ಹೊಸ ವರ್ಷದಲ್ಲಿ ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ಪವರ್ಫುಲ್ ಸ್ಮಾರ್ಟ್ ಫೋನ್ (Powerful Smartphone) ಖರೀದಿಸಲು ಯೋಚಿಸುತ್ತಿದ್ದರೆ ನಿಮಗೆ ಸ್ವಲ್ಪ ಸಹಾಯ ಮಾಡಲಿದ್ದೇವೆ. ಸಾಮಾನ್ಯವಾಗಿ ಒಂದು ಸ್ಮಾರ್ಟ್ ಫೋನ್ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಕಾರ್ಯ ನಿರ್ವಹಿಸಬೇಕೆಂದರೆ ಅದಕ್ಕೆ ಮೂಲ ಅದರೊಳಗಿರುವ ಮೆಮೊರಿ ಅಥವಾ RAM ಆಗಿರುತ್ತದೆ. ಅಲ್ಲದೆ ನೀವು ಗಮನಿಸಿರಬಹುದು ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಹೆಚ್ಚಿನ RAM ಹೊಂದಿರುವ ಫೋನ್ಗಳಲ್ಲಿ ಮಾತ್ರ ಹೆಚ್ಚಿನ ಅಡ್ವಾನ್ಸ್ ಫೀಚರ್ಗಳನ್ನು ನೀಡುತ್ತಾರೆ ಇದಕ್ಕೆ ಕಾರಣ ಹೆಚ್ಚಿನ RAM ಅನೇಕ ಫೀಚರ್ಗಳನ್ನು ಸಪೋರ್ಟ್ ಮಾಡುತ್ತದೆ ಅಂತಹ ಕೈಗೆಟುಕುವ ಈ itel A70 ಫೋನ್ ಕೇವಲ ₹6,499 ರೂಗಳಿಗೆ ಮಾರಾಟವಾಗುತ್ತಿದೆ.
ಈ ಸ್ಮಾರ್ಟ್ಫೋನ್ ಆರಂಭಿಕವಾಗಿ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಕೇವಲ 6,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಕ್ರಮವಾಗಿ 4GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ₹7,329 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದರ ಕೊನೆಯದಾಗಿ 12GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ₹9,490 ರೂಗಳಲ್ಲಿ ಪಟ್ಟಿ ಮಾಡಲಾಗಿದೆ. ಅಲ್ಲದೆ ನೀವು Federal Bank ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯಬಹುದು.
ಈ ಸ್ಮಾರ್ಟ್ ಫೋನ್ Azure Blue, Field Gree, Brilliant Gold ಮತ್ತು Starlish Black ಎಂಬ ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ itel A70 ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 6,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ ಅದ್ದೂರಿಯ itel A70 ಸ್ಮಾರ್ಟ್‌ಫೋನ್ ಡೈನಾಮಿಕ್ ಬಾರ್ ವೈಶಿಷ್ಟ್ಯದೊಂದಿಗೆ 500nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ದೊಡ್ಡ 6.6 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ವೈಶಿಷ್ಟ್ಯವು ಆಪಲ್ ಐಫೋನ್ಗಳಲ್ಲಿ ಕಂಡುಬರುವ ಡೈನಾಮಿಕ್ ಐಲ್ಯಾಂಡ್ ಫೀಚರ್ನಿಂದ ಪ್ರೇರಿತವಾಗಿ ನೋಟಿಫಿಕೇಶನ್ಗಾಗಿ ಅದೇ ಮಾದರಿಯ ಫೀಚರ್ ಹೊಂದಿದೆ. ಇದನ್ನು ಕಂಪನಿ ಡೈನಾಮಿಕ್ ಪೋರ್ಟ್ ಎಂದು ಹೆಸರಿಸಿದೆ.
ಈ itel A70 ಫೋನ್ UniSoC T603 ಪ್ರೊಸೆಸರ್‌ನೊಂದಿಗೆ ಬಲವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಫೋನ್ ಸ್ಮೂತ್ ಆಗಿ ರನ್ ಮಾಡಲು ಆಂಡ್ರಾಯ್ಡ್ 13 (Go edition) ಹೊಂದಿದೆ. ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮರಿ 13MP ಸೂಪರ್ HDR ಕ್ಯಾಮೆರಾದೊಂದಿಗೆ ಬರುತ್ತಿದೆ. itel A70 ಸ್ಮಾರ್ಟ್ಫೋನ್ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ 5000mAh ಬ್ಯಾಟರಿಯನ್ನು ಟೈಪ್-ಸಿ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ.