iQOO Neo 7 ಬಿಡುಗಡೆಗೂ ಮುಂಚೆಯೇ ಫೀಚರ್‌ಗಳು ಸೋರಿಕೆ! ಏನಿದರ ವಿಶೇಷತೆಗಳು!
iQOO Neo 7 ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ ನಿಂದ ನಡೆಸಲಾಗುವುದು.
ಮುಂಬರುವ ಸ್ಮಾರ್ಟ್‌ಫೋನ್ ಚೈನೀಸ್ ರೀಬ್ಯಾಡ್ಜ್ ಮಾಡಲಾದ iQOO Neo 7 SE ಆಗಿ ಲಾಂಚ್ ಆಗುತ್ತದೆ.
iQOO Neo 7 ನಲ್ಲಿ 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಸೇರಿಸಲಾಗುತ್ತದೆ.
iQOO ಬ್ರಾಂಡ್ ಫೆಬ್ರವರಿ 16 ರಂದು iQOO Neo 7 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅನಾವರಣಗೊಳಿಸಲಿದೆ. ಕಂಪನಿ ಈಗಾಗಲೇ ಅದರ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ ಸೇರಿದಂತೆ ಒಳಬರುವ ಸ್ಮಾರ್ಟ್‌ಫೋನ್‌ನ ಹಲವಾರು ಫೀಚರ್‌ಗಳನ್ನು ಅಧಿಕೃತವಾಗಿ ದೃಢೀಕರಿಸಿದೆ. ಈಗ iQOO Neo 7 SE ಅನ್ನು ರೀಬ್ಯಾಡ್ಜ್ ಮಾಡಿದ ವರ್ಷನ್ ಎಂದು ಹೇಳಲಾದ ಸ್ಮಾರ್ಟ್‌ಫೋನ್ ಅನ್ನು Google Play ಕನ್ಸೋಲ್‌ನಲ್ಲಿ ಗುರುತಿಸಲಾಗಿದೆ.
ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ iQOO Neo
ಲಿಸ್ಟ್ ನ ಪ್ರಕಾರ iQOO ನಿಯೋ 7 12GB RAM ನೊಂದಿಗೆ ಪ್ರಾರಂಭಗೊಳ್ಳುತ್ತದೆ. ಮತ್ತು ಮಾಡೆಲ್ ಸಂಖ್ಯೆ I2214 ಅನ್ನು ಹೊಂದಿದೆ. MySmartPrice ವರದಿಯ ಪ್ರಕಾರ ಸ್ಮಾರ್ಟ್‌ಫೋನ್‌ಗೆ ಶಕ್ತಿ ತುಂಬುವ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್, ಕಾರ್ಟೆಕ್ಸ್ A78 ಅನ್ನು 3.1GHz ನಲ್ಲಿ ಹೊಂದಿದೆ. ಮತ್ತು ಮೂರು ಕಾರ್ಟೆಕ್ಸ್ A78 ಕೋರ್‌ಗಳನ್ನು 3.0GHz ನಲ್ಲಿ ಮತ್ತು ನಾಲ್ಕು ಕಾರ್ಟೆಕ್ಸ್ A55 ಕೋರ್‌ಗಳನ್ನು 2.0GHz ನಲ್ಲಿ ಹೊಂದಿದೆ ಎಂದು ಹೇಳಲಾಗಿದೆ. iQOO Neo 7 ಆಂಡ್ರಾಯ್ಡ್ 13 ಅನ್ನು ಬಾಕ್ಸ್‌ನ ಹೊರಗೆ ರನ್ ಮಾಡುವುದರ ಜೊತೆಗೆ ಇದು Android ನ ಮೇಲ್ಭಾಗದಲ್ಲಿ Funtouch OS 13 ಲೇಯರ್‌ನೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ ಇದು 440PPI ಸ್ಕ್ರೀನ್ ಡೆನ್ಸಿಟಿ ಮತ್ತು FHD+ ರೆಸಲ್ಯೂಶನ್ ಹೊಂದಿರುವ ಡಿಸ್ಪ್ಲೇ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.
ಭಾರತದಲ್ಲಿ iQOO Neo 7 ನಿರೀಕ್ಷಿತ ಬೆಲೆ
ಇತ್ತೀಚಿನ ವರದಿಯ ಪ್ರಕಾರ iQOO Neo 7 ನ ಸಿಂಗಲ್ 8GB+128GB ವೇರಿಯಂಟ್ನ ಬೆಲೆ 26,999 ರೂ.ಗಳಿಂದ ಪ್ರಾರಂಭವಾಗುತ್ತದೆ. ಮತ್ತು ಬ್ಯಾಂಕ್ ರಿಯಾಯಿತಿಗಳನ್ನು ಸಹ ಒಳಗೊಂಡಿರುತ್ತದೆ. ಅಂದರೆ ಈ ಫೋನ್‌ಗೆ ಯಾವುದೇ ಆಫರ್‌ಗಳಿಲ್ಲದೆ ಸರಿಸುಮಾರು ರೂ 29,999 ವೆಚ್ಚವಾಗಬಹುದು ಎಂದು ಸೂಚಿಸುತ್ತದೆ. ಹಿಂದಿನ ಸೋರಿಕೆಯ ಪ್ರಕಾರ 12GB+256GB ವೇರಿಯಂಟ್ ರೂ 34,999 ವೆಚ್ಚವಾಗುತ್ತದೆ ಮತ್ತು ಬ್ಯಾಂಕ್ ರಿಯಾಯಿತಿ ಮತ್ತು ವಿನಿಮಯ ಬೋನಸ್‌ನಿಂದ ಮಾಡಲ್ಪಟ್ಟ 4,000 ರೂಪಾಯಿ ಕ್ಯಾಶ್‌ಬ್ಯಾಕ್ ಇರುತ್ತದೆ ಎಂದು ಹೇಳಿದೆ.
ಭಾರತದಲ್ಲಿ iQOO Neo 7 ನಿರೀಕ್ಷಿತ ಫೀಚರ್ಗಳು
ಪ್ರಸ್ತುತ ತಿಳಿದಿರುವ ಫೀಚರ್‌ಗಳ ಜೊತೆಗೆ iQOO Neo 7 120Hz ನ ರಿಫ್ರೆಶ್ ದರದೊಂದಿಗೆ 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. 64MP ಪ್ರೈಮರಿ ಕ್ಯಾಮರಾ, 2MP ಮ್ಯಾಕ್ರೋ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್ ಜೊತೆಗೆ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಹೆಚ್ಚುವರಿಯಾಗಿ 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್‌ಗೆ ಸೇರಿಸಲಾಗಿದೆ ಎಂದು ಹೇಳಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile