iQOO 13 launched in India: ಭಾರತದಲ್ಲಿ ಐಕ್ಯೂ (iQOO) ಕಂಪನಿ ಲೇಟೆಸ್ಟ್ iQOO 13 ಸ್ಮಾರ್ಟ್ಫೋನ್ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಬೆಲೆ 54,999 ರೂಗಳಿಗೆ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಕಂಪನಿ ಬಿಡುಗಡೆಯ ಆಫರ್ ಅಡಿಯಲ್ಲಿ ನಿಮಗೆ ಆಕರ್ಷಕ ಡೀಲ್ ಮತ್ತು ಡಿಸ್ಕೌಂಟ್ ಸಹ ನಿಡುತ್ತಿದ್ದು HDFC ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ 3000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯುವ ಮೂಲಕ ಆರಂಭಿಕ 51,999 ರೂಗಳಿಗೆ ಪಡೆಯಬಹುದು.
iQOO 13 ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್ ಬಗ್ಗೆ ಮಾತನಡುವುದಾದರೆ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಬೆಲೆ 54,999 ರೂಗಳಾಗಿದ್ದು ಮತ್ತೊಂದು 16GB RAM ಮತ್ತು 512GB ಸ್ಟೋರೇಜ್ ಬೆಲೆ 59,999 ರೂಗಳಾಗಿದೆ. ಆದರೆ ಕಂಪನಿ ಬಿಡುಗಡೆಯ ಆಫರ್ ಅಡಿಯಲ್ಲಿ ನಿಮಗೆ ಆಕರ್ಷಕ ಡೀಲ್ ಮತ್ತು ಡಿಸ್ಕೌಂಟ್ ಸಹ ನಿಡುತ್ತಿದೆ.
HDFC ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ 3000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯುವ ಮೂಲಕ ಆರಂಭಿಕ 51,999 ರೂಗಳಿಗೆ ಪಡೆಯಬಹುದು. iQOO 13 ಸ್ಮಾರ್ಟ್ಫೋನ್ ಅಲ್ಲದೆ ಇದರೊಂದಿಗೆ ನಿಮ್ಮ ಹಳೆಯ iQOO ಮತ್ತು Vivo ಸ್ಮಾರ್ಟ್ಫೋನ್ ನೀಡಿ ಸುಮಾರು 5000 ರೂಗಳವರೆಗೆ ಆಫರ್ ಬೆಲೆಯಲ್ಲಿ ಸಹ ಪಡೆಯಬಹುದು. ಅಲ್ಲದೆ ಮುಂಗಡ ಆರ್ಡರ್ ಮಾಡುವವರಿಗೆ 1 ವರ್ಷದ ಹೆಚ್ಚುವರಿ ವಾರಂಟಿಯೊಂದಿಗೆ ಉಚಿತ iQOO TWS 1e ಇಯರ್ಬಡ್ಸ್ ಪಡೆಯಬಹುದು.
Also Read: 2G ಮತ್ತು 3G ಬಳಸುತ್ತಿದ್ದ BSNL ಬಳಕೆದಾರರಿಗೆ ಈಗ FREE 4G Sim ಲಭ್ಯ! ಪಡೆಯುವ ವಿಧಾನವೇನು?
ಈ iQOO 13 ಸ್ಮಾರ್ಟ್ಫೋನ್ 6.82 ಇಂಚಿನ 2K 3168 x 1440 ರೇಶಲುಷನ್ ಡಿಸ್ಪ್ಲೇ ಯೊಂದಿಗೆ ಬರೋಬ್ಬರಿ 144Hz ರೇಫಟರೇಶ ರೇಟ್ ಅಲ್ಟ್ರಾ ಹೈಕೇರ್ ಟೆಕ್ನಾಲಜಿಯೊಂದಿಗೆ ಬರೋಬ್ಬರಿ 1800 ನಿಟ್ಸ್ ಬ್ರೈಟ್‌ನೆಸ್ ಜೊತೆಗೆ ಬರುತ್ತದೆ. iQOO 13 ಸ್ಮಾರ್ಟ್ಫೋನ್ ನಿಮಗೆ ಅದ್ದೂರಿಯ ಬ್ಯಾಟರಿ ಕಿಟ್ ಜೊತೆಗೆ ಬರುತ್ತದೆ. ಆದೇನಪ್ಪ ಅಂದರೆ ಇದರಲ್ಲಿ ನಿಮಗೆ 6000mAh ಸಿಲಿಕಾನ್ ಅನೋಡ್ ಬ್ಯಾಟರಿ ಮತ್ತು 120W ಫ್ಲಾಶ್ ಚಾರ್ಜರ್ ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ ಫೋನ್ Bypass Charging ಮತ್ತು 100W PPS Technology ಸಪೋರ್ಟ್ ಮಾಡುವ ಫೀಚರ್ಗಳನ್ನು ಹೊಂದಿದೆ.
iQOO 13 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಇದರಲ್ಲಿ 50MP Sony IMX921 VCS ಪ್ರೈಮರಿ ಕ್ಯಾಮೆರಾ OIS ಸಪೋರ್ಟ್ ಜೊತೆಗೆ f/.1.88 ಅಪರ್ಚರ್ ಜೊತೆಗೆ ಬಂದ್ರೆ ಮತ್ತೊಂದು 50MP Sony ಟೆಲಿಫೋಟೋ ಕ್ಯಾಮೆರಾ f/.1.85 ಅಪರ್ಚರ್ 4x Zoom ಮತ್ತು ಕೊನೆಯದಾಗಿ 50MP ಅಲ್ಟ್ರಾ ವೈಡ್ ಸೆನ್ಸರ್ f/.2.0 ಅಪರ್ಚರ್ ಅನ್ನು ಒಳಗೊಂಡಿದೆ. ಕೊನೆಯದಾಗಿ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾದೊಂದಿಗೆ 4K 60FPS ಸಪೋರ್ಟ್ ಮಾಡುವ ಸೆನ್ಸರ್ ಅನ್ನು ಹೊಂದಿರುವ ಮೊದಲ ಸ್ಮಾರ್ಟ್ಫೋನ್ ಆಗಿದೆ.
iQOO 13 ಸ್ಮಾರ್ಟ್ಫೋನ್ ಲೇಟೆಸ್ಟ್ ಫೋನ್ Qualcomm Snapdragon 8 Elite ಪ್ರೊಸೆಸರ್ ಜೊತೆಗೆ LPDDR5X RAM ಮತ್ತು USF 4.1 ಸ್ಟೋರೇಜ್ ಅನ್ನು ಹೊಂದಿದೆ. ಈ ಫೋನ್ 15 Funtouch ಆಪರೇಟಿಂಗ್ ಸಿಸ್ಟಂ ಜೊತೆಗೆ 4 ವರ್ಷದ ಅನ್ದ್ರೋಯಿಡ್ ಅಪ್ಡೇಟ್ ಮತ್ತು 5 ವರ್ಷದ ಸೆಕ್ಯೂರಿಟಿ ಅಪ್ಡೇಟ್ ನೀಡುತ್ತದೆ. Link to Window ಎಂಬ ಹೊಸ ಫೀಚರ್ ಅನ್ನು ಸಹ ಈ ಫೋನ್ ಸಪೋರ್ಟ್ ಮಾಡುತ್ತದೆ. ಅಲ್ಲದೆ AI ಟೆಕ್ನಾಲಜಿಯನ್ನು ಸಹ ಈ ಪವರ್ಫುಲ್ ಸ್ಮಾರ್ಟ್ಫೋನ್ ಹೊಂದಿದ್ದು ಫೋಟೊದಲ್ಲಿ ಅನಗತ್ಯ ವಸ್ತುಗಳನ್ನು ಅಳಿಸಬಹುದು.