಈ ಎಲ್ಲಾ ಯೋಜನೆಗಳು 28 ದಿನಗಳ ವ್ಯಾಲಿಡಿಟಿಯ ಮೌಲ್ಯಮಾಪನದೊಂದಿಗೆ ಬರುತ್ತವೆ. ಮತ್ತು ವಿವಿಧ ಧ್ವನಿ ಮತ್ತು ಇಂಟರ್ನೆಟ್ ಡೇಟಾವನ್ನು ನೀಡುತ್ತವೆ. 49 ರೂಗಳ ರಿಚಾರ್ಜ್ ಯೋಜನೆಯೊಂದಿಗೆ ದಿನಕ್ಕೆ 50 SMS ಬಳಕೆದಾರರು 1GB ಯ ಡೇಟಾವನ್ನು ಪಡೆಯುತ್ತಾರೆ. 99 ರೂಗಳ ರೀಚಾರ್ಜ್ ಯೋಜನೆಯು 14GB ಯ ಡೇಟಾ ಮತ್ತು 300 ಎಸ್ಎಂಎಸ್ಗಳನ್ನು ನೀಡುತ್ತದೆ. 153 ರೂಗಳ ರೀಚಾರ್ಜ್ ಪ್ಲಾನ್ 42GB ಡೇಟಾ ಜೊತೆಗೆ ಅನಿಯಮಿತ SMS ಡೇಟಾವನ್ನು ಉಚಿತ ಧ್ವನಿ ಕರೆಗಳೊಂದಿಗೆ ಮತ್ತೊಂದೆಡೆಯಲ್ಲಿ ಪ್ಯಾಕ್ ಮಾಡುತ್ತದೆ.

JioPhone 2 ಒಂದು ಪೂರ್ಣವಾದ QWERTY ಕೀಲಿಮಣೆ ವಿನ್ಯಾಸವನ್ನು ಹೊಂದಿದೆ. ಈ ಫೋನ್ 2.4 ಇಂಚಿನ QVGA ಡಿಸ್ಪ್ಲೇಯನ್ನು ಪ್ರದರ್ಶಿಸುತ್ತದೆ. ಡ್ಯುಯಲ್ ಸಿಮ್ ಅನ್ನು ಬೆಂಬಲಿಸುತ್ತದೆ ಮತ್ತು KAI OS ಚಲಿಸುತ್ತದೆ. ಇದು 512MB RAM ನೊಂದಿಗೆ 4GB ಇಂಟರ್ನಲ್ ಸ್ಟೋರೇಜಿನೊಂದಿಗೆ ಮೈಕ್ರೊ SD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದಾಗಿದೆ JioPhone ನಂತೆಯೇ JioPhone 2 ಸಹ KAI OS ನಲ್ಲಿ ನಡೆಯುತ್ತದೆ ಮತ್ತು VoLTE ಅನ್ನು ಬೆಂಬಲಿಸುತ್ತದೆ. ಆದಾಗ್ಯೂ ಇದು VoWiFi ಅನ್ನು ಬೆಂಬಲಿಸುತ್ತದೆ. ಮತ್ತು ಮಲ್ಟಿಮೀಡಿಯಾ ಬ್ರಾಡ್ಕಾಸ್ಟ್ ಮಲ್ಟಿಕಾಸ್ಟ್ ಸೇವೆ (eMBMS) ಅನ್ನು ಸಹ ವಿಕಸನಗೊಳಿಸುತ್ತದೆ. 

ಇದು NFC, WiFi ಸಂಪರ್ಕ, ಬ್ಲೂಟೂತ್ ಕಡಿಮೆ ಶಕ್ತಿಯಂತಹ ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಮತ್ತು FM ರೇಡಿಯೋ ಹೊಂದಿರುತ್ತದೆ. ಇದರ AGM ನಲ್ಲಿ ರನ್ ಮಾಡುವ ಪ್ರೊಸೆಸರ್ ಎನ್ನಲಾಗಿದೆ. ಆದರೆ ಪೂರ್ವವರ್ತಿಗಿಂತ ಹೋಲಿಸಿದರೆ ಕೆಲವೇ ಹಾರ್ಡ್ವೇರ್ ಬದಲಾವಣೆಗಳಿವೆ. ಇದರಲ್ಲಿ ಕ್ವಾಲ್ಕಾಮ್ 205 ಮೊಬೈಲ್ ಪ್ಲಾಟ್ಫಾರ್ಮ್ (MSM8905) ಇದನ್ನು ನಡೆಸುತ್ತದೆ. ಇದರಲ್ಲಿ 2MP ಹಿಂಬದಿಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಹೊಂದಿದ್ದು ಇದು VGA ​​ಸೆನ್ಸರ್ ಜೊತೆಗೆ ಬರುತ್ತದೆ. ಈ ಹ್ಯಾಂಡ್ಸೆಟ್ 2000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

 

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :