ಇನ್ಫಿನಿಕ್ಸ್ ಬ್ರಾಂಡ್ ಇಂದು ಹೊಚ್ಚ ಹೊಸ Infinix S4 ಎಂಬ ಅದ್ದೂರಿಯ ಬಜೆಟ್ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಕೇವಲ 8,999 ರೂಗಳಿಗೆ ಅನಾವರಣಗೊಳಿಸಿದೆ. ಮತ್ತು ಫ್ಲಿಪ್ಕಾರ್ಟ್ನಿಂದ ಮೇ 28 ರಿಂದ ಪ್ರಾರಂಭವಾಗಲಿದೆ. ಈ ಫೋನ್ ಮಿಲನ್ ಬ್ಲಾಕ್, ಸ್ಯಾಫೈರ್ ಸೈನ್ ಮತ್ತು ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸ್ಮಾರ್ಟ್ಫೋನ್ ಪ್ರಮುಖ ಲಕ್ಷಣವೆಂದರೆ ಹೊಸ ಶೈನಿ ಗ್ಲಾಸ್ ಫಿನಿಷ್ ಮತ್ತು ವಾಟರ್ಡ್ರಾಪ್ ನಾಚ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಖ್ಯವಾಗಿ 32MP ಸೆಲ್ಫ್ ಕ್ಯಾಮರಾವನ್ನು ಒಳಗೊಂಡಿದೆ.
ಈ ಇನ್ಫಿನಿಕ್ಸ್ S4 720 x 1520 ಪಿಕ್ಸೆಲ್ ರೆಸಲ್ಯೂಶನ್ 19: 9 ಆಕಾರ ಅನುಪಾತದೊಂದಿಗೆ 6.26 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ವಾಟರ್ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ. ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ನ ಹೆಲಿಯೊ P22 ಕಾರ್ಟೆಕ್ಸ್- A53 ಪ್ರೊಸೆಸರ್ನಿಂದ 2.0GHz PowerVR GE8320 GPU ಜೊತೆಗೆ ನಡೆಯುತ್ತದೆ. ಇದರಲ್ಲಿ 3GB ಯ RAM ಮತ್ತು 32GB ಯ ಇಂಟರ್ನಲ್ ಸ್ಟೋರೇಜ್ ಫೋನ್ ಬೆಂಬಲಿತವಾಗಿದೆ. ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ. ಸೆಕ್ಯೂರಿಟಿ ಫೀಚರ್ಗಳನ್ನು Infinix S4 ಅನ್ನು ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ವೈಶಿಷ್ಟ್ಯಗಳೊಂದಿಗೆ ಅಳವಡಿಸಲಾಗಿದೆ.
ಇದರ ಕ್ಯಾಮೆರಾ ಇಲಾಖೆಯಾ ಬಗ್ಗೆ ಹೇಳಬೇಕಂದರೆ 13MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಲೆನ್ಸ್ ಮತ್ತು ಮೂರನೇಯದಾಗಿ 2MP ಮೆಗಾಪಿಕ್ಸೆಲ್ ಡೆಪ್ತ್ ಫೀಲ್ಡ್ ಸೆನ್ಸರ್ ಸಂಯೋಜನೆಯೊಂದಿಗೆ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಹಿಂಬದಿಯ ಕ್ಯಾಮೆರಾದಲ್ಲಿ ಡ್ಯೂಯಲ್ ಟೋನ್ ಕ್ವಾಡ್ (4) LED ಫ್ಲಾಶ್ ಹೊಂದಿದೆ. ಇದರ ಮುಂಭಾಗದಲ್ಲಿ AR-ನೆರವಿನ ಫೇಸ್ ಅನ್ಲಾಕ್, AI ಕ್ಯಾಮೆರಾ, AI ಬ್ಯೂಟಿ, ಮತ್ತು ಬೊಕೆಗಳಿಗಾಗಿ (ಪೋರ್ಟ್ರೇಟ್ ಮೋಡ್) 32MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ನೊಂದಿಗೆ ಇದು ಬರುತ್ತದೆ.
ಇದರ ಬ್ಯಾಟರಿ ಬಗ್ಗೆ ಹೇಳಬೇಕಂದರೆ ದೊಡ್ಡದಾದ 4000mAh ಬ್ಯಾಟರಿಯೊಂದಿಗೆ ಲೋಡ್ ಆಗುತ್ತದೆ. ಮತ್ತು ಆಂಡ್ರಾಯ್ಡ್ 9.0 ಪೈ ಮೇಲೆ ಕಂಪನಿಯ XOS ನೊಂದಿಗೆ ಚಾಲನೆಯಾಗುತ್ತಿದೆ. ಸಂಪರ್ಕದ ಮುಂಭಾಗದಲ್ಲಿ ಇದು ಡ್ಯುಯಲ್ 4G ವೋಲ್ಟೆ, ಬ್ಲೂಟೂತ್ 5.0, ವೈಫೈ, ಡ್ಯುಯಲ್-ಸಿಮ್, ಜಿಪಿಎಸ್, ಗ್ಲೋನಾಸ್, 3.5 ಎಂಎಂ ಆಡಿಯೋ ಜಾಕ್ ಮತ್ತು ಮೈಕ್ರೋ ಯುಎಸ್ಬಿ ಪೋರ್ಟ್ ಅನ್ನು ಹೊಂದಿದೆ. ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಸುದ್ದಿಗಳಿಗಾಗಿ ಡಿಜಿಟ್ ಕನ್ನಡ Instagram ಮತ್ತು Telegram ಅಪ್ಲಿಕೇಷನ್ಗಳಲ್ಲೂ ಲಭ್ಯ.