50MP + 50MP + 64MP ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನೊಂದಿಗೆ iQOO 12 5G Series ಬಿಡುಗಡೆ | Tech News
iQOO 12 5G Series ಸ್ಮಾರ್ಟ್ಫೋನ್ 1.5K OLED ಸ್ಕ್ರೀನ್ ಜೊತೆಗೆ Samsung E7 AMOLED ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ.
iQOO 12 5G Series ಫೋನ್‌ಗಳು ಅತ್ಯಂತ ಪವರ್ಫುಲ್ ಅಲ್ಟ್ರಾ-ವೈಡ್ ವೈಬ್ರೇಶನ್ ಮೋಟಾರ್ ಮತ್ತು ಡ್ಯುಯಲ್ ಸ್ಪೀಕರ್ ಹೊಂದಿವೆ
iQOO 12 5G Series ಸ್ಮಾರ್ಟ್ಫೋನ್ ಭಾರತದಲ್ಲಿನ ಬಿಡುಗಡೆಯ ದಿನಾಂಕವನ್ನು 12ನೇ ಡಿಸೆಂಬರ್ 2023 ರಂದು ಘೋಷಿಸಿದೆ.
ಐಕ್ಯೂ ಅಧಿಕೃತವಾಗಿ ತನ್ನ ಹೊಸ iQOO 12 5G Series ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಭಾರತದಲ್ಲಿನ ಬಿಡುಗಡೆಯ ದಿನಾಂಕವನ್ನು 12ನೇ ಡಿಸೆಂಬರ್ 2023 ರಂದು ಘೋಷಿಸಿದೆ. ಈ ಸ್ಮಾರ್ಟ್ಫೋನ್ 1.5K OLED ಸ್ಕ್ರೀನ್ ಜೊತೆಗೆ Samsung E7 AMOLED ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಸರಣಿಯ ಎರಡು 5G ಫೋನ್‌ಗಳು ಅತ್ಯಂತ ಪವರ್ಫುಲ್ ಅಲ್ಟ್ರಾ-ವೈಡ್ ವೈಬ್ರೇಶನ್ ಮೋಟಾರ್ ಮತ್ತು ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿವೆ. ಇದರ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಮತ್ತು ಡಿಸೈನಿಂಗ್ ಇದರ ಹೈಲೈಟ್ ಆಗಿದ್ದು ಇದರ ಸಂಪೂರ್ಣ ಒಂದಿಷ್ಟು ಮಾಹಿತಿಯನ್ನು ಮುಂದೆ ತಿಳಿಯಿರಿ.
Also Read: ಇವೇ ನೋಡಿ ₹10,000 ರೂಗಳೊಳಗೆ ಬರುವ ಬೆಸ್ಟ್ Smart TVs! ಫೀಚರ್ ಮತ್ತು ಆಫರ್‌ಗಳೇನು?
iQOO 12 5G Series ಫೀಚರ್ ಮತ್ತು ವಿಶೇಷತೆಗಳು
ಈ ಐಕ್ಯೂ ಸ್ಮಾರ್ಟ್‌ಫೋನ್‌ಗಳು iQOO 5G ಸ್ಮಾರ್ಟ್ಫೋನ್ 12 1.5K ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ 144Hz AMOLED ಡಿಸ್ಪ್ಲೇಯನ್ನು ಹೊಂದಿದೆ. ಆದರೆ iQOO 12 Pro ಸ್ಮಾರ್ಟ್ಫೋನ್ 2K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್‌ನೊಂದಿಗೆ 6.78 ಇಂಚಿನ ಕರ್ವ್ E7 AMOLED ಸ್ಕ್ರೀನ್ ಹೊಂದಿದೆ. ಈ ಸ್ಮಾರ್ಟ್ಫೋನ್ 50MP ವೈಡ್ ಆಂಗಲ್ ಲೆನ್ಸ್, 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 64MP ಟೆಲಿಫೋಟೋ ಲೆನ್ಸ್ ಮತ್ತು 100x ಡಿಜಿಟಲ್ ಜೂಮ್ ಬೆಂಬಲದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. 1080p ವೀಡಿಯೋ ರೆಕಾರ್ಡಿಂಗ್ ಸಾಮರ್ಥ್ಯಕ್ಕೆ ಬೆಂಬಲದೊಂದಿಗೆ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ.
ಈ ಸ್ಮಾರ್ಟ್‌ಫೋನ್‌ಗಳು Snapdragon 8 Gen 3 ಚಾಲಿತ ಫೋನ್‌ಗಳು ಈಗ ಚೀನಾದಲ್ಲಿ ಅಧಿಕೃತವಾಗಿವೆ. ಹೊಸ ಪ್ರಮುಖ ಚಿಪ್ ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ಹಾರ್ಡ್‌ವೇರ್, ಸುಧಾರಿತ ಡಿಸೈನಿಂಗ್ ಹೊಂದಿವೆ. ಅಲ್ಲದೆ ಅವು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ OriginOS ನೊಂದಿಗೆ ನಡೆಯುತ್ತವೆ. iQOO 12 ಫೋನ್ 120W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಆದರೆ iQOO 12 Pro ಸ್ವಲ್ಪ ದೊಡ್ಡದಾದ 5100mAh ಬ್ಯಾಟರಿಯನ್ನು 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.
Also Read: AI Deep Fake: ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಬೋಲ್ಡ್ ವಿಡಿಯೋ ವೈರಲ್! ಮೌನ ಮುರಿದ ಕಿರಿಕ್ ಬೆಡಗಿ
ಐಕ್ಯೂ ಫೋನ್‌ಗಳ ಬೆಲೆ ಮತ್ತು ಲಭ್ಯತೆ
ಕಂಪನಿಯಲ್ಲಿ iQOO 12 5G Series ಲೆಜೆಂಡ್ ಆವೃತ್ತಿಯನ್ನು BMW ಲೋಗೋದೊಂದಿಗೆ ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಟ್ರ್ಯಾಕ್‌ನೊಂದಿಗಿನ ಆವೃತ್ತಿಯಲ್ಲೂ ಲಭ್ಯವಿದೆ. ಈ ಎರಡೂ ಗ್ಲಾಸ್ ಬ್ಯಾಕ್‌ನೊಂದಿಗೆ ಮತ್ತು ರೆಡ್ ಎಡಿಷನ್ ಹಿಂಭಾಗದಲ್ಲಿ ಲೆದರ್ ಸ್ಕಿನ್ ತರಹದ ಫಿನಿಶಿಂಗ್ ಹೊಂದಿದೆ.
iQOO 12 12GB+256GB – 3999 ಯುವಾನ್ (USD 549 / ರೂ. 45,715)
iQOO 12 16GB+512GB – 4299 ಯುವಾನ್ (USD 590 / ರೂ. 49,915)
iQOO 12 16GB+1TB – 4699 ಯುವಾನ್ (USD 645 / ರೂ. 54,560)
iQOO 12 Pro 16GB+256GB – 4999 ಯುವಾನ್ (USD 686 / ರೂ. 58,045 )
iQOO 12 Pro 16GB+512GB – 5499 ಯುವಾನ್ (USD 754 / ರೂ. 62,860)
iQOO 12 Pro 16GB+1TB – 5999 ಯುವಾನ್ (USD 823 / ರೂ. 68,575)
ಈ iQOO 12 5G Series ಫೋನ್‌ಗಳು ಇಂದೇ 14ನೇ ನವೆಂಬರ್ 2023 ಪ್ರೀ-ಆರ್ಡರ್ ಮಾಡಲು ಲಭ್ಯವಿರುತ್ತವೆ ಮತ್ತು ಇದನ್ನು ಆಸಕ್ತರು 24ನೇ ನವೆಂಬರ್ 2023 ರಿಂದ ಚೀನಾದಲ್ಲಿ ಮಾರಾಟವಾಗಲಿದ್ದು ಇದರ ಬೆಲೆಗಳು ಈ ಕೆಳಗಿನಂತಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile