iPhone 15 vs Samsung Galaxy S23 ಫೀಚರ್ ಮತ್ತು ಬೆಲೆಯಲ್ಲಿ ಯಾವ ಫೋನ್ Powerful ನೀವೇ ಹೋಲಿಸಿ ನೋಡಿ | Tech News
ವಿಶ್ವದಲ್ಲಿ ಈ ಆಪಲ್ ಮತ್ತು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ ಬ್ರಾಂಡ್ ಹಲವಾರು ವರ್ಷಗಳಿಂದ ಅತಿದೊಡ್ಡ ಮೊಬೈಲ್ ತಯಾರಕರಾಗಿದ್ದಾರೆ
Apple iPhone 15 ಮತ್ತು ಆಂಡ್ರಾಯ್ಡ್ ಮಾರುಕಟ್ಟೆಯನ್ನು ಹಾಳುತ್ತಿರುವ Samsung Galaxy S23 ಫೀಚರ್ ಮತ್ತು ಬೆಲೆಯನ್ನು ನೀಡಿದ್ದೇನೆ
ಈ iPhone 15 vs Samsung Galaxy S23 ಹೋಲಿಕೆಯ ಮಾಹಿತಿ ನಿಮಗೆ ಇಷ್ಟವಾದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.
ವಿಶ್ವದಲ್ಲಿ ಈ ಆಪಲ್ ಮತ್ತು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ ಬ್ರಾಂಡ್ ಹಲವಾರು ವರ್ಷಗಳಿಂದ ಅತಿದೊಡ್ಡ ಮೊಬೈಲ್ ತಯಾರಕರಾಗಿದ್ದಾರೆ. ಇವುಗಳ ಹೆಸರೇ ಸಾಕಷ್ಟು ಪವರ್ಫುಲ್ ಆಗಿದೆ ಆದ್ದರಿಂದ ಪ್ರತಿ ವರ್ಷ ಗ್ರಾಹಕರು ತಮ್ಮ ಪ್ರಮುಖ ಡಿವೈಸ್‌ಗಳನ್ನು ಪಡೆಯುವುದು ಅಥವಾ ಹೊಸದರ ನಡುವೆ ಹಳೆಯದನ್ನು ಹೋಲಿಕೆ ಮಾಡಿ ವಿಶೇಷ ಹೊಸ ವಿಷಯಗಳನ್ನು ತ್ವರಿತವಾಗಿ ಸೆಳೆಯುವುದರಲ್ಲಿ ಸದಾ ಕಾತುರರಾಗಿರುತ್ತಾರೆ. ಈ ಲೇಖನದಲ್ಲಿ ನೆನ್ನೆ ಬಿಡುಗಡೆಯಾದ Apple iPhone 15 ಮತ್ತು ಆಂಡ್ರಾಯ್ಡ್ ಮಾರುಕಟ್ಟೆಯನ್ನು ಹಾಳುತ್ತಿರುವ Samsung Galaxy S23 ಇವುಗಳ ಫೀಚರ್ ಮತ್ತು ಬೆಲೆಯೊಂದಿಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಹಂತ ಹಂತವಾಗಿ ನೀಡಿದ್ದೇನೆ. ಈ iPhone 15 vs Samsung Galaxy S23 ಹೋಲಿಕೆಯ ಮಾಹಿತಿ ನಿಮಗೆ ಇಷ್ಟವಾದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.
iPhone 15 vs Samsung Galaxy S23 ಡಿಸೈನಿಂಗ್
ಮೊದಲಿಗೆ ಇವುಗಳ ಡಿಸೈನಿಂಗ್ ಬಗ್ಗೆ ಮಾತನಾಡುವುದಾದರೆ iPhone 15 ಹಿಂಭಾಗದಲ್ಲಿ ಗ್ಲಾಸ್ ಹೊಂದಿದ್ದು ಇದರ ಫ್ರೇಮ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇದು IP68 ಮೂಲಕ ವಾಟರ್ ಮತ್ತು ಡಸ್ಟ್ ಪ್ರೊಫ್ ಆಗಿದೆ. ಬಯೋಮೆಟ್ರಿಕ್‌ನಲ್ಲಿ ನಿಮಗೆ 3D ಫೇಸ್ ಅನ್ಲಾಕ್ ಫೀಚರ್ ಸಪೋರ್ಟ್ ಮಾಡುತ್ತದೆ. ಇದನ್ನು ನೀವು ಕಪ್ಪು, ನೀಲಿ, ಹಸಿರು, ಹಳದಿ ಮತ್ತು ಪಿಂಕ್ ಬಣ್ಣಗಳಲ್ಲಿ ಪಡೆಯಬಹುದು. ಇದರ ಕ್ರಮವಾಗಿ Galaxy S23 ನೋಡುವುದಾದರೆ ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v2 ಹೊಂದಿದ್ದು ಇದರ ಫ್ರೇಮ್ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಇದು ಸಹ IP68 ಮೂಲಕ ವಾಟರ್ ಮತ್ತು ಡಸ್ಟ್ ಪ್ರೊಫ್ ಆಗಿದೆ. ಬಯೋಮೆಟ್ರಿಕ್‌ನಲ್ಲಿ 2D ಫೇಸ್ ಅನ್ಲಾಕ್ ಜೊತೆಗೆ ಅಲ್ಟ್ರಾಸೋನಿಕ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಪೋರ್ಟ್ ಮಾಡುತ್ತದೆ. ಇದನ್ನು ನೀವು ಫ್ಯಾಂಟಮ್ ಬ್ಲಾಕ್, ಕ್ರೀಮ್, ಲೈಟ್ ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳಲ್ಲಿ ಖರೀದಿಸಬಹುದು.
iPhone 15 vs Samsung Galaxy S23 ಡಿಸ್ಪ್ಲೇ
ಎರಡನೇಯದಾಗಿ ಇವುಗಳ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ iPhone 15 ದೊಡ್ಡದಾದ 6.1 ಇಂಚಿನ OLED ಸೂಪರ್ ರೇಟಿನ XDR ಡಿಸ್ಪ್ಲೇಯನ್ನು 2556 x 1179 ರೆಸಲ್ಯೂಶನ್‌ನೊಂದಿಗೆ ಹೊಂದಿದೆ. ನಿಮಗೆ ಇದರಲ್ಲಿ 60Hz ರಿಫ್ರೆಶ್ ರೇಟ್ ಜೊತೆಗೆ 86.38% ಸ್ಕ್ರೀನ್ ಟು ಬಾಡಿ ರೇಷುವಿನೊಂದಿಗೆ ಸ್ಮೋಥ್ ಡಿಸ್ಪ್ಲೇ ಅನುಭವವನ್ನು ನೀಡುತ್ತದೆ. Samsung Galaxy S23 ಸಹ ಐಫೋನ್‌ನಂತೆ 6.1 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು 2340 x 1080 ರೆಸಲ್ಯೂಶನ್‌ನೊಂದಿಗೆ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v2 ಅನ್ನು ಒಳಗೊಂಡಿದೆ. ನಿಮಗೆ ಇದರಲ್ಲಿ 120Hz ರಿಫ್ರೆಶ್ ರೇಟ್ ಜೊತೆಗೆ 88.57% ಸ್ಕ್ರೀನ್ ಟು ಬಾಡಿ ರೇಷುವಿನೊಂದಿಗೆ ಬರುತ್ತದೆ. ಕೊನೆಯದಾಗಿ ಇವೇರಡು ಫೋನ್ಗಳು HDR10+ ಅನ್ನು ಸಪೋರ್ಟ್ ಮಾಡುತ್ತವೆ.
iPhone 15 vs Samsung Galaxy S23 ಹಾರ್ಡ್‌ವೇರ್
ಮೂರನೇಯದಾಗಿ ಹಾರ್ಡ್‌ವೇರ್ ಬಗ್ಗೆ ಮಾತನಾಡುವುದಾದರೆ ಮೊದಲಿಗೆ iPhone 15 ಫೋನ್ A16 ಬಯೋನಿಕ್ 4 ನ್ಯಾನೋಮೀಟರ್ ಚಿಪ್‌ನೊಂದಿಗೆ Hexa ಕೋರ್ ಪ್ರೊಸೆಸರ್ ಮತ್ತು GPU 5 ಕೋರ್ ಅಡಿಯಲ್ಲಿ iOS 17.x ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರ ಆರಂಭ 6GB LPDDR5 RAM ಜೊತೆಗೆ 128GB ವಿಸ್ತರಿಸಲಾಗದ ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. Galaxy S23 ಫೋನ್ Qualcomm Snapdragon 8 Gen 2 ಪ್ರೊಸೆಸರ್ ಮತ್ತು ಅಡ್ರಿನೊ 740 ಓಕ್ಟಾ ಕೋರ್ ಅಡಿಯಲ್ಲಿ Android 13 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರ ಆರಂಭ 8GB LPDDR5X RAM ಜೊತೆಗೆ 128GB ವಿಸ್ತರಿಸಲಾಗದ ಸ್ಟೋರೇಜ್‌ನೊಂದಿಗೆ ಲಭ್ಯವಿದೆ.
iPhone 15 vs Samsung Galaxy S23 ಕ್ಯಾಮೆರಾ
ಇದರ ನಾಲ್ಕನೇಯ ಅಂಶವಾಗಿ ಇವುಗಳ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಮೊದಲಿಗೆ iPhone 15 ಡ್ಯೂಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಬರುತ್ತದೆ. ಇದರ 48MP ಪ್ರೈಮರಿ ಸೆನ್ಸರ್ F1.6 ಅಪರ್ಚರ್ನೊಂದಿಗೆ ದ್ವಿತೀಯ 12MP ಅಲ್ಟ್ರಾ ವೈಡ್ ಸೆನ್ಸರ್ F2.4 ಅಪರ್ಚರ್ನೊಂದಿಗೆ ಬರುತ್ತದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 3840×2160 ರೆಸುಲ್ಯೂಷನ್ 4K UHD ಮೂಡ್ 60 fps ಅಲ್ಲಿ ವಿಡಿಯೋಗಳನ್ನು ಶೂಟ್ ಮಾಡಬಹುದು. Galaxy S23 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ ಬರುತ್ತದೆ. ಪ್ರೈಮರಿ 50MP ಆಪ್ಟಿಕಲ್ ಇಮೇಜ್ ಸ್ಟೆಬಿಲಿಟಿಯೊಂದಿಗೆ F1.8 ಅಪರ್ಚರ್ನೊಂದಿಗೆ ಬರುತ್ತದೆ. ಎರಡನೇಯದಾಗಿ 10MP ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾ ವೈಡ್ F2.2 ಅಪರ್ಚರ್ನೊಂದಿಗೆ ಬರುತ್ತದೆ. ಇದರೊಂದಿಗೆ 7680×4320 ರೆಸುಲ್ಯೂಷನ್ 8K UHD ಮೂಡ್ 30 fps ಅಲ್ಲಿ ವಿಡಿಯೋಗಳನ್ನು ಶೂಟ್ ಮಾಡಬಹುದು.
iPhone 15 vs Samsung Galaxy S23 ಬ್ಯಾಟರಿ
ಕೊನೆಯ ಫೀಚರ್ ಬಗ್ಗೆ ಮಾತನಾಡುವುದಾದರೆ ಇವುಗಳ ಬ್ಯಾಟರಿಯಲ್ಲಿ ಮೊದಲಿಗೆ iPhone 15 ಟೆಕ್‌ರಾಡಾರ್‌ನ ವಿವರವಾದ ವರದಿಯ ಪ್ರಕಾರ ಈ ಸ್ಟ್ಯಾಂಡರ್ಡ್ iPhone 15 ಸರಿ ಸುಮಾರು 3877mAh ಬ್ಯಾಟರಿಯನ್ನು ಹೊಂದಿರಬಹುದು. ಏಕೆಂದರೆ iPhone 14 ಅಲ್ಲಿನ 3279mAh ಬ್ಯಾಟರಿಗೆ ಹೋಲಿಸಿದರೆ ಈ ಬಾರಿ ಇದರಲ್ಲಿ ಸುಮಾರು 18% ಹೆಚ್ಚಳದ ಪ್ರಭಾವಶಾಲಿ ಪ್ರತಿನಿಧಿಸುತ್ತದೆ. ಒಟ್ಟಾರೆಯಾಗಿ ಸುಮಾರು 26 ಘಂಟೆಗಳ ವಿಡಿಯೋ ಪ್ಲೇಬ್ಯಾಕ್ ಅನ್ನು ನೀಡುವುದಾಗಿ ಕಂಪನಿ ಹೇಳಿದೆ. Samsung Galaxy S23 ಸಾಧಾರಣದ 3900mAh ಬ್ಯಾಟರಿಯನ್ನು ಹೊಂದಿದ್ದು 25W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
iPhone 15 vs Samsung Galaxy S23 ಬೆಲೆ ಮತ್ತು ಲಭ್ಯತೆ
ಈ ಲೇಖನದ ಅತಿ ಮುಖ್ಯವಾದ ಪಾಯಿಂಟ್ ಅಂದ್ರೆ iPhone 15 vs Samsung Galaxy S23 ಬೆಲೆ ಮತ್ತು ಲಭ್ಯತೆಯಾಗಿದೆ. ಮೊದಲಿಗೆ iPhone 15 ಒಟ್ಟಾರೆಯಾಗಿ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಅವೆಂದರೆ >128GB -79,900/- ರೂಗಳು >256GB -89,900/- ರೂಗಳು ಮತ್ತು 512GB -10,9900/- ರೂಗಳಾಗಿದೆ. ಇದರ ಪ್ರಿ ಆರ್ಡರ್ ಸೇಲ್ 15ನೇ ಸೆಪ್ಟೆಂಬರ್ 2023 ರಂದು ಸಂಜೆ 5:30pm ರಿಂದ ಮಾಡಬಹುದು. Apple iPhone 15 ಮೊದಲ ಮಾರಾಟ 22ನೇ ಸೆಪ್ಟೆಂಬರ್ 2023 ರಿಂದ ಶುರುವಾಗಲಿದೆ. Samsung Galaxy S23 ಈಗಾಗಲೇ ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಳು, ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಸ್ಯಾಮ್‌ಸಂಗ್ ಸೈಟ್ಗಳಲ್ಲಿ ಲಭ್ಯವಿದೆ. ಸದ್ಯಕ್ಕೆ ಈ ಫೋನ್ ನಿಮಗೆ ಕೇವಲ 2 ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ ಅವೆಂದರೆ 128GB – 74,999/- ರೂಗಳು ಮತ್ತೊಂದು 256GB – 79,999/- ರೂಗಳಾಗಿವೆ. ಈ iPhone 15 vs Samsung Galaxy S23 ಹೋಲಿಕೆಯ ಮಾಹಿತಿ ನಿಮಗೆ ಇಷ್ಟವಾದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile