ಭಾರತದಲ್ಲಿ ಐಕ್ಯೂ (iQOO) ಸ್ಮಾರ್ಟ್ಫೋನ್ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ iQOO Z9s Pro 5G ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ಒಟ್ಟಾರೆಯಾಗಿ 3 ರೂಪಾಂತರಗಳಿದ್ದು ಈ 2000 ರೂಗಳ ಬ್ಯಾಂಕ್ ಡಿಸ್ಕೌಂಟ್ ಆಫರ್ ಎಲ್ಲ ವೇರಿಯೆಂಟ್‌ಗಳ ಮೇಲೆ ಅನ್ವಯಿಸಲಿದೆ. ಇದರ ವಿಶೇಶಗಳನ್ನು ನೋಡುವುದಾದರೆ ಇದರಲ್ಲಿ ನಿಮಗೆ ಸೋನಿ ಸೆನ್ಸರ್ IMX882 ಹೊಂದಿದ್ದು ಕ್ಯಾಮೆರಾ ವಿಭಾಗದಲ್ಲಿ ನಿಮ್ಮ ಊಹೆಗಿಂತ ಅತ್ಯುತ್ತಮ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಒಳ್ಳೆ ಆಯ್ಕೆಯಾಗಲಿದೆ.
ಯಾಕೆಂದರೆ ಇದರಲ್ಲಿ Ai Erase ಮತ್ತು AI Photo Enhance ಫೀಚರ್ ನೀಡಿರುವುದರಿಂದ ಫೋಟೋದಲ್ಲಿ ಬೇಡದ ವಸ್ತು ಅಥವಾ ವ್ಯಕ್ತಿಯನ್ನು ಕೆಲವೇ ಟಚ್ ಮೂಲಕ ಅಳಿಸಿ ಫೋಟೋವನ್ನು ಮತ್ತಷ್ಟು ಆಕರ್ಷಕವಾಗಿ ಮತ್ತು ಸುಂದರಗೊಳಿಸಬಹಹುದು. ಇದು ಡ್ಯುಯಲ್ ಸಿಮ್ ಸ್ಲಾಟ್‌ಗಳನ್ನು ಹೊಂದಿದ್ದು ಅದು ಎರಡೂ ಕಾರ್ಡ್‌ಗಳಲ್ಲಿ 5G ಸಂಪರ್ಕವನ್ನು ಬೆಂಬಲಿಸುತ್ತದೆ. ಫೋನ್ Android 14 ಆಧಾರಿತ Funtouch OS 14 ನಲ್ಲಿ ಚಲಿಸುತ್ತದೆ.
ಅಮೆಜಾನ್ ಮೂಲಕ ಪಟ್ಟಿಯಾಗಿರುವ ಈ iQOO Z9s Pro 5G ಸ್ಮಾರ್ಟ್ಫೋನ್ ಈಗ ನಿಮಗೆ ಅತಿ ಕಡಿಮೆ ಬೆಲೆಗೆ ಖರೀದಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ನಿಮಗೆ ಒಟ್ಟಾರೆಯಾಗಿ ಮೂರು ರೂಪಾಂತರ ಅಂದ್ರೆ 8GB ಮತ್ತು 128GB ಸ್ಟೋರೇಜ್ ಬೆಲೆಯನ್ನು 24,999 ರೂಗಳಿಗೆ ಪಟ್ಟಿ ಮಾಡಿದ್ದು ಇದರ 8GB ಮತ್ತು 256GB ಸ್ಟೋರೇಜ್ ಬೆಲೆಯನ್ನು 26,999 ರೂಗಳಿಗೆ ಮತ್ತು ಕೊನೆಯಾದಾಗಿ ಇದರ 12GB ಮತ್ತು 256GB ಸ್ಟೋರೇಜ್ ಬೆಲೆಯನ್ನು 28,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಮೂರು ರೂಪಾಂತರಗಳ ಮೇಲೆ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ 2000 ರೂಗಳ ಡಿಸ್ಕೌಂಟ್ ಪಡೆಯಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. iQOO Z9s Pro 5G ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 22,200 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಮೂಲಕ ಈ ಲೇಟೆಸ್ಟ್ iQOO Z9s Pro 5G ಸ್ಮಾರ್ಟ್ಫೋನ್ ಆರಂಭಿಕ ಕೇವಲ ₹22,999 ರೂಗಳಿಗೆ ಅಮೆಜಾನ್ ಮೂಲಕ ಪಡೆಯಬಹುದು.
Also Read: Withdraw PF: ಇನ್ಮೇಲೆ ನಿಮ್ಮ ಪಿಎಫ್ ಖಾತೆಯ ಹಣವನ್ನು ಎಟಿಎಂ ಮೂಲಕ ಪಡೆಯಲು ಹೊಸ ಫೀಚರ್ ಪರಿಚಯ!
ಈ ಸ್ಮಾರ್ಟ್ಫೋನ್ 6.77 ಇಂಚಿನ AMOLED ಡಿಸ್ಪ್ಲೇಯೊಂದಿಗೆ 2392×1080 ರೆಸಲ್ಯೂಶನ್ ಹೊಂದಿದೆ. ಇದು ತೀಕ್ಷ್ಣವಾದ ಮತ್ತು ರೋಮಾಂಚಕ ದೃಶ್ಯಗಳನ್ನು ನೀಡುತ್ತದೆ. ಫೋನ್ ಹಿಂಭಾಗದಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಪ್ರೈಮರಿ ಸೋನಿ ಸೆನ್ಸರ್ IMX882 ಕ್ಯಾಮೆರಾದೊಂದಿಗೆ Ai Erase ಮತ್ತು AI Photo Enhance ಫೀಚರ್ ಹೊಂದಿದೆ. ಅಲ್ಲದೆ ಎರಡನೆಯದು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಆಗಿದೆ. ಅಲ್ಲದೆ ಇದರ ಮುಂಭಾಗದಲ್ಲಿ 16MP ಕ್ಯಾಮೆರಾ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ ನೀಡಲಾಗಿದೆ.
ಫೋನ್ Snapdragon 7 Gen 3 5G ಪ್ರೊಸೆಸರ್‌ನಿಂದ ಚಾಲಿತವಾಗಿದ್ದು 8GB ಅಥವಾ 12GB RAM ಆಯ್ಕೆಯನ್ನು ಆರಿಸಿಕೊಂಡರೂ ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಫೋನ್ ತ್ವರಿತವಾಗಿ ಚಾಲನೆ ಮಾಡಲು 80W ವೇಗದ ಚಾರ್ಜಿಂಗ್ ದೊಡ್ಡ 5500mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ 5.4 ಮತ್ತು ಯುಎಸ್‌ಬಿ ಟೈಪ್-ಸಿ ಸೇರಿವೆ. ಫೋನ್ GPS, OTG ಮತ್ತು FM ರೇಡಿಯೊವನ್ನು ಸಹ ಬೆಂಬಲಿಸುತ್ತದೆ.