ಭಾರತದಲ್ಲಿ ಐಕೂ ಸ್ಮಾರ್ಟ್ಫೋನ್ ತಯಾರಕರ ಲೇಟೆಸ್ಟ್ iQOO Z9s 5G ಸ್ಮಾರ್ಟ್ಫೋನ್ ಬಿಡುಗಡೆಯಗಲಿದ್ದು ಇಂದು ಅಂದರೆ 29ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ Amazon ಮೂಲಕ ಮೊದಲ ಮಾರಾಟಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ನೀವು ಈ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದರ ಆಫರ್ ಬೆಲೆಯೊಂದಿಗೆ ಇದರ ಹೈಲೈಟ್ ಫೀಚರ್ಗಳೇನು ಎನ್ನುವುದನ್ನು ತಿಳಿಯಿರಿ. ಈ iQOO Z9s 5G ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ 50MP Sony IMX882 OIS ಕ್ಯಾಮೆರಾ ಸೆನ್ಸರ್ ಜೊತೆಗೆ MediaTek Dimensity 7300 ಪ್ರೊಸೆಸರ್ ಹೊಂದಿದೆ. ಅಲ್ಲದೆ iQOO Z9s 5G ಸ್ಮಾರ್ಟ್ಫೋನ್ ಮೊದಲ ಮಾರಾಟದ ಕೊಡುಗೆಯಾಗಿ ICICI ಮತ್ತು HDFC ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಉತ್ತಮ ಡಿಸ್ಕೌಂಟ್ ಸಹ ಪಡೆಯಬಹುದು.
Also Read: Infinix Hot 50 5G ಜಬರ್ದಸ್ತ್ ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳೇನು?
ಈಗಾಗಲೇ ಬಿಡುಗಡೆಯಾಗಿ ಮೊಟ್ಟ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿರುವ ಈ iQOO Z9s 5G ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್ಗಳೇನೆಂದು ನೋಡುವುದಾದರೆ ಸ್ಮಾರ್ಟ್ಫೋನ್ ಪ್ರಸ್ತುತ iQOO Z9s 5G ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 19,999 ರೂಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. 8GB RAM ಜೊತೆಗೆ 256GB ಸ್ಟೋರೇಜ್ ಮಾಡೆಲ್ 21,999 ರೂಗಳಾಗಿವೆ.
ಇದರ 12GB RAM ಮತ್ತು 256GB ಸ್ಟೋರೇಜ್ ಮಾಡೆಲ್ ಬೆಲೆ 23,999 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ಓನಿಕ್ಸ್ ಗ್ರೀನ್ ಮತ್ತು ಟೈಟಾನಿಯಂ ಮ್ಯಾಟ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ iQOO Z9s 5G ಸ್ಮಾರ್ಟ್ಫೋನ್ ಮೊದಲ ಮಾರಾಟದ ಕೊಡುಗೆಯಾಗಿ ICICI ಮತ್ತು HDFC ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ತ್ವರಿತ 2000 ರೂಗಳ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ನೀಡುತ್ತಿದೆ. ಹಾಗಾದ್ರೆ ಇದರ ಆರಂಭಿಕವಾಗಿ ಕೇವಲ 17,999 ರೂಗಳಿಗೆ ಖರೀದಿಸಬಹುದು.
ಈ ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.77 ಇಂಚಿನ ಫುಲ್ HD+ (1080 × 2392 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿವೆ. iQOO Z9s 5G ಸ್ಮಾರ್ಟ್‌ಫೋನ್‌ಗಳು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ Sony IMX882 ಸೆನ್ಸರ್ ಮತ್ತು f/1.7 ಅಪರ್ಚರ್ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಸಜ್ಜುಗೊಳಿಸಿದೆ. ಸ್ಟ್ಯಾಂಡರ್ಡ್ ಮಾದರಿಯು 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ iQOO Z9s 5G 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಈ iQOO Z9s 5G ಸ್ಮಾರ್ಟ್ಫೋನ್ MediaTek Dimensity 7300 ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ಗಳು 12GB LPDDR4X RAM ಮತ್ತು 256GB ವರೆಗೆ UFS 2.2 ಸ್ಟೋರೇಜ್ ಪಡೆಯುತ್ತೀರಿ. iQOO Z9s 5G ಸ್ಮಾರ್ಟ್ಫೋನ್ ಡ್ಯುಯಲ್-ಸಿಮ್ ಹ್ಯಾಂಡ್‌ಸೆಟ್‌ಗಳಾಗಿದ್ದು ಆಂಡ್ರಾಯ್ಡ್ 14 ಆಧಾರಿತ Funtouch ಆಪರೇಟಿಂಗ್ ಸಿಸ್ಟಮ್ 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹ್ಯಾಂಡ್‌ಸೆಟ್‌ಗಳಲ್ಲಿನ ಸಂಪರ್ಕ ಆಯ್ಕೆಗಳು 5G, 4G LTE, Wi-Fi 6, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿವೆ. ಸ್ಮಾರ್ಟ್ಫೋನ್ 5500mAh ಬ್ಯಾಟರಿಯೊಂದಿಗೆ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.