Apple iPhone 14 Pro VS Samsung Galaxy S23 Ultra 5G: ಭಾರತದಲ್ಲಿ ಈ ಎರಡು ಫೋನ್ಗಳು ಒಂದು ಲಕ್ಷಕ್ಕಿಂತ ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಕಾಲಿಟ್ಟಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು ಇವೆರಡು ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳಾಗಿವೆ. Apple iPhone 14 Pro ಬಹಳಷ್ಟು ಕ್ಯಾಮೆರಾ ಅಪ್‌ಗ್ರೇಡ್‌ಗಳನ್ನು ಮತ್ತು ಡೈನಾಮಿಕ್ ಐಲ್ಯಾಂಡ್ ಅನ್ನು ಒಳಗೊಂಡಿದೆ. ಬ್ಯಾಟರಿ ಬಾಳಿಕೆ ಕಡಿಮೆಯಿದ್ದರೂ ಇದೊಂದು ಅತ್ಯುತ್ತಮ ಫೋನ್ ಆಗಿದೆ. ಇಂದು ನಾವು ಇವುಗಳನ್ನು ಹೋಲಿಸುತ್ತಿದ್ದೇವೆ. ಇವುಗಳ ಬೆಲೆ ಮತ್ತು ಫೀಚರ್‌ಗಳೇನು? ಇವೆರಡರಲ್ಲಿ ಯಾವುದು ಉತ್ತಮ ನೋಡೋಣ.
Apple iPhone 14 Pro ಈ ಫೋನ್‌ನ ಡಿಸೈನ್ ಅನ್ನು ನೋಡುವುದಾದರೆ ಗ್ಲಾಸ್ ಮುಂಭಾಗ (ಕಾರ್ನಿಂಗ್-ನಿರ್ಮಿತ ಗ್ಲಾಸ್), ಗಾಜಿನ ಹಿಂಭಾಗ (ಕಾರ್ನಿಂಗ್-ನಿರ್ಮಿತ ಗ್ಲಾಸ್), ಸ್ಟೇನ್‌ಲೆಸ್ ಸ್ಟೀಲ್ ಫ್ರೇಮ್ ಅನ್ನು ಹೊಂದಿದೆ. ನ್ಯಾನೋ-SIM ಮತ್ತು Esim ನಂತಹ ಡ್ಯುಯಲ್ ಸಿಮ್ ಸ್ಲಾಟ್ ನೊಂದಿಗೆ IP68 ಧೂಳು/ನೀರಿನ ನಿರೋಧಕ (30 ನಿಮಿಷಕ್ಕೆ 6m ವರೆಗೆ) ವನ್ನು ಹೊಂದಿದೆ. ಇದು Apple Pay (ವೀಸಾ, ಮಾಸ್ಟರ್‌ಕಾರ್ಡ್, AMEX ಪ್ರಮಾಣೀಕೃತ) ಅನ್ನು ಒಳಗೊಂಡಿದೆ. Samsung Galaxy S23 Ultra 5G ಡಿಸೈನ್ ಅನ್ನು ನೋಡುವುದಾದರೆ ಗ್ಲಾಸ್ ಫ್ರಂಟ್ (ಗೊರಿಲ್ಲಾ ಗ್ಲಾಸ್ ವಿಕ್ಟಸ್ 2), ಗ್ಲಾಸ್ ಬ್ಯಾಕ್ (ಗೊರಿಲ್ಲಾ ಗ್ಲಾಸ್ ವಿಕ್ಟಸ್ 2), ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿದೆ. ನ್ಯಾನೋ-ಸಿಮ್ ಮತ್ತು eSIM ನಂತಹ ಡ್ಯುಯಲ್ ಸಿಮ್ ಸ್ಲಾಟ್ ನೊಂದಿಗೆ IP68 ಹೊಂದಿದೆ.
iPhone 14 Pro ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಹೊಂದಿದೆ. ಇದರ ಸ್ಕ್ರೀನ್ 120 Hz ನ ರಿಫ್ರೆಶ್ ದರವನ್ನು ಹೊಂದಿದೆ ಮತ್ತು LTPO ತಂತ್ರಜ್ಞಾನವನ್ನು ಬಳಸುತ್ತದೆ. iPhone 14 Pro ಪ್ರತಿ ಇಂಚಿಗೆ 460 ಪಿಕ್ಸೆಲ್‌ಗಳಲ್ಲಿ (ppi) 2556×1179 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಸೆರಾಮಿಕ್ ಶೀಲ್ಡ್ ಗ್ಲಾಸ್ ಹೊಂದಿದ್ದು ಆಲ್ವೇಸ್-ಆನ್ ಡಿಸ್ಪ್ಲೇ ಫೀಚರ್ ಅನ್ನು ಒಳಗೊಂಡಿದೆ. Samsung Galaxy S23 Ultra 5G ಫೋನ್ 6.8 ಇಂಚಿನ (17.27 cm) ಎಡ್ಜ್ ಕ್ವಾಡ್ HD+, 120 Hz ರಿಫ್ರೆಶ್ ದರವನ್ನು ಒಳಗೊಂಡಿದ್ದು ರೆಸಲ್ಯೂಶನ್ 1440 x 3088 ಪಿಕ್ಸೆಲ್‌ಗಳು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಒಳಗೊಂಡಿದ್ದು ಆಲ್ವೇಸ್-ಆನ್ ಡಿಸ್ಪ್ಲೇ ಫೀಚರ್ ಅನ್ನು ಹೊಂದಿದೆ. ಭದ್ರತೆಗಾಗಿ ಈ ಫೋನ್ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.
Apple iPhone 14 Pro 128GB ROM ಜೊತೆಗೆ A16 ಬಯೋನಿಕ್ ಚಿಪ್(4 nm), ಹೆಕ್ಸಾ ಕೋರ್ ಪ್ರೊಸೆಸರ್ ಜೊತೆಗೆ ಇದು IOS ಆಪರೇಟಿಂಗ್ ಸಿಸ್ಟಮ್ ಆಧಾರತವಾಗಿದೆ. ಈ ಫೋನ್ 128GB ವಿಸ್ತರಿಸಲಾಗದ ಇಂಟರ್ನಲ್ ಸ್ಟೋರೇಜ್ ಅನ್ನು ಪಡೆಯುತ್ತದೆ. Samsung Galaxy S23 Ultra 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2, ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 + One UI 5 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Apple iPhone 14 Pro ಹೊಸ ಇಮೇಜ್ ಸಿಗ್ನಲ್ ಪ್ರೊಸೆಸರ್‌ನೊಂದಿಗೆ 1/1.3 ಇಂಚಿನ 48MP ಕ್ವಾಡ್-ಪಿಕ್ಸೆಲ್ ಸೆನ್ಸರ್ ಬಳಸಿಕೊಳ್ಳುತ್ತದೆ.. ಈ ಫೋನ್ 48 MP + 12 MP + 12 MP ಟ್ರಿಪಲ್ ಬ್ಯಾಕ್ ಕ್ಯಾಮೆರಾ ಮತ್ತು 12 MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. 4x ಹೆಚ್ಚಿನ ರೆಸಲ್ಯೂಶನ್‌ಗಾಗಿ 48MP ಮುಖ್ಯ ಕ್ಯಾಮೆರಾವಿದ್ದು ಸಿನಿಮೀಯ ಮೋಡ್ ಈಗ 4K ಡಾಲ್ಬಿ ವಿಷನ್‌ನಲ್ಲಿ 30 fps ನಲ್ಲಿ FHD ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. Samsung Galaxy S23 Ultra 5G 200MP + 10MP + 12MP + 10MP ಬ್ಯಾಕ್ ಕ್ಯಾಮೆರಾ ಮತ್ತು 12MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಮುಖ್ಯ ಕ್ಯಾಮರಾ 8K 30 fps ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಇದರಲ್ಲಿ ನಿಮ್ಮ ಆದ್ಯತೆಗಳು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಫೋಟೋಗಳನ್ನು ಶೂಟ್ ಮಾಡಬಹುದು. ಇದರ ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮೆರಾ ಇದೆ.
Apple iPhone 14 Pro ಟೈಪ್ ಲಿ-ಐಯಾನ್ 3200 mAh ನೊಂದಿಗೆ Qi ವೈರ್‌ಲೆಸ್ ಚಾರ್ಜಿಂಗ್ 7.5W ನೊಂದಿಗೆ MagSafe ವೈರ್‌ಲೆಸ್ ಚಾರ್ಜಿಂಗ್ 15W11 ದಿಂದ ಬೆಂಬಲಿತವಾಗಿದೆ. 20W ಅಡಾಪ್ಟರ್ ಅಥವಾ ಹೆಚ್ಚಿನದರೊಂದಿಗೆ ಸುಮಾರು 30 ನಿಮಿಷಗಳಲ್ಲಿ 50% ವರೆಗೆ (ಪ್ರತ್ಯೇಕವಾಗಿ ಲಭ್ಯವಿದೆ) ಚಾರ್ಜ್ ಮಾಡಬಹುದು. Samsung Galaxy S23 Ultra 5G ಹೆಚ್ಚಿನ ಸಾಮರ್ಥ್ಯದ 5000 mAh ಬ್ಯಾಟರಿಯನ್ನು ಹೊಂದಿದ್ದು ಅಡಾಪ್ಟಿವ್ ಮೋಡ್‌ನಲ್ಲಿ 12 ಗಂಟೆಗಳು ಮತ್ತು 22 ನಿಮಿಷಗಳ ಕಾಲ ಬಹಳ ಪ್ರಬಲವಾಗಿದ್ದು 60Hz ಮೋಡ್‌ನಲ್ಲಿ ಇದರ ಬ್ಯಾಟರಿಯು 13 ಗಂಟೆಗಳು ಮತ್ತು 9 ನಿಮಿಷಗಳ ಕಾಲ ಅತ್ಯುತ್ತಮವಾಗಿ ಬಾಳಿಕೆ ಬರುತ್ತದೆ.
Apple iPhone 14 Pro ಸ್ಪೇಸ್ ಬ್ಲ್ಯಾಕ್, ವೈಟ್, ಗೋಲ್ಡ್, ಡೀಪ್ ಪರ್ಪಲ್ ಕಲರ್ ಗಳಲ್ಲಿದ್ದು ಬ್ಯಾಂಕ್ ರಿಯಾಯಿತಿಯೊಂದಿಗೆ ರೂ 1,22,999 ಕ್ಕೆ Amazon ನಲ್ಲಿ ಲಭ್ಯವಿದೆ. Samsung Galaxy S23 Ultra 5G ಫ್ಯಾಂಟಮ್ ಬ್ಲ್ಯಾಕ್, ಕಾಟನ್ ಫ್ಲವರ್, ಬೊಟಾನಿಕ್ ಗ್ರೀನ್ ಮತ್ತು ಮಿಸ್ಟಿಕ್ ಲಿಲಾಕ್ ಕಲರ್ ಗಳಲ್ಲಿದ್ದು ಬ್ಯಾಂಕ್ ರಿಯಾಯಿತಿಯೊಂದಿಗೆ ರೂ 1,24,999 ಕ್ಕೆ Amazon ನಲ್ಲಿ ಲಭ್ಯವಿದೆ.