12GB RAM ಮತ್ತು 5000mAh ಬ್ಯಾಟರಿಯ itel A70 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

12GB RAM ಮತ್ತು 5000mAh ಬ್ಯಾಟರಿಯ itel A70 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
HIGHLIGHTS

itel ಲೇಟೆಸ್ಟ್ ಫೀಚರ್ಗಳೊಂದಿಗೆ ಈ ಸ್ಮಾರ್ಟ್‌ಫೋನ್‌ ನಿಮಗೆ ಲಭ್ಯವಾಗಲಿದೆ.

itel A70 ಫೋನ್ 12GB RAM ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಕೇವಲ 6,999 ರೂಗಳಿಂದ ಶುರು ಮಾಡಿದೆ.

ಚೈನೀಸ್ ಟೆಕ್ ಕಂಪನಿ ಐಟೆಲ್ (itel) ಈ ಹೊಸ 2024 ವರ್ಷದಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲೇಟೆಸ್ಟ್ ಫೀಚರ್ಗಳೊಂದಿಗೆ ಈ ಸ್ಮಾರ್ಟ್‌ಫೋನ್‌ ನಿಮಗೆ ಲಭ್ಯವಾಗಲಿದೆ. ಇದನ್ನು ಕಂಪನಿ itel A70 ಎಂದು ಹೆಸರಿಸಿದ್ದು ಭಾರಿ ಆಕರ್ಷಕ ಲುಕ್ ಅನ್ನು ನೀಡಿದೆ. ಈ itel A70 ಸ್ಮಾರ್ಟ್ಫೋನ್ 256GB ಸ್ಟೋರೇಜ್ನೊಂದಿಗೆ ಭಾರತದ ಅತಿ ಕಡಿಮೆ ಅಂದ್ರೆ 10,000 ರೂಗಳೊಳಗೆ ಬರುವ ವಿಭಾಗಕ್ಕೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಅಲ್ಲದೆ ಫೋನ್ 12GB RAM ಮತ್ತು 5000mAh ಬ್ಯಾಟರಿಯನ್ನು ಹೊಂದಿರುವುದು ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ವಿಷಯವಾಗಿದೆ.

Also Read: UPI ಬಳಕೆಗೆ ಈ 2024 ವರ್ಷದಲ್ಲಿ ಬಂದಿರುವ 5 ಹೊಸ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಐಟೆಲ್ A70 ಬೆಲೆ ಮತ್ತು ಲಭ್ಯತೆ

itel A70 ಸ್ಮಾರ್ಟ್‌ಫೋನ್ ಅನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ ಖರೀದಿಸಬಹುದು ಮತ್ತು ಇದು 12GB RAM ಮತ್ತು 256GB ವರೆಗೆ ಸ್ಟೋರೇಜ್ ಹೊಂದಿದೆ. RAM ಸಾಮರ್ಥ್ಯವನ್ನು ಹೆಚ್ಚಿಸಲು ಈ ಫೋನ್ ಮೆಮೊರಿ ಫ್ಯೂಷನ್ ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಳ್ಳುತ್ತದೆ ಮತ್ತು 6GB ಸ್ಥಾಪಿಸಲಾದ RAM ಜೊತೆಗೆ ಇದು 6GB ವರ್ಚುವಲ್ RAM ಅನ್ನು ಪಡೆಯುತ್ತದೆ. ಅಲ್ಲದೆ ಈ ಫೋನ್‌ನ ಸ್ಟೋರೇಜ್ ಅನ್ನು 2TB ವರೆಗೆ ಹೆಚ್ಚಿಸಬಹುದು.

itel A70

ಸ್ಮಾರ್ಟ್ಫೋನ್ ಆರಂಭಿಕವಾಗಿ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಕೇವಲ 6,999 ರೂಗಳಿಂದ ಶುರು ಮಾಡಿದೆ. ಇದರ ಕ್ರಮವಾಗಿ 6GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 7,999 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಅಲ್ಲದೆ ನೀವು ಬ್ಯಾಂಕ್ ಕೊಡುಗೆಗಳ ನಂತರ ಇದರ ಆರಂಭಿಕ ಬೆಲೆ 5,999 ರೂಗಳಲ್ಲಿ ಪಡೆಯಬಹುದು. ಈ ಫೋನ್ ಅಮೆಜಾನ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಬಹುದು ಮತ್ತು ಬ್ರಿಲಿಯಂಟ್ ಗೋಲ್ಡ್, ಸ್ಟಾರ್ಲಿಶ್ ಬ್ಲ್ಯಾಕ್, ಫೀಲ್ಡ್ ಗ್ರೀನ್ ಮತ್ತು ಅಜುರೆ ಬ್ಲೂ ಎಂಬ 4 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

itel A70 ವಿಶೇಷಣಗಳು

ಹೊಸ ಸ್ಮಾರ್ಟ್‌ಫೋನ್ ಡೈನಾಮಿಕ್ ಬಾರ್ ವೈಶಿಷ್ಟ್ಯದೊಂದಿಗೆ 500nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ದೊಡ್ಡ 6.6 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ವೈಶಿಷ್ಟ್ಯವು ಅಪ್ಲೆ ಐಫೋನ್ನಲ್ಲಿ ಕಂಡುಬರುವ ಡೈನಾಮಿಕ್ ಐಲ್ಯಾಂಡ್ ಫೀಚರ್ನಿಂದ ಪ್ರೇರಿತವಾಗಿ ನೋಟಿಫಿಕೇಶನ್ಗಾಗಿ ಅದೇ ಮಾದರಿಯ ಫೀಚರ್ ಹೊಂದಿದೆ. ಇದನ್ನು ಕಂಪನಿ ಡೈನಾಮಿಕ್ ಪೋರ್ಟ್ ಎಂದು ಹೆಸರಿಸಿದೆ.

ಈ ಫೋನ್ UniSoC T603 ಪ್ರೊಸೆಸರ್‌ನೊಂದಿಗೆ ಬಲವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಫೋನ್ ಸ್ಮೂತ್ ಆಗಿ ರನ್ ಮಾಡಲು Android 13 (Go edition) ಹೊಂದಿದೆ. ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. 13MP ಸೂಪರ್ HDR ಕ್ಯಾಮೆರಾದೊಂದಿಗೆ ಬರುತ್ತಿದೆ. itel A70 ಸ್ಮಾರ್ಟ್ಫೋನ್ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ 5000mAh ಬ್ಯಾಟರಿಯನ್ನು ಟೈಪ್-ಸಿ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo