itel P40: ಭಾರತದಲ್ಲಿ ಐಟೆಲ್ ತನ್ನ ಹೊಸ P ಸರಣಿಯಲ್ಲಿ ಇತ್ತೀಚಿನ ಬಜೆಟ್ ಸ್ನೇಹಿ itel P40 ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಫೋನ್‌ನ ವಿನ್ಯಾಸವು POCO ಮೊಬೈಲ್ ಅನ್ನು ನೆನಪಿಸುತ್ತದೆ. ಈ ಫೋನ್ನಲ್ಲಿ ಭದ್ರತೆಗಾಗಿ ಫಿಸಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್‌ಯಿದ್ದು ಮುಂಭಾಗದ ಕ್ಯಾಮೆರಾವನ್ನು ಇರಿಸಲು ವಾಟರ್‌ಡ್ರಾಪ್ ನಾಚ್ ಮತ್ತು ಫೋನ್‌ನ ಹಿಂಭಾಗದ ಪ್ಯಾನೆಲ್‌ನಲ್ಲಿ ವಿಶಿಷ್ಟವಾದ ಟೆಕ್ಸ್ಚರ್ಡ್ ಫಿನಿಶ್ ಹೊಂದಿದೆ. ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆನ್ಸರ್ ಅನ್ನು ಸಹ ಈ ಫೋನ್ ಒಳಗೊಂಡಿದೆ. itel P40 ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 6000mAh ಬ್ಯಾಟರಿ, SC9863A ಪ್ರೊಸೆಸರ್, Android 12 Go ಎಡಿಷನ್ ಮತ್ತು ಇತರ ಫೀಚರ್‌ಗಳನ್ನು ಒಳಗೊಂಡಿದೆ.
itel P40 ಸ್ಮಾರ್ಟ್ಫೋನ್ ಕೇವಲ ರೂ 7,699 ಆಗಿದ್ದು ಫೋರ್ಸ್ ಬ್ಲಾಕ್, ಡ್ರೀಮಿ ಬ್ಲೂ ಮತ್ತು ಲಕ್ಸುರಿಯಸ್ ಗೋಲ್ಡ್ ಕಲರ್ ಗಳಲ್ಲಿ ಲಭ್ಯವಿದೆ. Itel ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಈ ಫೋನ್ ಅನ್ನು ನೀವು ಖರೀದಿಸಬಹುದು.
https://twitter.com/itel_india/status/1636345988062277632?ref_src=twsrc%5Etfw
Itel P60 ವಾಟರ್‌ಡ್ರಾಪ್ ಜೊತೆಗೆ 6.6 ಇಂಚಿನ HD ಡಿಸ್ಪ್ಲೇ ಜೊತೆಗೆ 1612 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 120 Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಈ ಫೋನ್ 6000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ 57 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು Android 12 Go ಎಡಿಷನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಭದ್ರತೆಗಾಗಿ ಹಿಂಭಾಗದಲ್ಲಿ ಫಿಸಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ ಮತ್ತು GPS ಸೇರಿವೆ.
itel P40 ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸೆನ್ಸರ್ಗಳನ್ನು ಹೊಂದಿದೆ. 13MP ಪ್ರಾಥಮಿಕ ಸೆನ್ಸರ್ ಮತ್ತು ಇನ್ನೊಂದು VGA ಸೆಕೆಂಡರಿ ಲೆನ್ಸ್. ಸೆಲ್ಫಿ ತೆಗೆಯಲು ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. ಈ ಫೋನ್ 6GB + 32GB, 4GB + 64GB, ಮತ್ತು 7GB + 64GB ಸ್ಟೋರೇಜ್ ಸೇರಿದಂತೆ ಮೆಮೊರಿ ಫ್ಯೂಷನ್ ತಂತ್ರಜ್ಞಾನವು ಇಂಟರ್ನಲ್ ನ ಒಂದು ಭಾಗವನ್ನು RAM ಆಗಿ ಬಳಸುತ್ತದೆ.