3000 ತ್ವರಿತ ಡಿಸ್ಕೌಂಟ್‌ನೊಂದಿಗೆ iQOO Z9s Pro ಮೊದಲ ಮಾರಾಟ ಇಂದಿನಿಂದ ಶುರು! ಆಫರ್ ಮತ್ತು ಬೆಲೆ ಎಷ್ಟು?
iQOO Z9s Pro ಸ್ಮಾರ್ಟ್‌ಫೋನ್ ಮೊದಲ ಮಾರಾಟ 23ನೇ ಆಗಸ್ಟ್ ಮಧ್ಯಾಹ್ನ 12 ರಿಂದ ಶುರುವಾಗಲಿದೆ.
iQOO Z9s Pro ಸ್ಮಾರ್ಟ್‌ಫೋನ್ 5500mAh ಬ್ಯಾಟರಿ ಮತ್ತು 50MP Sony IMX882 ಸೆನ್ಸರ್ ಹೊಂದಿದೆ.
iQOO Z9s Pro ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ ಸುಮಾರು 24,999 ರೂಗಳಿಂದ ಶುರುವಾಗಿದೆ.
ಭಾರತದಲ್ಲಿ ಐಕ್ಯೂ ಕಂಪನಿಯ ಲೇಟೆಸ್ಟ್ iQOO Z9s Series ಮೂಲಕ ಎರಡು ದಿನಗಳ ಹಿಂದೆಯಷ್ಟೇ iQOO Z9s ಮತ್ತು iQOO Z9s Pro ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಹ್ಯಾಂಡ್‌ಸೆಟ್‌ಗಳು ಕ್ವಾಲ್‌ಕಾಮ್ ಮತ್ತು ಮೀಡಿಯಾ ಟೆಕ್‌ನಿಂದ ಮಿಡ್‌ರೇಂಜ್ ಪ್ರೊಸೆಸರ್‌ಗಳಿಂದ ಚಾಲಿತವಾಗಿವೆ. ದೊಡ್ಡ AMOLED ಸ್ಕ್ರೀನ್‌ಗಳೊಂದಿಗೆ 5500mAh ಬ್ಯಾಟರಿ ಮತ್ತು 50MP Sony IMX882 ಸೆನ್ಸರ್ ಹೊಂದಿದೆ. iQOO Z9s Pro 5G ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತವೆ. ಅಲ್ಲದೆ 3000 ತ್ವರಿತ ಡಿಸ್ಕೌಂಟ್‌ನೊಂದಿಗೆ iQOO Z9s Pro ಮೊದಲ ಮಾರಾಟ ಇಂದಿನಿಂದ ಶುರುವಾಗಲಿದ್ದು ಇದರ ಮೇಲಿನ ಆಫರ್ ಮತ್ತು ಬೆಲೆ ಎಷ್ಟು ಎಲ್ಲವನ್ನು ಈ ಕೆಳಗೆ ತಿಳಿಸಲಾಗಿದೆ.
iQOO Z9s Pro ಆಫರ್ ಮತ್ತು ಬೆಲೆ ಎಷ್ಟು?
ಕಂಪನಿ ಈ ಸರಣಿಯಲ್ಲಿ ಒಟ್ಟಾರೆಯಾಗಿ ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆಗೊಳಿಸಿದ್ದು iQOO Z9s Pro ಆರಂಭಿಕವಾಗಿ 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ 24,999 ರೂಗಳಾಗಿವೆ. ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಮಾಡೆಲ್ ಬೆಲೆಯನ್ನು ಸುಮಾರು 26,999 ರೂಗಳಾಗಿವೆ. ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಕಾನ್ಫಿಗರೇಶನ್ ಅನ್ನು 28,999 ರೂಗಳಿಗೆ ಬಿಡುಗಡೆಗೊಳಿಸಿದೆ.
iQOO Z9s Pro 5G ಸ್ಮಾರ್ಟ್ಫೋನ್ ಫ್ಲಾಂಬಾಯಿಂಟ್ ಆರೆಂಜ್ ಮತ್ತು ಲಕ್ಸ್ ಮಾರ್ಬಲ್ ಬಣ್ಣದ ಆಯ್ಕೆಗಳಲ್ಲಿ ಇಂದಿನಿಂದ 23ನೇ ಆಗಸ್ಟ್ 2024 ಮಾರಾಟವಾಗಲಿದೆ. HDFC ಮತ್ತು ICICI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಹ್ಯಾಂಡ್‌ಸೆಟ್‌ಗಳನ್ನು ಖರೀದಿಸಿದರೆ 3000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಸ್ಮಾರ್ಟ್‌ಫೋನ್ ಅಮೆಜಾನ್ ಮತ್ತು ಐಕ್ಯೂ ಇ-ಸ್ಟೋರ್ ಮೂಲಕ ಖರೀದಿಸಲು ಲಭ್ಯವಿದೆ.
Also Read: iQOO Z9s Series: ಭಾರತದಲ್ಲಿ 50MP Sony IMX882 ಕ್ಯಾಮೆರಾದೊಂದಿಗೆ ಬೆಲೆ ಮತ್ತು ಟಾಪ್ ಫೀಚರ್ಗಳನ್ನು ತಿಳಿಯಿರಿ
iQOO Z9s Pro ಫೀಚರ್ ಮತ್ತು ವಿಶೇಷಣಗಳೇನು?
ಈ ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರ ಮತ್ತು 387ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.77 ಇಂಚಿನ FHD+ (1080×2392 ಪಿಕ್ಸೆಲ್‌ಗಳು) AMOLED ಸ್ಕ್ರೀನ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ Sony IMX882 ಸೆನ್ಸರ್ ಮತ್ತು f/1.7 ಅಪರ್ಚರ್ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಸಜ್ಜುಗೊಳಿಸಿದೆ. 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು f/2.2 ಅಪರ್ಚರ್ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ iQOO Z9s Pro 5G ಸ್ಮಾರ್ಟ್‌ಫೋನ್ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.
iQOO Z9s Pro 5G ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್ ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ 12GB LPDDR4X RAM ಮತ್ತು 256GB ವರೆಗೆ UFS 2.2 ಸ್ಟೋರೇಜ್ ಪಡೆಯುತ್ತೀರಿ. iQOO Z9s Pro 5G ಡ್ಯುಯಲ್-ಸಿಮ್ ಹ್ಯಾಂಡ್‌ಸೆಟ್‌ಗಳಾಗಿದ್ದು ಆಂಡ್ರಾಯ್ಡ್ 14 ಆಧಾರಿತ Funtouch OS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡೂ ಹ್ಯಾಂಡ್‌ಸೆಟ್‌ಗಳಲ್ಲಿನ ಸಂಪರ್ಕ ಆಯ್ಕೆಗಳು 5G, 4G LTE, Wi-Fi 6, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile