50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ Powerful ಪ್ರೊಸೆಸರ್‌ನ Itel P55 Power 5G ಲಾಂಚ್ | Tech News

50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ Powerful ಪ್ರೊಸೆಸರ್‌ನ Itel P55 Power 5G ಲಾಂಚ್ | Tech News
HIGHLIGHTS

Itel P55 Power 5G ಅನ್ನು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹೊಸ 5G ಫೋನ್ ಪರಿಚಯಿಸಿದೆ.

Itel P55 Power 5G ಬೇಸ್ ವೇರಿಯಂಟ್ ನಿಮಗೆ ಕೇವಲ 9,699 ರೂಗಳ ಬೆಲೆಯಲ್ಲಿಖರೀದಿಗೆ ಲಭ್ಯವಿದೆ

Itel P55 Power 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ ಮತ್ತು FHD ಡಿಸ್ಪ್ಲೇಯಿಂದ ಚಾಲಿತವಾಗಿದೆ.

ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಐಟೆಲ್ (Itel) ಭಾರತದಲ್ಲಿ ಅಧಿಕೃತವಾಗಿ Itel P55 Power 5G ಅನ್ನು ಭಾರತದಲ್ಲಿ ಅತ್ಯಂತ ಕಡಿಮೆ ಅಥವಾ ಜನ ಸಾಮಾನ್ಯರ ಕೈಗೆಟುಕುವ ಬೆಲೆಗೆ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ ಮತ್ತು FHD ಡಿಸ್ಪ್ಲೇಯಿಂದ ಚಾಲಿತವಾಗಿದೆ. ಕಂಪನಿ ಇದರಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಬಜೆಟ್ ವಿಭಾಗಕ್ಕೆ ಸೇರಿವೆ. ಆದರೂ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಅವು ಹೊಂದಿವೆ. ಆದರೆ ಇದರಲ್ಲಿ ಐಟೆಲ್ ಸ್ಮಾರ್ಟ್‌ಫೋನ್ ಬಗ್ಗೆ ಒಂದಿಷ್ಟು ಹೈಲೈಟ್ ಮಾಹಿತಿಯನ್ನು ನೀಡಿದ್ದೇವೆ.

Also Read: ನಿಮ್ಮ PAN ಕಾರ್ಡ್ ಕಳೆದೋಯ್ತಾ? ಚಿಂತೆಯಿಲ್ಲದೆ ಫೋನ್‌ನಿಂದ ಈ ರೀತಿ ಇ-ಪ್ಯಾನ್ Download ಮಾಡಿಕೊಳ್ಳಿ

Itel P55 Power 5G ಬೆಲೆ ಮತ್ತು ಲಭ್ಯತೆ

ಕಂಪನಿಯು 4GB RAM ಮತ್ತು 64GB ಸ್ಟೋರೇಜ್ ಜೊತೆಗಿನ ಐಟೆಲ್ ಬೇಸ್ ವೇರಿಯಂಟ್ ನಿಮಗೆ ಕೇವಲ 9,699 ರೂಗಳ ಬೆಲೆಯಲ್ಲಿಖರೀದಿಗೆ ಲಭ್ಯವಿದೆ. ಇದರ ಕ್ರಮವಾಗಿ ನಿಮಗೆ 8GB RAM ಹೊಂದಿರುವ ಟಾಪ್-ಎಂಡ್ ಟ್ರಿಮ್ ಬೆಲೆ ಸುಮಾರು 9,999 ರೂಗಳಾಗಿದೆ. Itel P55 Power 5G ಸ್ಮಾರ್ಟ್ಫೋನ್ 4ನೇ ಅಕ್ಟೋಬರ್ 2023 ರಿಂದ ಇದರ ಮೊದಲ ಮಾರಾಟ ಶುರುವಾಗಲಿದ್ದು ಆಸಕ್ತ ಗ್ರಾಹಕರು ಅಮೆಜಾನ್‌ನಿಂದ ಖರೀದಿಸಬಹುದು.

Itel P55 Power 5G launched in India
Itel P55 Power 5G launched in India

Itel P55 Power 5G ವಿಶೇಷತೆಗಳೇನು?

ಭಾರತದಲ್ಲಿ ಬಿಡುಗಡೆಯಾದ ಈ ಲೇಟೆಸ್ಟ್ Itel P55 Power 5G ಸ್ಮಾರ್ಟ್ಫೋನ್ 6.6 ಇಂಚಿನ HD+ ಡಿಸ್ಪ್ಲೇ ಜೊತೆಗೆ 90 Hz ರಿಫ್ರೆಶ್ ರೇಟ್ ಪ್ಯಾನೆಲ್ ಮತ್ತು 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದೆ. ಹುಡ್ ಅಡಿಯಲ್ಲಿ ಸ್ಮಾರ್ಟ್‌ಫೋನ್ MediaTek Dimensity 6080 ಜೊತೆಗೆ 8GB RAM ಮತ್ತು 128GB ವರೆಗೆ ಇದರ ಸ್ಟೋರೇಜ್ ಅನ್ನು ಸಹ ಹೊಂದಿದೆ. ಕೊನೆಯದಾಗಿ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜ್ ಸಹ ಸಪೋರ್ಟ್ ಮಾಡುತ್ತದೆ. ಅಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಆಂಡ್ರಾಯ್ಡ್ 13 ಆಧಾರಿತ ItelOS ಅನ್ನು ಔಟ್ ಆಫ್ ದ ಬಾಕ್ಸ್‌ ಬರುತ್ತದೆ.

Also Read: Vivo V29 5G ಮತ್ತು Vivo V29 Pro 5G ಬಿಡುಗಡೆಗೆ ಡೇಟ್ ಫಿಕ್ಸ್! Interesting ಬೆಲೆ ಮತ್ತು ಫೀಚರ್‌ಗಳೇನು?

ಇದರ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಐಟೆಲ್ ಸ್ಮಾರ್ಟ್ಫೋನ್ AI ಸೆನ್ಸರ್ ಜೊತೆಗೆ 50MP ಪ್ರೈಮರಿ ಶೂಟರ್ ಅನ್ನು ಹೊಂದಿದೆ. ಇದು ಸೆಕೆಂಡರಿ ಶೂಟರ್ ಮತ್ತು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಸಂಪರ್ಕ ಆಯ್ಕೆಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್ಫೋನ್ 5G, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS ಮತ್ತು ಚಾರ್ಜಿಂಗ್ಗಾಗಿ USB-C ಪೋರ್ಟ್ ಅನ್ನು ಪಡೆಯುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo