ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಇಂದಿನ ಡಿಜಿಟಲ್ ಯುಗದಲ್ಲಿ ಹಲವು ಮಾದರಿಯ ಹೊಸ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇದೆ. Infinix ಬ್ರ್ಯಾಂಡ್ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಆಗಿದೆ. ಇದೇ ಏಪ್ರಿಲ್ 28 ರಂದು Infinix ತನ್ನ ಮುಂಬರುವ Infinix Smart 7 HD ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ Infinix ಕಂಪೆನಿಯು ಪರಿಚಯಿಸಿದ್ದ Infinix Smart 7 ಸ್ಮಾರ್ಟ್‌ಫೋನಿನ ಲೈಟ್ ಆವೃತ್ತಿಯಾಗಿ ಈ ಹೊಸ Infinix Smart 7 HD ಸ್ಮಾರ್ಟ್‌ಫೋನ್ ಪರಿಚಯಗೊಳ್ಳುತ್ತಿದೆ.
Infinix Smart 7 HD ಸ್ಮಾರ್ಟ್ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 1612×720 ಪಿಕ್ಸೆಲ್ ರೆಸಲ್ಯೂಶನ್, 60Hz ರಿಫ್ರೆಶ್ ರೇಟ್ ಮತ್ತು 500 ನೀಟ್ಸ್ ಬ್ರೈಟ್‌ನೆಸ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಜೋಡಿಸಲಾಗಿರುವ Unisoc SC9863A ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧಾರಿತ ಹ್ಯಾಂಡ್ಸೆಟ್ XOS 12ನಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ 3GB ವರೆಗೆ ವರ್ಚುವಲ್ RAM ಬೆಂಬಲಿಸಲಿದೆ.
Infinix Smart 7 HD ಸ್ಮಾರ್ಟ್ಫೋನ್ LED ಫ್ಲ್ಯಾಷ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಈ ಫೋನ್ 13MP ಪ್ರೈಮರಿ ಲೆನ್ಸ್ ಹಾಗೂ 2MP ಸೆನ್ಸಾರ್ ಸಾಮರ್ಥ್ಯದ ಡೆಪ್ತ್ ಲೆನ್ಸ್‌ಗಳನ್ನು ಹೊಂದಿದ್ದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ LED ಫ್ಲ್ಯಾಷ್ ಜೊತೆಗೆ ನಾಚ್ ಶೈಲಿಯಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು 10W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಹಲವಾರು ಎಂಟ್ರಿ ಲೆವೆಲ್ ಫೀಚರ್‌ಗಳನ್ನು ಬೆಂಬಲಿಸುತ್ತದೆ.
ಈ Infinix Smart 7 HD ಸ್ಮಾರ್ಟ್‌ಫೋನ್ಗೆ ಅತ್ಯಂತ ಕಡಿಮೆ ಬೆಲೆ ಇರುವುದನ್ನು ಖಚಿತ ಪಡಿಸಿದ್ದು ಕೈಗೆಟಕುವ ಬೆಲೆಗೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸುವ ಜನಪ್ರಿಯ ಮತ್ತು ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಕೆಲ ಮಾಧ್ಯಮ ವರದಗಳ ಪ್ರಕಾರ Infinix Smart 7 HD ಸ್ಮಾರ್ಟ್‌ಫೋನ್ ನ ಬೆಲೆ 6,000 ರೂ ಗಳಿಗಿಂತ ಕಡಿಮೆ ಇರಬಹುದು ಎಂದು ಹೇಳಲಾಗಿದೆ. ಇದೇ ಏಪ್ರಿಲ್ 28 ರಂದು ಅಧಿಕೃತ ಬೆಲೆ ತಿಳಿಯಲಿದೆ.