iQOO Z9x 5G ಭಾರತದಲ್ಲಿ Sony IMX882 ಸೆನ್ಸರ್‌ನೊಂದಿಗೆ ನಾಳೆ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಭಾರತದಲ್ಲಿ ನಾಳೆ ಅಂದ್ರೆ 16ನೇ ಮೇ 2024 ರಂದು iQOO Z9X 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗಿದೆ.
iQOO Z9X 5G ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ, 44W ಫಾಸ್ಟ್ ಚಾರ್ಜ್‌ನೊಂದಿಗೆ ಬಿಡುಗಡೆಯಾಗಲಿದೆ.
iQOO Z9X 5G ಸ್ಮಾರ್ಟ್‌ಫೋನ್ 50MP ಪ್ರೈಮರಿ ಕ್ಯಾಮೆರಾ Sony IMX882 ಸೆನ್ಸರ್‌ನೊಂದಿಗೆ ಬರುವ ನಿರೀಕ್ಷೆಗಳಿವೆ.
iQOO Z9x 5G to launch in India tomorrow: ಭಾರತದಲ್ಲಿ ಐಕ್ಯೂ ಸ್ಮಾರ್ಟ್ಫೋನ್ ಕಂಪನಿ ನಾಳೆ ತನ್ನ ಮುಂಬರಲಿರುವ ಮತ್ತು ಲೇಟೆಸ್ಟ್ iQOO Z9x 5G ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದನ್ನು ಕಂಪನಿ ನಾಳೆ ಅಂದ್ರೆ 16ನೇ ಮೇ 2024 ರಂದು ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿದೆ. ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆಯೇ ಹಲವಾರು ಫೀಚರ್ಗಳನ್ನು ಹಂಚಿಕೊಳ್ಳುತ್ತಿರುವ ಟೀಸರ್‌ಗಳಲ್ಲಿ iQOO Z9x 5G ಸ್ಮಾರ್ಟ್‌ಫೋನ್‌ನ ಚಿಪ್‌ಸೆಟ್, ಚಾರ್ಜಿಂಗ್, ವಿನ್ಯಾಸ ಮತ್ತು ಬ್ಯಾಟರಿ ವಿವರಗಳನ್ನು ಸಹ ಬಹಿರಂಗಪಡಿಸಿದೆ.
ಭಾರತದಲ್ಲಿ iQOO Z9x 5G ಫೀಚರ್ ಮತ್ತು ವಿಶೇಷಣಗಳೇನು?
ಈ ಮುಂಬರಲಿರುವ 6.67 ಇಂಚಿನ FHD+ AMOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರ ಮತ್ತು DT-ಸ್ಟಾರ್ 2 ಪ್ಲಸ್ ಗ್ಲಾಸ್ ರಕ್ಷಣೆಯೊಂದಿಗೆ ಪ್ರದರ್ಶಿಸುತ್ತದೆ. ಸ್ಮಾರ್ಟ್ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ.
iQOO Z9x 5G ಸ್ಮಾರ್ಟ್‌ಫೋನ್‌ನ OIS ಜೊತೆಗೆ 50MP ಮೆಗಾಪಿಕ್ಸೆಲ್ ಪ್ರೈಮರಿ Sony IMX882 ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಒಳಗೊಂಡಿರುತ್ತದೆ. ಇದು ನೈಟ್ ಮೋಡ್ ಮತ್ತು ಸೂಪರ್‌ಮೂನ್‌ನಂತಹ ವಿವಿಧ ಫೋಟೋಗ್ರಾಫಿ ಮೂಡ್ ಅನ್ನು ಸಹ ಬಳಸಬಹುದು. ಅಲ್ಲಫ್ದೆ ಫೋನ್ ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ ಇದು 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸುತ್ತದೆ.iQoo Z9x 5G Android 14 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ FuntouchOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯು ಈಗಾಗಲೇ ದೃಢಪಡಿಸಿದೆ. ಸ್ಮಾರ್ಟ್‌ಫೋನ್ ಎರಡು ವರ್ಷಗಳ ಆಂಡ್ರಾಯ್ಡ್ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಹೊಂದಲಿದೆ.
Also Read: Reliance Jio ರಿಚಾರ್ಜ್ ಮಾಡ್ಕೊಳ್ಳಿ 365 ದಿನಗಳಿಗೆ Unlimited 5G ಡೇಟಾದೊಂದಿಗೆ SonyLIV ಮತ್ತು ZEE5 ಉಚಿತ!
ಫೋನ್ 44W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 6,000mAh ಬ್ಯಾಟರಿಯಿಂದ ಚಾಲಿತವಾಗಿದೆ ಮತ್ತು IP54 ಸ್ಪ್ಲಾಶ್ ಪ್ರತಿರೋಧವನ್ನು ಹೊಂದಿದೆ. ಹೆಚ್ಚುವರಿಯಾಗಿ ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ ಮತ್ತು ಬ್ರಷ್ಡ್ ಗ್ರೀನ್ ಮತ್ತು ಗ್ರ್ಯಾಫೀನ್ ಬ್ಲೂ ಬಣ್ಣಗಳಲ್ಲಿ ನೀಡಲಾಗುತ್ತದೆ. ಇದಲ್ಲದೆ IP64 ಧೂಳು ಮತ್ತು ನೀರಿನ ಪ್ರತಿರೋಧದ ರೇಟಿಂಗ್ ಅನ್ನು ನೀಡುವ ವಿಭಾಗದಲ್ಲಿ ಸ್ಮಾರ್ಟ್ಫೋನ್ ಮೊದಲನೆಯದು ಎಂದು ಕಂಪನಿಯು ಹೇಳುತ್ತದೆ.
ಭಾರತದಲ್ಲಿ ಐಕ್ಯೂ Z9x 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ ವಿವರಗಳು
ಮುಂಬರುವ iQoo Z9x ಬೆಲೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 2 ರೂಪಾಂತರಗಳಲ್ಲಿ ಬಿಡುಗಡೆಯನ್ನು ನಿರೀಕ್ಷಿಸಬಹುದು. ಫೋನ್ 6GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗುವುದನ್ನು ನಿರೀಕ್ಷಿಸಬಹುದು. ಇತ್ತೀಚಿನ ವದಂತಿಗಳನ್ನು ನಂಬುವುದಾದರೆ ಭಾರತದಲ್ಲಿ ಈ ಸ್ಮಾರ್ಟ್ಫೋನ್ ಬೆಲೆಯನ್ನು ಸುಮಾರು 20,000 ರೂಗಳಿಗೆ ನಿರೀಕ್ಷಿಸಲಾಗಿದೆ. ಮಾರಾಟದ ದಿನಾಂಕಕ್ಕೆ ಸಂಬಂಧಿಸಿದಂತೆ ಬ್ರ್ಯಾಂಡ್ ಬಿಡುಗಡೆಯಾದ ನಂತರ ಅಮೆಜಾನ್ ಮೂಲಕ ಒಂದು ವಾರದೊಳಗೆ ಮಾರಾಟವನ್ನು ಪ್ರಾರಂಭಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile