iQOO 13 First Sale: ಬರೋಬ್ಬರಿ 3000 ರೂಗಳ ಸ್ಪೆಷಲ್ ಡಿಸ್ಕೌಂಟ್‍ನೊಂದಿಗೆ ಮೊದಲ ಮಾರಾಟ ಶುರು!

iQOO 13 First Sale: ಬರೋಬ್ಬರಿ 3000 ರೂಗಳ ಸ್ಪೆಷಲ್ ಡಿಸ್ಕೌಂಟ್‍ನೊಂದಿಗೆ ಮೊದಲ ಮಾರಾಟ ಶುರು!
HIGHLIGHTS

ಭಾರತದಲ್ಲಿ ಲೇಟೆಸ್ಟ್ iQOO 13 ಸ್ಮಾರ್ಟ್ಫೋನ್ ಮೊದಲ ಮಾರಾಟ ಇಂದು ಮಧ್ಯಾಹ್ನದಿಂದ ಶುರು

iQOO 13 ಸ್ಮಾರ್ಟ್ಫೋನ್ ಬರೋಬ್ಬರಿ 3000 ರೂಗಳ ಸ್ಪೆಷಲ್ ಡಿಸ್ಕೌಂಟ್‍ನೊಂದಿಗೆ ಮೊದಲ ಮಾರಾಟ ಶುರು!

32MP ಸೆಲ್ಫಿ ಕ್ಯಾಮೆರಾ, 12GB RAM ಮತ್ತು 6000mAh ಬ್ಯಾಟರಿಯೊಂದಿಗೆ ಅನೇಕ ಆಕರ್ಷಕ ಫೀಚರ್ಗಳನ್ನು ಹೊಂದಿದೆ.

iQOO 13 First Sale: ಇಂದು ಭಾರತದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಐಕ್ಯೂ (iQOO) ಕಂಪನಿಯ ಲೇಟೆಸ್ಟ್ iQOO 13 ಸ್ಮಾರ್ಟ್ಫೋನ್ ಮೊದಲ ಮಾರಾಟವನ್ನು ಇಂದು ಅಂದ್ರೆ 11ನೇ ಡಿಸೆಂಬರ್ 2024 ರಂದು ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಇದರ ವಿಶೇಷತೆ ಅಂದ್ರೆ iQOO 13 ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 3000 ರೂಗಳ ಬಿಡುಗಡೆಯ ಸ್ಪೆಷಲ್ ಡಿಸ್ಕೌಂಟ್‍ನೊಂದಿಗೆ ಮೊದಲ ಮಾರಾಟ ಶುರುವಾಗಲಿದೆ. ಇದರಲ್ಲಿ ನಿಮಗೆ 32MP ಸೆಲ್ಫಿ ಕ್ಯಾಮೆರಾ, 12GB RAM ಮತ್ತು 6000mAh ಬ್ಯಾಟರಿಯೊಂದಿಗೆ ಅನೇಕ ಆಕರ್ಷಕ ಫೀಚರ್ಗಳನ್ನು ಹೊಂದಿದೆ.

iQOO 13 First Sale ಬೆಲೆ ಮತ್ತು ಆಫರ್ಗಳೇನು?

ಈ ಲೇಟೆಸ್ಟ್ iQOO 13 ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಮೊದಲನೆಯದು 12GB RAM ಜೊತೆಗೆ 256GB ಸ್ಟೋರೇಜ್ ಇದರ ಬೆಲೆ 54,999 ರೂಗಳಾಗಿದ್ದು ಇದರ ಕ್ರಮವಾಗಿ 16GB RAM ಜೊತೆಗೆ 512GB ಸ್ಟೋರೇಜ್ ಇದರ ಬೆಲೆ 59,999 ರೂಗಳಾಗಿವೆ. ಆದರೆ ಹೆಚ್ಚುವರಿಯಾಗಿ HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಕಾರ್ಡ್ ಬಳಕೆದಾರರು ಫ್ಲಾಟ್ ರೂ 3,000 ರಿಯಾಯಿತಿಯನ್ನು ಪಡೆಯುತ್ತಾರೆ. Vivo/iQOO ಅಲ್ಲದ ಸ್ಮಾರ್ಟ್ಫೋನ್ಗಳಲ್ಲಿ ರೂ 3,000 ರೂಗಳ ಜೊತೆಗೆ Vivo / iQOO ಫೋನ್ಗಳ ಮೇಲೆ ಬರೋಬ್ಬರಿ 5,000 ರೂಗಳ ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ.

iQOO 13 First Sale today

iQOO 13 ಫೀಚರ್ ಮತ್ತು ವಿಶೇಷತೆಗಳೇನು?

iQOO 13 ಸ್ಮಾರ್ಟ್ಫೋನ್ 2K ರೆಸಲ್ಯೂಶನ್‌ನೊಂದಿಗೆ 6.82 ಇಂಚಿನ AMOLED ಡಿಸ್ಟ್ರೇಯನ್ನು 3168 x 1440 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ ಹೊಂದಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಇದರ ಗರಿಷ್ಠ ಹೊಳಪು 4500 ನಿಟ್ಸ್ ಆಗಿದೆ. iQOO 13 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 50MP ಪ್ರೈಮರಿ ಕ್ಯಾಮೆರಾ, 50MP ವೈಡ್ ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಲೆನ್ಸ್ ಹೊಂದಿದೆ.

Also Read: Realme 14x 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲು ಸಜ್ಜಾಗಿದೆ!

ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್ಫೋನ್ ನಾರ್ಡೊ ಗ್ರೇ ಮತ್ತು ಲೆಜೆಂಡ್ ಎಂಬ ಫೋನ್ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

iQOO 13 First Sale today

ಸ್ಮಾರ್ಟ್ರೋನ್ Qualcomm Snapdragon 8 Elite ಪ್ರೊಸೆಸರ್ನೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್‌ನ ಸುರಕ್ಷತೆಗಾಗಿ ಇದು ಇನ್-ಡಿಸ್ಸೇ ಫಿಂಗರ್‌ಪ್ರಿಂಟ್‌ ಸಂವೇದಕವನ್ನು ಒದಗಿಸಲಾಗಿದೆ. ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಸ್ಮಾರ್ಟ್ಸನ್ ಬರುತ್ತದೆ. ಇದು 5 ವರ್ಷಗಳವರೆಗೆ ನಾಲ್ಕು ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುತ್ತದೆ. iQOO 13 ಸ್ಮಾರ್ಟ್ಫೋನ್ ಪವರ್ ಮಾಡಲು 6000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 120W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. iQOO 13 ಸ್ಮಾರ್ಟ್ಫೋನ್ ಟೈಪ್-ಸಿ ಪೋರ್ಟ್, ವೈ-ಫೈ 7 ಮತ್ತು ಎನ್‌ಎಫ್‌ಸಿ ಬೆಂಬಲದೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo