iQOO Z9s Series ಬಿಡುಗಡೆಗೆ ಡೇಟ್ ಫಿಕ್ಸ್! 5500mAh ಬ್ಯಾಟರಿಯೊಂದಿಗೆ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳ ನಿರೀಕ್ಷೆಗಳಿವೆ!
ಐಕ್ಯೂ (iQOO) ತನ್ನ ಮುಂಬರಲಿರುವ iQOO Z9s Series ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
iQOO Z9s Series ಸ್ಮಾರ್ಟ್‌ಫೋನ್ Sony IMX ಸೆನ್ಸರ್‌ಗಳೊಂದಿಗೆ ಆಕರ್ಷಕ ಕ್ಯಾಮೆರಾ ಫೀಚರ್ಗಳನ್ನು ಹೊಂದಿದೆ.
21ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಇಂಡಿಯಾದ ಮೂಲಕ ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಭಾರತದಲ್ಲಿ ಐಕ್ಯೂ (iQOO) ತನ್ನ ಮುಂಬರಲಿರುವ iQOO Z9s Series ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಕಂಪನಿ ಈ ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುಂಚೆ ಇದರ ಕೆಲವೊಂದು ಅಧಿಕೃತವಾಗ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಂಟರ್ನೆಟ್‌ನಲ್ಲಿ ಸೋರಿಕೆಗೊಳಿಸಿದೆ. ಇದರ ಹಿನ್ನೆಲೆಯಲ್ಲಿ ಅನನ್ಯ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಸುಧಾರಿತ ಕ್ಯಾಮೆರಾ ಸೆಟಪ್‌ನ ಪರಿಪೂರ್ಣ ಸಂಯೋಜನೆಯೊಂದಿಗೆ ಇದನ್ನು ಮಾರುಕಟ್ಟೆಗೆ ತರಲಿದೆ. iQOO Z9s Series ಸ್ಮಾರ್ಟ್‌ಫೋನ್ ಪ್ರಮುಖವಾಗಿ 5500mAh ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ Sony IMX ಸೆನ್ಸರ್‌ಗಳೊಂದಿಗೆ ಆಕರ್ಷಕ ಕ್ಯಾಮೆರಾ ಫೀಚರ್ಗಳನ್ನು ಹೊಂದಿದೆ. iQOO Z9s Series ಸ್ಮಾರ್ಟ್ಫೋನ್ ಅಮೆಜಾನ್ ಇಂಡಿಯಾದ ಮೂಲಕ ಬಿಡುಗಡೆಯಾಗಿ ಮಾರಾಟಕ್ಕೆ ಬರುವುದಾಗಿ ಖಚಿತಪಡಿಸಿದೆ.
Also Read: Charger Shock: ಆಟವಾಡುತ್ತಿದ್ದ ಮಗು ಚಾರ್ಜರ್ ಶಾಕ್‌ನಿಂದ ಧಾರುಣ ಸಾವು! ಪೋಷಕರೇ ಈಗಲಾದರೂ ಎಚ್ಚೆತ್ತುಕೊಳ್ಳಿ!
iQOO Z9s Series ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಮಾಹಿತಿ
ಭಾರತದಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ iQOO Z9s Series ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಮಾಹಿತಿಗಳನ್ನು ನೋಡುವುದಾದರೆ iQOO Z9s Series ಸ್ಮಾರ್ಟ್ಫೋನ್ 21ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಇಂಡಿಯಾದ ಮೂಲಕ ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಸರಣಿಯಲ್ಲಿ iQOO Z9s 5G ಮತ್ತು iQOO Z9s Pro 5G ಎಂಬ ಎರಡು ರೂಪಾಂತರಗಳಲ್ಲಿ ನಿರೀಕ್ಷಿಸಲಿದ್ದು ಇದರ ಆರಂಭಿಕ ಬೆಲೆಯನ್ನು ಸುಮಾರು 25,000 ರೂಗಳಿಂದ ನಿರೀಕ್ಷಿಸಲಾಗಿದೆ.
iQOO Z9s Series ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?
iQOO Z9s ಮುಂಭಾಗದಲ್ಲಿ 3D ಕರ್ವ್ಡ್ AMOLED ಪ್ಯಾನೆಲ್‌ನೊಂದಿಗೆ ಬರುತ್ತದೆ ಎಂದು ದೃಢಪಡಿಸಲಾಗಿದೆ ಆದರೆ 1800 nits ಕಡಿಮೆ ಗರಿಷ್ಠ ಹೊಳಪನ್ನು ಹೊಂದಿದೆ. ಎರಡೂ ಸಾಧನಗಳು ಕೇವಲ 7.49mm ದಪ್ಪದಿಂದ ಬರುತ್ತವೆ ಎಂದು ಹೇಳಲಾಗಿದೆ. iQOO Z9s Pro ಸ್ಮಾರ್ಟ್ಫೋನ್ 120Hz 3D ಕರ್ವ್ಡ್ AMOLED ಪ್ಯಾನೆಲ್ ಅನ್ನು ಹೊಂದಿರುತ್ತದೆ ಮತ್ತು 4500 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಸ್ಮಾರ್ಟ್ಫೋನ್ ಫ್ಲಾಂಬಾಯಿಂಟ್ ಒರಾಗ್ನೆ ಮತ್ತು ಲಕ್ಸ್ ಮಾರ್ಬಲ್ ಎಂಬ ಎರಡು ಬಣ್ಣಗಳಲ್ಲಿ ಬರಲಿದೆ ಎಂದು ದೃಢಪಡಿಸಲಾಗಿದೆ.
iQOO Z9s ಮತ್ತು iQOO Z9s Pro ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 4K ವೀಡಿಯೊ ರೆಕಾರ್ಡಿಂಗ್ ಮತ್ತು ನೈಟ್ ಮೋಡ್‌ಗೆ ಬೆಂಬಲದೊಂದಿಗೆ 50MP Sony IMX 882 ಪ್ರೈಮರಿ ಸೆನ್ಸರ್ಗಳೊಂದಿಗೆ ಬರುತ್ತದೆ. ಅವುಗಳು 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿವೆ ಎಂದು ದೃಢೀಕರಿಸಲಾಗಿದೆ. ಇದಲ್ಲದೆ iQOO AI ಫೋಟೋ ವರ್ಧನೆ ಮತ್ತು AI ಅಳಿಸುವಿಕೆಯಂತಹ ಕೆಲವು ಸಾಫ್ಟ್‌ವೇರ್ ವೈಶಿಷ್ಟ್ಯಗಳನ್ನು ಸಹ ದೃಢಪಡಿಸಿದೆ.
iQOO Z9s Pro ಸ್ಮಾರ್ಟ್ಫೋನ್ ಸಹ 5500mAh ಬ್ಯಾಟರಿಯನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. iQOO Z9s Pro ಸ್ಮಾರ್ಟ್ಫೋನ್ Qualcomm Snapdragon 7 Gen 3 ಚಿಪ್‌ಸೆಟ್‌ನಿಂದ ನಡೆಸಲಾಗುವುದು ಮತ್ತು 820K ಗಿಂತ ಹೆಚ್ಚಿನ Antutu ಸ್ಕೋರ್ ಅನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ. ಇದು ಇತರ Snapdragon 7 Gen 3 ಫೋನ್‌ಗಳ ಬೆಂಚ್‌ಮಾರ್ಕ್ ಸ್ಕೋರ್‌ಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile