itel Zeno 10 Launched In India: ಭಾರತದಲ್ಲಿ ಐಟೆಲ್ ಕಂಪನಿ ತನ್ನ ಲೇಟೆಸ್ಟ್ ಬಜೆಟ್ itel Zeno 10 ಸ್ಮಾರ್ಟ್‌ಫೋನ್ 8MP AI ಡುಯಲ್ ಕ್ಯಾಮೆರಾದೊಂದಿಗೆ 3GB RAM ಮತ್ತು 64GB ಸ್ಟೋರೇಜ್ ಕೇವಲ ₹5,999 ರೂಗಳಿಗೆ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದ್ದು ಬಿಡುಗಡೆಯ ಕೊಡುಗೆಯಾಗಿ ಭಾರತದಲ್ಲಿ ಬಳಕೆದಾರರಿಗೆ 5000mAh ಬ್ಯಾಟರಿ ಮತ್ತು Dyanamic Bar ಫೀಚರ್ಗಳನ್ನು ಅತಿ ಕಡಿಮೆ ಬೆಲೆಗೆ ನೀಡುತ್ತಿದೆ. itel Zeno 10 ಸ್ಮಾರ್ಟ್‌ಫೋನ್ ಆಫರ್ ಬೆಲೆಯೊಂದಿಗೆ ಇದರ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಈ ಸ್ಮಾರ್ಟ್ಫೋನ್ ಈಗಾಗಲೇ ಅಮೆಜಾನ್ ಮೂಲಕ ಮಾರಾಟಕ್ಕೆ ಪಟ್ಟಿಯಾಗಿದ್ದು ಇದರ 3GB RAM (ವರ್ಚುಯಲ್ Upto 8GB) ಮತ್ತು 64GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ ಕೇವಲ ₹5,999 ರೂಗಳಿಗೆ ಮತ್ತೊಂದು ಇದರ 4GB RAM (ವರ್ಚುಯಲ್ Upto 12GB) ಮತ್ತು 64GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ ಕೇವಲ ₹6,499 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ ಬಿಡುಗಡೆಯ ಕೊಡುಗೆಯಾಗಿ itel Zeno 10 ಸ್ಮಾರ್ಟ್ಫೋನ್ ಅನ್ನು ಇಂದಿನಿಂದ 12ನೇ ಜನವರಿವರೆಗೆ ಖರೀದಿಸಿದರೆ ಹೆಚ್ಚುವರಿಯಾಗಿ 300 ಮತ್ತು 500 ರೂಗಳ ಪ್ಲಾಟ್ ಡಿಸ್ಕೌಂಟ್ ಸಹ ನೀಡುತ್ತಿದೆ.
ಅಲ್ಲದೆ ನೀವು ಈ itel Zeno 10 ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ itel Zeno 10 ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 5,650 / 6,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
itel Zeno 10 ಸ್ಮಾರ್ಟ್ಫೋನ್ 6.6 ಇಂಚಿನ HD+ IPS ಡಿಸ್ಪ್ಲೇಯನ್ನು ಹೊಂದಿದ್ದು ಸ್ಕ್ರೀನ್ ಮೇಲ್ಭಾಗದಲ್ಲಿ Dyanamic Bar ಫೀಚರ್ನೊಂದಿಗೆ ಫೋನ್ 8MP Ai ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಅಲ್ಲದೆ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. itel Zeno 10 ಸ್ಮಾರ್ಟ್ಫೋನ್ Unisoc T603 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ 5000mAh ಪವರ್ ಬ್ಯಾಟರಿಯೊಂದಿಗೆ ಒದಗಿಸಲಾಗಿದೆ. ಈ ಬ್ಯಾಟರಿ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. itel Zeno 10 ಸ್ಮಾರ್ಟ್ಫೋನ್ USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಆಕ್ಟಾ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.