50MP ಕ್ಯಾಮೆರಾದೊಂದಿಗೆ iQOO Z9s Series ನಾಳೆ ಬಿಡುಗಡೆಯಾಗಲಿದೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 20-Aug-2024
HIGHLIGHTS

iQOO Z9s Series ಸ್ಮಾರ್ಟ್ಫೋನ್ ನಾಳೆ ಅಂದ್ರೆ 21ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ.

ಕಂಪನಿ ಪ್ರಸ್ತುತ ಈ ಸರಣಿಯಲ್ಲಿ iQOO Z9s ಮತ್ತು iQOO Z9s Pro ಎಂಬ ಎರಡು ಫೋನ್ಗಳನ್ನು ಪರಿಚಯಿಸಲಿದೆ.

ಇವು ಪ್ರತ್ಯೇಕವಾಗಿ ಅಮೆಜಾನ್ (Amazon) ಮೂಲಕ ಸುಮಾರು 25,000 ರೂಗಳಿಂದ 30,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಐಕ್ಯೂ ಕಂಪನಿ ತನ್ನ ಲೇಟೆಸ್ಟ್ iQOO Z9s Series ಸ್ಮಾರ್ಟ್ಫೋನ್ಗಳನ್ನು ನಾಳೆ ಅಂದ್ರೆ 21ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ. ಕಂಪನಿ ಪ್ರಸ್ತುತ ಈ ಸರಣಿಯಲ್ಲಿ iQOO Z9s ಮತ್ತು iQOO Z9s Pro ಎಂಬ ಎರಡು ಫೋನ್ಗಳನ್ನು ಪರಿಚಯಿಸಲಿದೆ. ಇದನ್ನು ಐಕ್ಯೂ ಪ್ರತ್ಯೇಕವಾಗಿ ಅಮೆಜಾನ್ (Amazon) ಮೂಲಕ ಸುಮಾರು 25,000 ರೂಗಳಿಂದ 30,000 ರೂಗಳೊಳಗೆ ಮಾರಾಟಕ್ಕೆ ಬರುವುದಾಗಿ ನಿರೀಕ್ಷಿಸಲಾಗಿದೆ. ಕಂಪನಿ ಈ ಸ್ಮಾರ್ಟ್ಫೋನ್ಗಳ ಬಿಡುಗಡೆಗೂ ಮುಂಚೆಯೇ ಕ್ಯಾಮೆರಾ, ಬ್ಯಾಟರೀ ಮತ್ತು ಡಿಸ್ಪ್ಲೇಯ ಬಗ್ಗೆ ಒಂದಿಸತು ಮಾಹಿತಿಗಳನ್ನು ಈಗಾಗಲೇ ಬಹಿರಂಗಪಡಿಸಿದ್ದು ಅವುಗಳ ವಿವರಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

iQOO Z9s Series ನಿರೀಕ್ಷಿತ ಫೀಚರ್ ಮತ್ತು ವಿಶೇಷಣತೆಗಳು

ಈ ಐಕ್ಯೂ ಕಂಪನಿ ತನ್ನ ಲೇಟೆಸ್ಟ್ iQOO Z9s Series ಸ್ಮಾರ್ಟ್ಫೋನ್ಗಳ ನಿರೀಕ್ಷಿತ ಫೀಚರ್ ಮತ್ತು ವಿಶೇಷಣತೆಗಳ ಬಗ್ಗೆ ಮಾತನಾಡುವುದಾದರೆ ಈ ಎರಡೂ ಫೋನ್‌ಗಳು 120Hz 3D ಕರ್ವ್ಡ್ AMOLED ಸ್ಕ್ರೀನ್ ಜೊತೆಗೆ 4500 nits ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿವೆ. ಅಲ್ಲದೆ ಈ ಎರಡು ಫೋನ್‌ಗಳು ಹಿಂಭಾಗದಲ್ಲಿ ಔರಾ ರಿಂಗ್ ಲೈಟ್‌ನೊಂದಿಗೆ ಬರುತ್ತವೆ. ಈ ಫೋನ್ಗಳಲ್ಲಿ ಮೊದಲಿಗೆ iQOO Z9s ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ ಬಂದರ iQOO Z9s Pro ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಎರಡೂ ಫೋನ್‌ಗಳಲ್ಲಿನ iQOO Z9s Pro ಪ್ರೀಮಿಯಂ ವೆಜಿಟೇರಿಯನ್ ಸ್ಕಿನ್ ವಿನ್ಯಾಸ ಮತ್ತು ಹೊಸ ಹಿಂಬದಿಯ ಕ್ಯಾಮೆರಾ ವಿನ್ಯಾಸದೊಂದಿಗೆ ಬರುತ್ತದೆ. ಇದು 50MP ಸೋನಿ IMX882 ಅನ್ನು 8MP ಅಲ್ಟ್ರಾ ವೈಡ್ ಸಂವೇದಕದೊಂದಿಗೆ ಜೋಡಿಸಲಾಗಿದೆ. ಇದಲ್ಲದೆ AI ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ದೃಢಪಡಿಸಿವೆ.

iQOO Z9s Series launch date confirmed for tomorrow

ಈ ಎರಡು ಸ್ಮಾರ್ಟ್ಫೋನ್ಗಳು ಬೇರೆ ಬೇರೆ ಮಾದರಿಯ ಪ್ರೊಸೆಸರ್ ಹೊಂದಿದ್ದು ಮೊದಲಿಗೆ iQOO Z9s Pro ಸ್ಮಾರ್ಟ್ಫೋನ್ Snapdragon 7 Gen 3 ಚಿಪ್ ಹೊಂದಿದ್ದರೆ iQOO Z9s ಸ್ಮಾರ್ಟ್ಫೋನ್ MediaTek Dimensity 7300 ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಫೋನ್‌ಗಳು ಒಂದಕ್ಕಿಂತ ಮತ್ತೊಂದು ಭಾರಿ ಅಂತರದ ವಿನ್ಯಾಸದ ವ್ಯತ್ಯಾಸಗಳನ್ನು ಕಾಣಬಹುದು ಆದರೆ ಈ ಎರಡು ಸ್ಮಾರ್ಟ್ಫೋನ್ಗಳು ಒಂದೇ ಮಾದರಿಯ 7.49mm ಮಾತ್ರ ಆಗಿದ್ದು ಅತ್ಯಂತ ತೆಳುವಾದ ವಿನ್ಯಾಸವನ್ನು ಹೊಂದಿರುವುದು ಗಮನಿಸಬೇಕಿರುವ ವಿಷಯವಾಗಿದೆ. ಈ ಫೋನ್‌ನಲ್ಲಿ ಒದಗಿಸಲಾದ ಬ್ಯಾಟರಿ ಮತ್ತು ಚಾರ್ಜ್ ತಂತ್ರಜ್ಞಾನದ ವಿಷಯಕ್ಕೆ ಬಂದರೆ ಈ ಫೋನ್‌ಗಳು 5500mAh ದೊಡ್ಡ ಬ್ಯಾಟರಿಯನ್ನು ಹೊಂದಿವೆ. ಅಲ್ಲದೆ ಈ ಎರಡು ಫೋನ್‌ಗಳು 80W ಫ್ಲ್ಯಾಷ್ ಚಾರ್ಜ್ ಬೆಂಬಲದೊಂದಿಗೆ ಬರುತ್ತವೆ.

Also Read: Home Security Camera: ನಿಮ್ಮ ಫ್ಯಾಮಿಲಿ ಸುರಕ್ಷತೆಗಾಗಿ 1500 ರೂಗಳಿಗಿಂತ ಕಡಿಮೆ ಬೆಲೆಯ ಬೆಸ್ಟ್ ಹೋಂ ಸೆಕ್ಯೂರಿಟಿ ಕ್ಯಾಮೆರಾಗಳು!

iQOO Z9s Series launch date confirmed for tomorrow

iQOO Z9s Series ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಐಕ್ಯೂ ಕಂಪನಿ ತನ್ನ ಲೇಟೆಸ್ಟ್ iQOO Z9s Series ಸ್ಮಾರ್ಟ್ಫೋನ್ಗಳನ್ನು ನಾಳೆ ಅಂದ್ರೆ 21ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ಗಳು ಎರಡೆರಡು ರೂಪಾನ್ತರಗಳ್ಲಲಿ ರೂಪಾನ್ತರಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲನೆಯದು 8GB RAM ಮತ್ತು 256GB ಸ್ಟೋರೇಜ್ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇವುಗಳ ಬೆಲೆಯನ್ನು iQOO Z9s ಸುಮಾರು 25,000 ರಿಂದ 30,000 ರೂಗಳಲ್ಲಿ ನಿರೀಕ್ಷಿದರೆ iQOO Z9s Pro ಸುಮಾರು 30,000 ರಿಂದ 35,000 ರೂಗಳೊಳಗೆ ನಿರೀಕ್ಷಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :