iQoo Z6 5G vs Poco M4 Pro 5G: ಈ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್? ಒಂದಕ್ಕೊಂದು ಹೋಲಿಸಿ ನೋಡಿ!

Updated on 11-Apr-2023
HIGHLIGHTS

ಸುಮಾರು 15000 ರೂಗಳು ನಿಮ್ಮ ಬಜೆಟ್ ಆಗಿದ್ದರೆ ಈ ಪಟ್ಟಿಯಲ್ಲಿನ iQoo Z6 5G ಮತ್ತು Poco M4 Pro 5G ಫೋನ್ಗಳು ಉತ್ತಮವಾಗಿವೆ.

ಈ ಭಾಗದಲ್ಲಿ ಹಲವಾರು ಫೋನ್ಗಳಿವೆ ಆದ್ರೆ ಇದರ ಆಕರ್ಷಕ ಹೈ ಲೆವೆಲ್ ಫೀಚರ್ಸ್ಗಳಿಂದ ಗ್ರಾಹಕರನ್ನು ಸೆಳೆದಿದೆ

ಈ ಸ್ಮಾರ್ಟ್ಫೋನ್ಗಳು ಇಂದಿನ ಅಗತ್ಯ ಫೀಚರ್ಸ್ಗಳ ಜೊತೆಗೆ ಆಕರ್ಷಕ ಅನ್ನು ಲುಕ್ ಪಡೆದಿದೆ.

iQoo Z6 5G vs Poco M4 Pro 5G: ದೇಶದಲ್ಲಿ ನಿಮಗೊಂದು ಅತ್ಯುತ್ತಮ ಸ್ಮಾರ್ಟ್ಫೋನ್ ಅದು ಸುಮಾರು 15000 ರೂಗಳು ನಿಮ್ಮ ಬಜೆಟ್ ಆಗಿದ್ದರೆ ಈ ಪಟ್ಟಿಯಲ್ಲಿನ iQoo Z6 5G ಮತ್ತು Poco M4 Pro 5G ಫೋನ್ಗಳು ಉತ್ತಮವಾಗಿವೆ. ಈ ಭಾಗದಲ್ಲಿ ಹಲವಾರು ಫೋನ್ಗಳಿವೆ ಆದ್ರೆ ಇದರ ಆಕರ್ಷಕ ಹೈ ಲೆವೆಲ್ ಫೀಚರ್ಸ್ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್ಫೋನ್ಗಳು ಇಂದಿನ ಅಗತ್ಯ ಫೀಚರ್ಸ್ಗಳ ಜೊತೆಗೆ ಆಕರ್ಷಕ ಅನ್ನು ಲುಕ್ ಪಡೆದಿದೆ. ಇಂದಿನ ಮಾರುಕಟ್ಟೆಯಲ್ಲಿ ಮಾಧ್ಯಮ ರೇಂಜ್ ಸ್ಮಾರ್ಟ್ಫೋನ್ಗಳಾಗಿ ಆಗಿ ಕಾಣಿಸಿಕೊಂಡಿರುವ ಈ iQoo Z6 5G vs Poco M4 Pro 5G ಫೋನ್ಗಳನ್ನು ಇಂದು ಒಂದಕ್ಕೊಂದು ಹೋಲಿಸಿ ಯಾವುದರಲ್ಲಿ ಏನಿದೆ ಮತ್ತು ನೀವು ನೀಡುವ ಬೆಲೆಗೆ ಯಾವುದು ಉತ್ತಮ ಮತ್ತು ನಿಮ್ಮ ಪ್ರಕಾರ ಯಾವುದು ಬೆಸ್ಟ್ ಎಂದು ನೀವೇ ಕಾಮೆಂಟ್ ಮಾಡಿ ತಿಳಿಸಿ.

iQoo Z6 5G vs Poco M4 Pro 5G ಡಿಸ್ಪ್ಲೇ

ಮೊದಲಿಗೆ iQoo Z6 5G ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ FHD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2408×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 120Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನ್ 401 PPI ಡೆನ್ಸಿಟಿ ಅನ್ನು ಹೊಂದಿದೆ. Poco M4 Pro 5G ಸ್ಮಾರ್ಟ್ಫೋನ್ 6.6 ಇಂಚಿನ LCD ಡಿಸ್ಪ್ಲೇ ಹೊಂದಿದೆ. ಇದು 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 90Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನ್ 402 PPI ಡೆನ್ಸಿಟಿ ಅನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ.

iQoo Z6 5G vs Poco M4 Pro 5G ಕ್ಯಾಮೆರಾ

ಈ ಫೋನ್ಗಳ ಕ್ಯಾಮೆರಾದಲ್ಲಿ iQoo Z6 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2MP ಸೆನ್ಸಾರ್ ಹೊಂದಿದ್ದು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. Poco M4 Pro 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸರ್ ಮತ್ತು ಎರಡನೇ ಕ್ಯಾಮೆರಾ 8MP ಅಲ್ಟ್ರಾ ವೈಡ್ ಸೆನ್ಸರ್ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ ಈ ಎರಡು ಸ್ಮಾರ್ಟ್ಫೋನ್ಗಳು 16MP ಸೆನ್ಸಾರ್ ಕ್ಯಾಮೆರಾವನ್ನು ಹೊಂದಿವೆ.

iQoo Z6 5G vs Poco M4 Pro 5G ಪ್ರೊಸೆಸರ್

ಈ iQoo Z6 5G ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗ್ನ್ 695 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದಕ್ಕೆ ಪೂರಕವಾಗಿ ಫನ್ ಟಚ್ ಜೊತೆಗೆ  ಆಂಡ್ರಾಯ್ಡ್ 12 OS ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ 4GB, 6GB ಮತ್ತು 8GB RAM ಜೊತೆಗೆ 128GB ಸ್ಟೋರೇಜ್ ವೇರಿಯಂಟ್  ಆಯ್ಕೆಗಳನ್ನು ಹೊಂದಿವೆ. Poco M4 Pro 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 13 ನಲ್ಲಿ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

iQoo Z6 5G vs Poco M4 Pro 5G ಬ್ಯಾಟರಿ

ಬ್ಯಾಟರಿ ಬಗ್ಗೆ ಹೇಳುವುದಾದರೆ ಈ ಎರಡು ಸ್ಮಾರ್ಟ್ಫೋನ್ಗಳು ಒಂದೇ ಮಾದರಿಯ ಬ್ಯಾಟರಿ ಅಂದ್ರೆ 5000mAh ಸಾಮರ್ಥ್ಯದ ಪವರ್ ಅನ್ನು ಹೊಂದಿವೆ. ಆದ್ರೆ  iQoo Z6 5G ಸ್ಮಾರ್ಟ್‌ಫೋನ್‌ ಯುಎಸ್‌ಬಿ ಟೈಪ್‌-ಸಿ ಮೂಲಕ 33W ಸೂಪರ್VOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ Poco M4 Pro 5G ಸ್ಮಾರ್ಟ್‌ಫೋನ್‌ 67W ಸೂಪರ್ VOOC ವೈರ್ಡ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. 

iQoo Z6 5G vs Poco M4 Pro 5G ಬೆಲೆ

ಮೊದಲಿಗೆ iQoo Z6 5G ಡೈನಾಮಿಕ್ ಬ್ಲಾಕ್ ಮತ್ತು ಕ್ರೋಮ್ಯಾಟಿಕ್ ಬ್ಲೂ ಕಲರ್ಗಳ ಆಯ್ಕೆಯಲ್ಲಿ ಆರಂಭಿಕ ಬೆಲೆ ಕೇವಲ ₹15,499 ರೂಗಳಲ್ಲಿ ಲಭ್ಯವಿದೆ. ಇದರ ಕ್ರಮವಾಗಿ Poco M4 Pro 5G ಪೊಕೊ ಎಲ್ಲೊ, ಪವರ್ ಬ್ಲಾಕ್ ಮತ್ತು ಕೂಲ್ ಬ್ಲೂ ಕಲರ್ಗಳ ಆಯ್ಕೆಯಲ್ಲಿ ₹14,999 ರೂಗಳಲ್ಲಿ ಲಭ್ಯವಿದೆ. 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :