Infinix Zero 40 5G ಸ್ಮಾರ್ಟ್‌ಫೋನ್ 108MP ಕ್ಯಾಮೆರಾದ ಮೊದಲ ಸೇಲ್ ಇಂದಿನಿಂದ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?

Infinix Zero 40 5G ಸ್ಮಾರ್ಟ್‌ಫೋನ್ 108MP ಕ್ಯಾಮೆರಾದ ಮೊದಲ ಸೇಲ್ ಇಂದಿನಿಂದ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಭಾರತದಲ್ಲಿ Infinix Zero 40 5G ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Infinix Zero 40 5G ಸ್ಮಾರ್ಟ್‌ಫೋನ್ Dimensity 8200 ಚಿಪ್‌ಸೆಟ್ ಮತ್ತು 50MP ಸೆಲ್ಫಿ ಕ್ಯಾಮೆರಾದೊಂದಿಗೆ ಪರಿಚಯ

Infinix Zero 40 5G ಆಫರ್ ಬೆಲೆಯೊಂದಿಗೆ ಸುಮಾರು 24,999 ರೂಗಳಿಗೆ ಬಿಡುಗಡೆಯಾಗಿದೆ.

ಭಾರತದಲ್ಲಿ ಇನ್ಫಿನಿಕ್ಸ್ (Infinix) ಸ್ಮಾರ್ಟ್ಫೋನ್ ಕಂಪನಿ ತನ್ನ ಹೊಸ Infinix Zero 40 5G ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್‌ಫೋನ್ ದೇಶದಲ್ಲಿ ಕಂಪನಿಯ ಝೀರೋ (Zero) ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಗಿದೆ. Infinix Zero 40 5G ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ಮುಖ್ಯಾಂಶಗಳೆಂದರೆ AMOLED ಡಿಸ್ಪ್ಲೇ, 144Hz ರಿಫ್ರೆಶ್ ರೇಟ್‌ನೊಂದಿಗೆ Dimensity 8200 ಚಿಪ್‌ಸೆಟ್ ಮತ್ತು 50MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಈ Infinix Zero 40 5G ಆಫರ್ ಬೆಲೆಯೊಂದಿಗೆ ಇದರ ಫೀಚರ್ ಮತ್ತು ವಿಶೇಷಣಗಳ ಒಂದಿಷ್ಟು ಮಾಹಿತಿ ಇಲ್ಲಿದೆ.

Infinix Zero 40 5G ಭಾರತದ ಬೆಲೆ ಮತ್ತು ಲಭ್ಯತೆ

Infinix Zero 40 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 21ನೇ ಸೆಪ್ಟೆಂಬರ್ 2024 ರಂದು ಸಂಜೆ 7:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ವೈಲೆಟ್ ಗಾರ್ಡನ್, ಮೂವಿಂಗ್ ಟೈಟಾನಿಯಂ ಮತ್ತು ರಾಕ್ ಬ್ಲಾಕ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ 2 ರೂಪಾಂತರಗಳಲ್ಲಿ ಲಭ್ಯವಾಗಲಿದ್ದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 27,999 ರೂಗಳಿಗೆ ಬಿಡುಗಡೆಗೊಳಿಸಿದೆ.

ಇದರ ಕ್ರಮವಾಗಿ ಅದೇ 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು 30,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ ಪ್ರಸ್ತುತ ಕಂಪನಿ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಕಾರ Infinix Zero 40 5G ಸ್ಮಾರ್ಟ್ಫೋನ್ ಸುಮಾರು 3000 ರೂಗಳ ಅದ್ದೂರಿಯ ಡಿಸ್ಕೌಂಟ್ ನೀಡಿ ಕೇವಲ 24,999 ರೂಗಳಿಗೆ ಮಾರಾಟ ಮಾಡುವ ನಿರೀಕ್ಷೆಗಳಿವೆ.

Also Read: Jio Diwali Dhamaka: ದೀಪಾವಳಿ ಹಬ್ಬದ ಪ್ರಯುಕ್ತ 1 ವರ್ಷಕ್ಕೆ ಉಚಿತ 5G ಇಂಟರ್ನೆಟ್ ನೀಡುತ್ತಿರುವ ಜಿಯೋ

Infinix Zero 40 5G ವಿಶೇಷಣಗಳೇನು?

ಈ ಸ್ಮಾರ್ಟ್ಫೋನ್ 1080 x 2460 ಪಿಕ್ಸೆಲ್‌ಗಳ ರೆಸಲ್ಯೂಶನ್, 144Hz ರಿಫ್ರೆಶ್ ರೇಟ್, 1300 ನಿಟ್‌ಗಳ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.78 ಇಂಚಿನ FHD+ ಮತ್ತು 10-ಬಿಟ್ AMOLED ಕರ್ವ್ ಡಿಸ್‌ಪ್ಲೇ ಹೊಂದಿದೆ. ಕ್ಯಾಮರಾ ಮುಂಭಾಗದಲ್ಲಿ ಇದು OIS ಜೊತೆಗೆ 108MP ಹಿಂಬದಿಯ ಕ್ಯಾಮರಾ, 50MP ಅಲ್ಟ್ರಾ-ವೈಡ್ ಕ್ಯಾಮರಾ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಪಡೆಯುತ್ತದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.

Infinix ZERO 40 5G officially launched in India
Infinix ZERO 40 5G officially launched in India

ಸ್ಮಾರ್ಟ್ಫೋನ್ MediaTek Dimensity 8200 Ultimate 5G ಪ್ರೊಸೆಸರ್ ಜೊತೆಗೆ Mali-G610 MC6 GPU ಅನ್ನು ಹೊಂದಿದೆ. ಚಿಪ್‌ಸೆಟ್ ಅನ್ನು 12GB LPDDR4X RAM ಮತ್ತು 512GB UFS3.1 ಸ್ಟೋರೇಜ್ ಜೋಡಿಸಲಾಗಿದೆ. ಇದು XOS 14.5 ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ. ಸ್ಮಾರ್ಟ್ಫೋನ್ 45W ವೈರ್ಡ್ ಚಾರ್ಜಿಂಗ್, 20W ವೈರ್ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್ಲೆಸ್ ಚಾರ್ಜಿಂಗ್ನೊಂದಿಗೆ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ನ ಇತರ ವೈಶಿಷ್ಟ್ಯಗಳು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ವೈ-ಫೈ 6 ಇ, ಬ್ಲೂಟೂತ್ 5.2, ಜಿಪಿಎಸ್/ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಮತ್ತು ಎನ್‌ಎಫ್‌ಸಿ ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo