ಭಾರತದಲ್ಲಿ ಇನ್ಫಿನಿಕ್ಸ್ (Infinix) ಸ್ಮಾರ್ಟ್‌ಫೋನ್ ತಯಾರಕ ಕಂಪನಿ ತನ್ನ 7ನೇ ವಾರ್ಷಿಕೋತ್ಸವದ ಅಂಗವಾಗಿ ಹೊಸ Infinix NOTE 40 Series Racing Edition ಸ್ಮಾರ್ಟ್‌ಫೋನ್‌ಗಳು ಇಂದು ಅಂದ್ರೆ 26ನೇ ಆಗಸ್ಟ್ 2024 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದರಲ್ಲಿ 108MP ಪ್ರೈಮರಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ Racing Edition ಸ್ಮಾರ್ಟ್‌ಫೋನ್‌ಗಳು ಐಕಾನಿಕ್ F1 ರೇಸಿಂಗ್ ಲೋಗೋದೊಂದಿಗೆ BMW ಗ್ರೂಪ್ ಡಿಸೈನಿಂಗ್ ವರ್ಕ್ಸ್ ಕಂಪನಿಯಿಂದ ಪ್ರೇರಿತವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ Infinix NOTE 40 5G ಮತ್ತು Infinix NOTE 40 Pro 5G ಮಾದರಿಯಲ್ಲೇ ಬಿಡುಗಡೆಯಾಗಿದ್ದು ಕೇವಲ ಹೊರಗಿನ ಡಿಸೈನಿಂಗ್ ಮತ್ತು ಲುಕ್ ಮಾತ್ರ ಬದಲಾಹಿಸಲಾಗಿದೆ.
ಹೊಸ Infinix NOTE 40 Series Racing Edition ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಕರ್ವ್ಡ್ FLEXIBLE AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ಗಳು ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ GG5 ನಿಂದ ರಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಉತ್ಸಾಹಿಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಸೆಲ್ಫಿಗಳಿಗಾಗಿ 32MP ಅಲ್ಟ್ರಾ-ಕ್ಲಿಯರ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಹೊಂದಿರುವ 108MP + 2MP + 2MP ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಹೊಂದಿದೆ. ಫೋನ್ ಸ್ಮಾರ್ಟ್ ನೋಟಿಫಿಕೇಶನ್ಗಳೊಂದಿಗೆ AI ಆಕ್ಟಿವ್ ಹ್ಯಾಲೊ ಲೈಟಿಂಗ್, ತಲ್ಲೀನಗೊಳಿಸುವ ಆಡಿಯೊಗಾಗಿ ಡ್ಯುಯಲ್ JBL ಟ್ಯೂನ್ಡ್ ಸ್ಪೀಕರ್‌ಗಳನ್ನು ಹೊಂದಿದೆ.
Infinix NOTE 40 Series Racing Edition ಸ್ಮಾರ್ಟ್‌ಫೋನ್‌ಗಳು ಹಾರ್ಡ್ವೇರ್ ಬಗ್ಗೆ ನೋಡುವುದಾದರೆ MediaTek D7020 5G ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತವೆ. ಪ್ರಸ್ತುತ 8GB ಮತ್ತು 12GB RAM ಮತ್ತು 256GB ಸ್ಟೋರೇಜ್ ಆಧಾರಿತ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಸ್ಮಾರ್ಟ್‌ಫೋನ್ Infinix Cheetah X1 ಚಿಪ್‌ನೊಂದಿಗೆ ಸಜ್ಜುಗೊಂಡಿದ್ದು 3 ವರ್ಷಗಳ ಭದ್ರತಾ ಪ್ಯಾಚ್‌ಗಳ ಭರವಸೆಯೊಂದಿಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತವೆ.
Infinix NOTE 40 Pro ಸ್ಮಾರ್ಟ್ಫೋನ್ 5,000mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜ್ ಅನ್ನು ಸಪೋರ್ಟ್ ಮಾಡಿದರೆ ಇದರ Infinix NOTE 40 Pro+ ಸ್ಮಾರ್ಟ್‌ಫೋನ್ 4600mAh ಬ್ಯಾಟರಿಯೊಂದಿಗೆ 100W ಫಾಸ್ಟ್ ಚಾರ್ಜ್ ಅನ್ನು ಸಪೋರ್ಟ್ ಮಾಡುತ್ತದೆ. WeLife ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಐಆರ್ ಕಂಟ್ರೋಲ್, ಡಿಜಿಟಲ್ ಕೀಗಳು ಮತ್ತು ಕಾರ್ಡ್‌ಗಳನ್ನು ನಿರ್ವಹಿಸಲು NFC ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ಅನ್ನು ಇತರ ಗಮನಾರ್ಹ ವೈಶಿಷ್ಟ್ಯಗಳು ಒಳಗೊಂಡಿವೆ.
Also Read: Unlimited 5G ಡೇಟಾ ಮತ್ತು ಕರೆಯೊಂದಿಗೆ 84 ದಿನಗಳಿಗೆ ಉಚಿತ Prime Video ನೀಡುವ ಈ Jio ಯೋಜನೆಗಳ ಬೆಲೆ ಎಷ್ಟು?
ಇಂದು ಭಾರತದಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದಾದರೆ ಮೊದಲಿಗೆ ಇದರ Infinix Note 40 Pro ಇದರ 8GB RAM ಮತ್ತು 256GB ಸ್ಟೋರೇಜ್ 21,999 ರೂಗಳಿಗೆ ಲಭ್ಯವಾದರೆ ಇದರ Infinix Note 40 Pro+ ಸ್ಮಾರ್ಟ್ಫೋನ್ ಇದರ 12GB RAM ಮತ್ತು 256GB ಸ್ಟೋರೇಜ್ 24,999 ರೂಗಳಿಗೆ ಲಭ್ಯವಾಗುತ್ತದೆ. ಈ ಸ್ಮಾರ್ಟ್‌ಫೋನ್‌ಗಳು ಎರಡೂ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಈಗಾಗಲೇ ಮಾರಾಟಕ್ಕೆ ಲಭ್ಯವಿದ್ದು ಆಸಕ್ತರು ಖರೀದಿಸಬಹುದು. ಯಾಕೆಂದರೆ ಬರೋಬ್ಬರಿ 3000 ರೂಗಳ ಬಿಡುಗಡೆ ಆಫರ್ ನಿಡುತ್ತಿದ್ದು ಹೆಚ್ಚುವರಿ ಡಿಸ್ಕೌಂಟ್ 2000 ರೂಗಳು ಮತ್ತು ಯಾವುದೇ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ 1000 ರೂಗಳ ಡಿಸ್ಕೌಂಟ್ ಪಡೆದ ನಂತರ ಆಫರ್ 18,999 ರೂಗಳಿಗೆ ಮತ್ತು 21,999 ರೂಗಳಿಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.