ಚೀನಾದ ಅತಿದೊಡ್ಡ ಬ್ರಾಂಡ್ ಆಗಿರುವ BBK ಗ್ರೂಪ್ ಮತ್ತೊಂದು ಹೊಸ iQOO ಬ್ರಾಂಡ್ ಬಿಡುಗಡೆಗೊಳಿಸಿದೆ. ಈ ಮೂಲಕ ಇದರ ಮೊಟ್ಟ ಮೊದಲ ಸ್ಮಾರ್ಟ್ಫೋನ್ iQOO 3 ಅನ್ನು 5G ಟೆಕ್ನಾಲಜಿಯೊಂದಿಗೆ ಭಾರತಕ್ಕೆ ಕಾಲಿಡಲಿದೆ. ಇದು ಪ್ರತ್ಯೇಕವಾಗಿ flipkart.com ಮತ್ತು iqoo.com ಮೂಲಕ ಬಿಡುಗಡೆಯ ನಂತರ ಲಭ್ಯವಾಗಲಿದೆ. ಆದರೆ ಈ 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆಯೇ ಇದರ ಬೆಲೆ ಸೋರಿಕೆಯಾಗಿದೆ. ಹೌದು ಈ ಸ್ಮಾರ್ಟ್ಫೋನ್ 40,000 ರೂಗಳ ಬೆಲೆ ವ್ಯಾಪ್ತಿಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ಒಟ್ಟಾರೆಯಾಗಿ ವಿವೊವಿನ ಮತ್ತೊಂದು ಇಂಡಿಪೆಂಡೆಂಟ್ ಬ್ರಾಂಡ್ IQOO 3 5G ಸ್ಮಾರ್ಟ್ಫೋನ್ ಸಹ ದೇಶದ ಮೊದಲ 5G ಸ್ಮಾರ್ಟ್ಫೋನ್ ಆಗಲು ಎದುರು ನೋಡುತ್ತಿದ್ದು ಈ ಫೋನ್ 25ನೇ ಫೆಬ್ರವರಿ 2020 ರಂದು ಬಿಡುಗಡೆಯಾಗಲಿದೆ. ಮೊಟ್ಟ ಮೊದಲ ಸ್ಮಾರ್ಟ್ಫೋನ್ iQOO 3 ಅನ್ನು 5G ಸ್ಮಾರ್ಟ್ಫೋನ್ ಭಾರತದಲ್ಲಿ ಫೆಬ್ರವರಿ 25 ರಂದು ಬಿಡುಗಡೆಯಾಗಲಿದ್ದು Snapdragon 865 ಚಿಪ್‌ಸೆಟ್ ಜೊತೆಗೆ ಹಿಂಭಾಗದಲ್ಲಿ 48MP ಕ್ವಾಡ್-ಕ್ಯಾಮೆರಾವನ್ನು ಹೊಂದಲಿದೆ. ಈ 5G ಸ್ಮಾರ್ಟ್ಫೋನ್ ಪಂಚ್ ಹೋಲ್ ಡಿಸ್ಪ್ಲೇ ಹೊಂದಿರುವಈ ಫೋನ್ 12GB RAM ಮತ್ತು 55w ವ್ಯಾಟ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 4440mAh ಬ್ಯಾಟರಿಯನ್ನು ಹೊಂದುವ ಸಾಧ್ಯತೆಯಿದೆ.
iQOO ತನ್ನ ಬಳಕೆದಾರರಂತೆಯೇ ಚಾಲೆಂಜರ್ ಆಗಿ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಮತ್ತು ಸಂಪೂರ್ಣ ವಿನ್ಯಾಸ ಪ್ರಕ್ರಿಯೆಯು ಈ ಗ್ರಾಹಕರ ವಿಕಾಸದ ಅಗತ್ಯಗಳಿಂದ ಮಾರ್ಗದರ್ಶಿಸಲ್ಪಡುತ್ತದೆ. ಅವರು ಉತ್ತಮ ಗುಣಮಟ್ಟದ ಕಾರ್ಯಕ್ಷಮತೆಯನ್ನು ಬಯಸುತ್ತಾರೆ ಎಂದು iQOO ಮಾರ್ಕೆಟಿಂಗ್ ನಿರ್ದೇಶಕ ಗಗನ್ ಅರೋರಾ ಹೇಳಿದ್ದಾರೆ. ಇತ್ತೀಚೆಗೆ ಒಂದು ಹೇಳಿಕೆ. ಇತ್ತೀಚೆಗೆ ಭಾರತಕ್ಕೆ ಪ್ರವೇಶಿಸುವುದಾಗಿ ಘೋಷಿಸಿದ iQOO ಕಳೆದ ವಾರ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿತು.