iQoo Z7 Pro 5G Launched: ಕೈಗೆಟಕುವ ಬೆಲೆಗೆ ಐಕ್ಯೂ 5G ಫೋನ್! ಈ 5 ಫೀಚರ್ ನಿಮ್ಮನ್ನು ಸೆಳೆಯುತ್ತದೆ!

Updated on 06-Sep-2023
HIGHLIGHTS

iQOO Z7 Pro 5G ಸ್ಯಾಮ್ಸಂಗ್ GW3 ಸೆನ್ಸರ್ ಅನ್ನು ಹೊಂದಿದೆ

iQoo Z7 Pro 5G Display ಬಗ್ಗೆ ಮಾತನಾಡುವುದಾದರೆ ಇದರಲ್ಲಿ 6.78 ಇಂಚಿನ ಕರ್ವ್ AMOLED ಡಿಸ್ಪ್ಲೇಯನ್ನು ನೀಡಲಾಗಿದೆ

ಇದರ iQoo Z7 Pro 5G Proceesor ಬಗ್ಗೆ ಮಾತನಾಡುವದಾದ್ರೆ ಇದರಲ್ಲಿ MediaTek Dimensity 7020 ನಿಂದ ಚಾಲಿತವಾಗಿದೆ

ನಿಮಗೊಂದು ಹೊಸ 5G ಸ್ಮಾರ್ಟ್ಫೋನ್ ಬೇಕು ಆದರೆ ನಿಮಗೆ ಅದರಲ್ಲಿ ಅದರ ಡಿಸೈನ್ ಮತ್ತು ಪರ್ಫಾರ್ಮೆನ್ಸ್ ನಿಮಗೆ ಮುಖ್ಯವಾಗಿದ್ದರೆ ಈ ಹೊಚ್ಚ ಹೊಸ iQoo Z7 Pro 5G ನಿಮಗೆ ಅತ್ಯುತ್ತಮ ಆಯ್ಕೆಯಾಗಲಿದೆ. ಏಕೆಂದರೆ ಇದರ ಬಜೆಟ್ ನಿಮಗೆ ಬೇಕಿರುವ ಎಲ್ಲವನ್ನು ಪೂರ್ತಿಯಾಗಿ ನೀಡುತ್ತಿದೆ. iQOO Z7 Pro 5G ಬಾಗಿದ ಗಾಜಿನ ಡಿಸ್ಪ್ಲೇಯನ್ನು ಹೊಂದಿದೆ. ಇದರ ಡಿಸೈನ್ ಪ್ರೀಮಿಯಂ ವರ್ಗವನ್ನು ಸೇರಿಸುತ್ತದೆ. iQOO Z7 Pro 5G ಮುಖ್ಯ ಕ್ಯಾಮರಾಗೆ ಆಪ್ಟಿಕಲ್ ಸ್ಟೆಬಿಲೈಸೇಶನ್ ಅಥವಾ OIS ಅನ್ನು ಒದಗಿಸಿದೆ. 

ಸ್ಯಾಮ್ಸಂಗ್ GW3 ಸೆನ್ಸರ್ ಅನ್ನು ನೀಡಿದೆ ಸಾಕಷ್ಟು ಹೊಸ ಚಿಪ್‌ಸೆಟ್ ಜೊತೆಗಿನ ಟಾಪ್ 5 ಲೇಟೆಸ್ಟ್ ಫೀಚರ್ಗಳನ್ನು ಪರಿಚಯವನ್ನು ಪಡೆಯೋಣ. ನಾವು (Digit.in) ಇದರ ಮಾರಾಟದ ದಿನದಂದು 5ನೇ ಸೆಪ್ಟೆಂಬರ್ Amazon India ವೆಬ್‍ಸೈಟ್‍ನಲ್ಲಿ ನಿಮಗೆ ಲೈವ್ ಆಗಿ ತೋರಿಸಲಿದ್ದೇವೆ. ಇದರಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ ನಮ್ಮೊಂದಿಗೆ ಕೈ ಜೋಡಿಸಲು iQOO Z7 Pro 5G Live ಮೇಲೆ ಕ್ಲಿಕ್ ಮಾಡಿ ನಮ್ಮೊಂದಿಗೆ ಸೇರಿಕೊಳ್ಳಬಹುದು.

iQoo Z7 Pro 5G ಡಿಸ್ಪ್ಲೇ

ಈ ಹೊಸ iQoo Z7 Pro 5G Display ಬಗ್ಗೆ ಮಾತನಾಡುವುದಾದರೆ ಇದರಲ್ಲಿ 6.78 ಇಂಚಿನ ಕರ್ವ್ AMOLED ಡಿಸ್ಪ್ಲೇಯನ್ನು ನೀಡಲಾಗಿದೆ. ಡಿಸ್ಪ್ಲೇ 20:9 ಆಕಾರ ಅನುಪಾತದಲ್ಲಿ FHD+ (1080×2400p) ರೆಸಲ್ಯೂಶನ್ ಮತ್ತು 388ppi ಪಿಕ್ಸೆಲ್ ಡೆನ್ಸಿಟಿಯನ್ನು ಹೊಂದಿದೆ. ಅಲ್ಲದೆ ಗರಿಷ್ಠ ರಿಫ್ರೆಶ್ ದರ 120Hz ಮತ್ತು HDR10+ ಬೆಂಬಲವೂ ಇದೆ. ಹೆಚ್ಚುವರಿಯಾಗಿ ಡಿಸ್ಪ್ಲೇ 1330 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಅನ್ನು ಸಹ ಹೊಂದಿದೆ ಅಂದ್ರೆ ಹೊರಗಿನ ಬಿಸಿಲಿಲ್ಲೂ ಅತ್ಯುತ್ತಮವಾಗಿ ಡಿಸ್ಪ್ಲೇಯಲ್ಲಿ ಓದುವಿಕೆ ಗೋಚರಿಸುತ್ತದೆ.

https://twitter.com/IqooInd/status/1697144453012816169?ref_src=twsrc%5Etfw

iQoo Z7 Pro 5G ಪ್ರೊಸೆಸರ್ ಮತ್ತು ಸ್ಟೋರೇಜ್

ಎರಡನೇಯದಾಗಿ ಇದರ iQoo Z7 Pro 5G Proceesor ಬಗ್ಗೆ ಮಾತನಾಡುವದಾದ್ರೆ ಇದರಲ್ಲಿ MediaTek Dimensity 7020 ನಿಂದ ಚಾಲಿತವಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಯಿತು. ಈ ಹೊಸ ಮಧ್ಯಮ ಶ್ರೇಣಿಯ ಚಿಪ್‌ಸೆಟ್ ಅನ್ನು ವಿವೋ ಸ್ಮಾರ್ಟ್‌ಫೋನ್‌ನಲ್ಲಿಯೂ ಕಾಣಬಹುದು. ಫೋನ್ 8GB ಇಂಟರ್ನಲ್ RAM + 8GB ವರ್ಚುವಲ್ RAM ಜೊತೆಗೆ 128GB ಅಥವಾ 256GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ಸ್ಟೋರೇಜ್ ಬಳಕೆದಾರರಿಗೆ ವಿಸ್ತರಿಸಲು ಸಾಧ್ಯವಿಲ್ಲ. ಸ್ಮಾರ್ಟ್ಫೋನ್ ಕಸ್ಟಮ್ ಸ್ಕಿನ್ FunTouch OS 13 ಅನ್ನು Android 13 ನಲ್ಲಿ ಬಾಕ್ಸ್‌ನ ಹೊರಗೆ ರನ್ ಮಾಡುತ್ತದೆ.

iQoo Z7 Pro 5G ಕ್ಯಾಮೆರಾಗಳು

ಮೂರನೇಯದಾಗಿ iQoo Z7 Pro 5G Camera ಸಾಮರ್ಥ್ಯದ ನೋಡುವುದಾದರೆ ಅಸಾಧಾರಣ ಅನ್ನೋಕ್ಕಿಂತ ಕಡಿಮೆಯಾಗಿದೆ. ಅಂದ್ರೆ ಇದರ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ ಜೊತೆಗೆ 64MP ಪ್ರೈಮರಿ ಕ್ಯಾಮೆರಾದೊಂದಿಗೆ 2MP ಡೆಪ್ತ್ ಕ್ಯಾಮೆರಾ ಸೆನ್ಸರ್ ಅನ್ನು ಫೋನ್ ಹಿಂಭಾಗದಲ್ಲಿ ಔರಾ ಲೈಟ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಲೈಟ್ ಕಂಡೀಷನ್ ಅಲ್ಲಿ ಪ್ರೈಮರಿ ಕ್ಯಾಮರಾ ಉತ್ತಮ ವಿವರ ಮತ್ತು ಹೈಲೈಟ್ ಮಟ್ಟಗಳಿಂದ ತುಂಬಿರುವ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಅಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ ಪಂಚ್-ಹೋಲ್ ಸೆಟಪ್‌ನಲ್ಲಿ 16MP ಶೂಟರ್ ಅನ್ನು ರಾಕ್ ಮಾಡುತ್ತದೆ

iQoo Z7 Pro 5G ಬ್ಯಾಟರಿ ಮತ್ತು ಚಾರ್ಜಿಂಗ್

ಇದರ ಲಾಸ್ಟ ಫೀಚರ್ iQoo Z7 Pro 5G Battery ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಿಮಗೆ 4600mAh ಬ್ಯಾಟರಿಯನ್ನು ಹೊಂದಿದೆ.  ಈ ಬೆಲೆಯ ಶ್ರೇಣಿಯಲ್ಲಿನ ಬೇರೆ ಫೋನ್ಗಳಿಗೆ ಹೋಲಿಸಿದರೆ ಈ ವಿಭಾಗದಲ್ಲಿ 5000mAh ಬ್ಯಾಟರಿ ನೀಡುತ್ತಿವೆ. ಸ್ಮಾರ್ಟ್‌ಫೋನ್‌ನ ಬ್ಯಾಟರಿ ನಿರ್ವಹಣೆಯು ಸಾಕಷ್ಟು ಪರಿಣಾಮಕಾರಿಯಾಗಿರುತ್ತದೆ. ಬಾಕ್ಸ್‌ನಲ್ಲಿ ಒದಗಿಸಲಾದ 67W ಫಾಸ್ಟ್ ಚಾರ್ಜರ್‌ನೊಂದಿಗೆ ನಿಮ್ಮ ಬಳಕೆಯನ್ನು ಅವಲಂಬಿಸಿ 6 ಗಂಟೆಗಳ ಸ್ಕ್ರೀನ್-ಆನ್-ಟೈಮ್ ಅನ್ನು ತಲುಪಿಸಲು ಹ್ಯಾಂಡ್‌ಸೆಟ್ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ.

iQoo Z7 Pro 5G ಬೆಲೆ ಮತ್ತು ಲಭ್ಯತೆ

ಈ ಲೇಖನದ ಕೊನೆಯ ಅಂಶ iQoo Z7 Pro 5G Price ಬಗ್ಗೆ ನೋಡುವುದಾದರೆ ಇದರ 8GB RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್ ಬೇಸ್ ಮಾಡೆಲ್‌ಗೆ 23,999 ರೂಗಳಿಂದ ಪ್ರಾರಂಭವಾಗುತ್ತದೆ. ಇದರ 8GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್ ಮಾಡೆಲ್‌ಗೆ 24,999 ರೂಗಳಿಂದ ಪ್ರಾರಂಭವಾಗುತ್ತದೆ. ಸ್ಮಾರ್ಟ್ಫೋನ್ಇದೇ ಸೆಪ್ಟೆಂಬರ್ 5 ರಂದು ಮಧ್ಯಾಹ್ನ 12:00 ಗಂಟೆಗೆ ಮೊದಲ ಮಾರಾಟವಾಗಲಿದೆ. ಅಲ್ಲದೆ SBI ಬ್ಯಾಂಕ್ ಮತ್ತು HDFC ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ಫ್ಲಾಟ್ ರೂ 2,000 ರಿಯಾಯಿತಿ ಪಡೆಯಬಹುದು. ಅಲ್ಲದೆ ಎಕ್ಸ್‌ಚೇಂಜ್‌ನಲ್ಲಿ ಹೆಚ್ಚುವರಿ ರೂ 2,000 ರಿಯಾಯಿತಿಯನ್ನು ಒಳಗೊಂಡಿರುವ ವಿಶೇಷ ಬಿಡುಗಡೆ ಕೊಡುಗೆಗಳೊಂದಿಗೆ ನೀವು ಅಮೆಜಾನ್ ಮತ್ತು iQOO ಆನ್‌ಲೈನ್ ಸ್ಟೋರ್‌ನಿಂದ ಖರೀದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :