iPhone 14 ಕೇವಲ 49,999 ರೂಗಳಿಗೆ Flipkart Big Diwali Sale ಸೇಲ್‌ನಲ್ಲಿ ಖರೀದಿಸುವ ಅವಕಾಶ!
ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ 2ನೇ ನವೆಂಬರ್ 2023 ರಿಂದ 11ನೇ ನವೆಂಬರ್ 2023 ವರೆಗೆ ನಡೆಯಲಿದೆ
ಈ ಮಾರಾಟದ ಭಾಗವಾಗಿ iPhone 14 ಅನ್ನು ಕೇವಲ 49,999 ರೂಗಳಿಗೆ ನೀಡುತ್ತಿದೆ.
SBI ಮತ್ತು Flipkart Axis ಬ್ಯಾಂಕ್ ಕಾರ್ಡ್ ಬಳಸುವ ಗ್ರಾಹಕರಿಗೆ 4,000 ರೂಗಳ ಡಿಸ್ಕೌಂಟ್ ನೀಡುತ್ತಿದೆ.
ಭಾರತದಲ್ಲಿ ಫ್ಲಿಪ್ಕಾರ್ಟ್ ದೀಪಾವಳಿ ಹಬ್ಬದ ಸೀಸನ್ ಸೇಲ್‌ನಲ್ಲಿ ಲೇಟೆಸ್ಟ್ ಮೊಬೈಲ್ ಫೋನ್‌ಗಳ ಮೇಲೆ ಭರ್ಜರಿಯ ರಿಯಾಯಿತಿಗಳನ್ನು ನೀಡುತ್ತಿದೆ. ಈ ಸೇಲ್ 2ನೇ ನವೆಂಬರ್ 2023 ರಿಂದ 11ನೇ ನವೆಂಬರ್ 2023 ವರೆಗೆ ಈ ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ (Flipkart Big Diwali Sale) ನಡೆಯಲಿದೆ. ಫ್ಲಿಪ್ಕಾರ್ಟ್ ತನ್ನ ಮುಂಬರುವ ಬಿಗ್ ದೀಪಾವಳಿ ಮಾರಾಟದಲ್ಲಿ ಐಫೋನ್ ಮಾಡೆಲ್‌ಗಳಲ್ಲಿ ವರ್ಷದ ಅತ್ಯಂತ ಕಡಿಮೆ ಬೆಲೆಗಳನ್ನು ನೀಡುವುದಾಗಿ ಹೇಳಿದೆ. ಈ ಮಾರಾಟದ ಭಾಗವಾಗಿ iPhone 14 ಅನ್ನು ಕೇವಲ 49,999 ರೂಗಳಿಗೆ ನೀಡುತ್ತಿದೆ. ಈ ಆಫರ್ ಬೆಲೆಯು ಬ್ಯಾಂಕ್ ಕೊಡುಗೆಗಳು ಮತ್ತು ಇತರ ರಿಯಾಯಿತಿಗಳನ್ನು ಒಳಗೊಂಡಿರುತ್ತದೆ.
Flipkart Big Diwali Sale: iPhone 14 ಬೆಲೆ
ಮುಂಬರುವ ದೀಪಾವಳಿ ಮಾರಾಟದ ಟೀಸರ್ ಪುಟದ ಪ್ರಕಾರ 128GB ಸ್ಟೋರೇಜ್ ಜೊತೆಗೆ ಮೂಲ iPhone 14 ಸಾಮನ್ಯವಾಗಿ ನೀವು 69,900 ರೂಗಳಿಗೆ ಲಭ್ಯವಿದೆ. ಆದರೆ ಫ್ಲಿಪ್ಕಾರ್ಟ್ ಸೇಲ್ ಅಡಿಯಲ್ಲಿ ಪೂರ್ವವೀಕ್ಷಣೆಯ ಕೊಡುಗೆಯಾಗಿ 54,999 ರೂಗಳಿಗೆ ನೀಡಲಿದ್ದು ಫ್ಲಿಪ್‌ಕಾರ್ಟ್ ಹೆಚ್ಚುವರಿ ಬ್ಯಾಂಕ್ ಕೊಡುಗೆಯ ರಿಯಾಯಿತಿ SBI ಮತ್ತು Flipkart Axis ಬ್ಯಾಂಕ್ ಕಾರ್ಡ್ ಬಳಸುವ ಗ್ರಾಹಕರಿಗೆ 4,000 ರೂಗಳ ಡಿಸ್ಕೌಂಟ್ ನೀಡುತ್ತಿದೆ.
ಇದಲ್ಲದೆ ಪಟ್ಟಿಯು ಹೆಚ್ಚುವರಿ ಬೆಲೆ ಕಡಿತವನ್ನು ವಿನಿಮಯದ ಮೇಲೆ 1,000 ಹೀಗೆ ಎಲ್ಲಾ ಕೊಡುಗೆಗಳನ್ನು ಒಳಗೊಂಡಂತೆ ಅಂತಿಮ iPhone 14 ಮಾರಾಟದ ಬೆಲೆಯನ್ನು ರೂ. 49,999 ರೂಗಳಿಗೆ ಪಡೆಯಬಹುದು. ಪರ್ಯಾಯವಾಗಿ ಗ್ರಾಹಕರು ಡೌನ್ ಪೇಮೆಂಟ್ 19,999 ಮೊತ್ತವನ್ನು ನೀಡಿ ಫೋನ್ ಪಡೆಯಬಹುದು. ಇದರ ನಂತರ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳ ಮೂಲಕ 35,000ರೂಗಳನ್ನು ತಿಂಗಳ ಕಂತುಗಳಂತೆ ನೀಡಬಹುದು.
Also Read: Laptop Sale 2023: ಅಮೆಜಾನ್ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ಡೀಲ್‌ಗಳು
iPhone 14 ಹೈಲೈಟ್ ವಿಶೇಷಣಗಳು
ಈ ಐಫೋನ್ 14 ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಯಿತು 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ 1200nits ಗರಿಷ್ಠ ಹೊಳಪು ಮತ್ತು ಡಾಲ್ಬಿ ವಿಷನ್‌ಗೆ ಬೆಂಬಲವನ್ನು ಹೊಂದಿದೆ. ಮೂಲ ಮಾದರಿ iPhone 14 A15 ಬಯೋನಿಕ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಹ್ಯಾಂಡ್‌ಸೆಟ್ 12MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು ಎರಡನೇ 12MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದೆ ಮತ್ತು ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಹಿಂಭಾಗದಲ್ಲಿ 120-ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿದೆ.
ಅಲ್ಲದೆ ಇದರ ಮುಂಭಾಗದ ಶೂಟರ್ 12MP ಮೆಗಾಪಿಕ್ಸೆಲ್ ಟ್ರೂಡೆಪ್ತ್ ಕ್ಯಾಮೆರಾ ಆಗಿದೆ. ಈ ಐಫೋನ್ 14 ಫ್ಲಾಟ್-ಎಡ್ಜ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಸಹ ಪಡೆಯುತ್ತದೆ. ಮುಂಭಾಗದ ಪ್ಯಾನೆಲ್‌ನಲ್ಲಿ ಸೆರಾಮಿಕ್ ಶೀಲ್ಡ್ ವಸ್ತು ಮತ್ತು IP68 ಡಸ್ಟ್ ಮತ್ತು ವಾಟರ್ ಪ್ರೂಫ್ ರೇಟಿಂಗ್ ಅನ್ನು ಹೊಂದಿದೆ. ಕೊನೆಯದಾಗಿ ಇದರಲ್ಲಿ ನಿಮಗೆ 3279mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದ್ದು ಫಾಸ್ಟ್ ಚಾರ್ಜಿರ್ ಅನ್ನು ಸಪೋರ್ಟ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile