ಭಾರತದಲ್ಲಿ ಇನ್ಫಿನಿಕ್ಸ್ (Infinix) ಸ್ಮಾರ್ಟ್ಫೋನ್ ಬ್ರಾಂಡ್ ಕಂಪನಿ ತನ್ನ ಮುಂಬರಲಿರುವ Infinix Zero 40 5G ಸ್ಮಾರ್ಟ್ಫೋನ್ ಅನ್ನು 108MP ಕ್ಯಾಮೆರಾ ಮತ್ತು AI ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಲು ಸಿದ್ದವಾಗಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ಮಲೇಷಿಯಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದಲ್ಲಿ 18ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. Infinix Zero 40 5G ಸ್ಮಾರ್ಟ್ಫೋನ್ ಬಿಡುಗಡೆಗು ಮುಂಚೆಯೇ ಒಂದಿಷ್ಟು ಫೀಚರ್ ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಿದೆ.
Also Read: Vivo T3 Ultra 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ
Infinix Zero 40 5G ಬೆಲೆಯ ಬಗ್ಗೆ ಮಾತನಾಡುವುದಾದರೆ ಈ Infinix Zero 40 5G ಸ್ಮಾರ್ಟ್‌ಫೋನ್‌ನ ಬೆಲೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಕೆಲವು ಮಾಧ್ಯಮಗಳ ಸುದ್ದಿ ವರದಿಗಳ ಪ್ರಕಾರ ಭಾರತದಲ್ಲಿ ಈ 5G ಸ್ಮಾರ್ಟ್‌ಫೋನ್ ಬೆಲೆ ಸುಮಾರು 30,000 ಸಾವಿರ ರೂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಯಾಕೆಂದರೆ ಈಗಾಗಲೇ ಮಲೇಷಿಯಾದಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ 12GB RAM ಮತ್ತು 512GB ಸ್ಟೋರೇಜ್ ಸುಮಾರು 32,999 ರೂಗಳಿಗೆ ಬಿಡುಗಡೆಯಾಗಿತ್ತು ಈಗ ಭಾರತದಲ್ಲಿ ಅದೇ ಮಾದರಿಯ ಫೀಚರ್ಗಳೊಂದಿಗೆ ಸ್ಮಾರ್ಟ್ಫೋನ್ ಬರುವುದಾಗಿ ನಿರೀಕ್ಷಿಸಲಾಗುತ್ತಿದೆ.
Infinix Zero 40 5G ಜಾಗತಿಕ ರೂಪಾಂತರವು 6.78 ಇಂಚಿನ 3D ಕರ್ವ್ AMOLED ಡಿಸ್ಪ್ಲೇಯೊಂದಿಗೆ 144Hz ನ ರಿಫ್ರೆಶ್ ದರ ಮತ್ತು 1300 nits ನ ಗರಿಷ್ಠ ಹೊಳಪನ್ನು ಹೊಂದಿದೆ. ಇದರ ಪ್ರದರ್ಶನಕ್ಕೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಮತ್ತು TUV ರೈನ್‌ಲ್ಯಾಂಡ್ ಐ-ಕೇರ್ ಮೋಡ್ ಪ್ರಮಾಣೀಕರಣವನ್ನು ನೀಡಲಾಗಿದೆ. ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ Infinix Zero 40 5G ಸ್ಮಾರ್ಟ್ಫೋನ್ 108MP ಮೆಗಾಪಿಕ್ಸೆಲ್ ಪ್ರೈಮರಿ ಹಿಂಬದಿಯ ಕ್ಯಾಮೆರಾವನ್ನು 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಇದು MediaTek ಡೈಮೆನ್ಸಿಟಿ 8200 ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು 24GB ವರೆಗೆ ಡೈನಾಮಿಕ್ RAM ಮತ್ತು 512GB ವರೆಗೆ ಇಂಟರ್ನಲ್ ಸ್ಟೋರೇಜ್ ನಿರೀಕ್ಷಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ Infinix UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ Infinix Zero 40 5G ಸ್ಮಾರ್ಟ್ಫೋನ್ ಪವರ್ ತುಂಬಲು 5000mAh ಬ್ಯಾಟರಿಯನ್ನು ಹೊಂದಿದ್ದು ಅದು 45W (ವೈರ್ಡ್) ಮತ್ತು 20W (ವೈರ್‌ಲೆಸ್) ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.