ಇನ್ಫಿನಿಕ್ಸ್ ಭಾರತದಲ್ಲಿ ತನ್ನ ಮುಂಬರಲಿರುವ Infinix Smart 8 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ಈಗಾಗಲೇ ಕಳೆದ ನವೆಂಬರ್ 2023 ರಲ್ಲಿ ನೈಜೀರಿಯಾದಲ್ಲಿ ಪ್ರಾರಂಭಿಸಲಾಯಿಗಿತ್ತು ಈಗ ಕಂಪನಿಯು ಈ ವಾರ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಮುಂಬರುವ ಫೋನ್‌ನ ಕೆಲವೊಂದು ಫೀಚರ್ಗಳ ಕುರಿತು ಕಂಪನಿ ಟೀಸರ್ ಶೇರ್ ಮಾಡಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ನ ಮೈಕ್ರೋ-ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದ್ದು ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕವನ್ನು ದೃಢೀಕರಿಸುವುದರೊಂದಿಗೆ ಫೀಚರ್ಗಳನ್ನು ಸಹ ತೋರಿಸಿದೆ. ಫೋನ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗುವುದು ಎಂದು ಇದು ಸ್ಪಷ್ಟಪಡಿಸುತ್ತದೆ.
Also Read: Instagram ಬಳಕೆದಾರರೆ ಈ Hidden Feature ಬಗ್ಗೆ ನಿಮಗೆಷ್ಟು ಗೊತ್ತು? ಒಮ್ಮೆ ಟ್ರೈ ಮಾಡಲೇಬೇಕು
ಫ್ಲಿಪ್‌ಕಾರ್ಟ್ ಮೈಕ್ರೋ-ಸೈಟ್ ಕಂಪನಿಯು ಇದನ್ನು ಭಾರತದಲ್ಲಿ 13 ಜನವರಿ 2024 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸುತ್ತದೆ. ಈ ಮುಂಬರಲಿರುವ Infinix Smart 8 ಸ್ಮಾರ್ಟ್‌ಫೋನ್ 64GB ಸ್ಟೋರೇಜ್ ಮತ್ತು 4GB RAM ರೂಪಾಂತರದ ಬೆಲೆಯನ್ನು ಕೇವಲ 6,xxx ರೂಗಳಿಗೆ ನೀಡುವುದಾಗಿ ತಿಳಿಸಿದೆ. ಅಂದರೆ ಸುಮಾರು ರೂ. 7000 ಕ್ಕಿಂತ ಕಡಿಮೆ ಇರಿಸಲಾಗುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಲಭ್ಯವಿರುವ Infinix Smart 8 HD ನಂತೆ ಕ್ಯಾಮೆರಾದಲ್ಲಿ ಮ್ಯಾಜಿಕ್ ರಿಂಗ್ ಮತ್ತು ಡೈನಾಮಿಕ್ ಐಲ್ಯಾಂಡ್ ಹೊಂದಿರುವ ನಿರೀಕ್ಷೆಗಳಿವೆ.
ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಅನ್ನು 90Hz ರಿಫ್ರೆಶ್ ರೇಟ್‌ನೊಂದಿಗೆ 6.6 ಇಂಚಿನ ಡಿಸ್ಪ್ಲೇಯೊಂದಿಗೆ ಸಜ್ಜುಗೊಳಿಸುತ್ತದೆ. ಈ ಮುಂಬರುವ ಸ್ಮಾರ್ಟ್ಫೋನ್ AI ಕ್ಯಾಮೆರಾದೊಂದಿಗೆ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಡ್ಯೂಯಲ್ ಕ್ಯಾಮೆರಾ ಸೆಟಪ್ ಅನ್ನು ನಿರೀಕ್ಷಿಸಬಹುದು. ನೈಟ್ ಫೋಟೋಗ್ರಾಫಿಗಾಗಿ ಉತ್ತಮ LED ಫ್ಲಾಶ್ ಸಹ ಹೊಂದಿದೆ. ಸಾಧನವು ಮೀಸಲಾದ ಪೋರ್ಟ್ರೇಟ್ ಮೋಡ್ ಅನ್ನು ಹೊಂದಿದೆ. ಮುಂಬರುವ ಸ್ಮಾರ್ಟ್ಫೋನ್ AR ಫೋಟೋಗ್ರಫಿಗೆ ಬೆಂಬಲವನ್ನು ಸಹ ಒಳಗೊಂಡಿರುತ್ತದೆ. ಫ್ಲ್ಯಾಶ್‌ಲೈಟ್‌ನೊಂದಿಗೆ 8MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ವಿಭಾಗದಲ್ಲಿ Infinix Smart 8 ಮೊದಲನೆಯದು ಎಂದು ಬ್ರ್ಯಾಂಡ್ ಹೇಳಿಕೊಂಡಿದೆ.
Infinix Smart 8 ಸ್ಮಾರ್ಟ್ಫೋನ್ Unisoc T606 ಚಿಪ್‌ನೊಂದಿಗೆ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ನಿರೀಕ್ಷೆಗಳಿವೆ. ಕಂಪನಿ ಒಟ್ಟು ಎರಡು ಬಣ್ಣಗಳಲ್ಲಿ ರೇನ್‌ಬೋ ಬ್ಲೂ, ಶೈನಿ ಗೋಲ್ಡ್, ಟಿಂಬರ್ ಬ್ಲಾಕ್ ಮತ್ತು ಗ್ಯಾಲಕ್ಸಿ ವೈಟ್ ಬಣ್ಣಗಳಲ್ಲಿ ಬರುವ ನಿರೀಕ್ಷೆಗಳಿವೆ. ಅಲ್ಲದೆ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಅನ್ನು ಫೋನ್ ಬಲಭಾಗದಲ್ಲಿ ಇರಿಸಲಾಗುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಈ ವಿಭಾಗದಲ್ಲಿ ಸ್ಮಾರ್ಟ್‌ಫೋನ್ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 10W ಫಾಸ್ಟ್ ಚಾರ್ಜರ್ ಅನ್ನು ಹೊಂದಿರುವುದಾಗಿ ನಿರೀಕ್ಷಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ