ಭಾರತದಲ್ಲಿ 32MP ಸೆಲ್ಫಿ ಕ್ಯಾಮೆರಾದ Infinix Note 40 5G ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್‌ಗಳೇನು?

ಭಾರತದಲ್ಲಿ 32MP ಸೆಲ್ಫಿ ಕ್ಯಾಮೆರಾದ Infinix Note 40 5G ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್‌ಗಳೇನು?
HIGHLIGHTS

Infinix Note 40 5G ಸ್ಮಾರ್ಟ್ಫೋನ್ ಅನ್ನು ಅದ್ದೂರಿಯ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 108MP ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಹೊಂದಿದೆ.

SBI, HDFC, Axis ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಸುಮಾರು 2000 ರೂಗಳವರೆಗಿನ ತ್ವರಿತ ಡಿಸ್ಕೌಂಟ್ ಪಡೆಯಬಹುದು.

ಭಾರತದಲ್ಲಿ ಇನ್ಫಿನಿಕ್ಸ್ (Infinix) ತನ್ನ ಲೇಟೆಸ್ಟ್ ಮತ್ತು ಹೊಸ Infinix Note 40 5G ಸ್ಮಾರ್ಟ್ಫೋನ್ ಅನ್ನು ಅದ್ದೂರಿಯ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 108MP ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾದೊಂದಿಗೆ ಫಾಸ್ಟ್ ಚಾರ್ಜ್ ಜೊತೆಗೆ ಬಿಡುಗಡೆಯಾಗಿದೆ. ಈ ಹೊಸ Infinix Note 40 5G ಸ್ಮಾರ್ಟ್ಫೋನ್ ಅನ್ನು ಕೇವಲ 15,999 ರೂಗಳಿಗೆ ಇದೆ 26ನೇ ಜೂನ್ 2024 ರಿಂದ ಫ್ಲಿಪ್ಕಾರ್ಟ್ ಮೂಲಕ ಮೊದಲ ಮಾರಾಟದಲ್ಲಿ ಖರೀದಿಸಬಹುದು. ಅಲ್ಲದೆ ಬಳಕೆದಾರರು SBI, HDFC, Axis ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಸುಮಾರು 2000 ರೂಗಳವರೆಗಿನ ತ್ವರಿತ ಡಿಸ್ಕೌಂಟ್ ಪಡೆಯಬಹುದು.

Also Read: ಮನೆಯೊಳಗೆ ಕಾಲಿಟ್ಟ ತಕ್ಷಣ Phone Network ಮಂಗಾ ಮಾಯವಾಗುತ್ತಿದ್ರೆ ಈ 5 ಅಂಶಗಳಿಂದ ಪರಿಹಾರ ಸಿಗಬಹುದು!

ಭಾರತದಲ್ಲಿ Infinix Note 40 5G ಆಫರ್ ಬೆಲೆ ಮತ್ತು ಲಭ್ಯತೆ:

ಭಾರತದಲ್ಲಿ ಬಿಡುಗಡೆಯಾಗಿರುವ ಈ ಲೇಟೆಸ್ಟ್ ಮತ್ತು ಹೊಸ Infinix Note 40 5G ಸ್ಮಾರ್ಟ್ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ ಪ್ರಸ್ತುತ ಒಂದೇ ಒಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 19,999 ರೂಗಳಿಗೆ ಬಿಡುಗಡೆಯಾಗಿದೆ. ಆದರೆ ಕಂಪನಿ ಬಿಡುಗಡೆಯ ಕೊಡುಗೆಯಾಗಿ ಬಳಕೆದಾರರು SBI, HDFC, Axis ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಸುಮಾರು 2000 ರೂಗಳವರೆಗಿನ ತ್ವರಿತ ಡಿಸ್ಕೌಂಟ್ ಪಡೆಯಬಹುದು.

Infinix Note 40 5G launched in India
Infinix Note 40 5G launched in India

ಅಲ್ಲದೆ ಮತ್ತಷ್ಟು ಕಡಿಮೆಗೊಳಿಸಲು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಇದರೊಂದಿಗೆ ವಿನಿಮಯ ಮಾಡಿ ಸುಮಾರು 2000 ರೂಗಳವರೆಗೆ ಪಡೆಯಬಹುದು. ಇದರ ನಂತರ ನೀವು ಈ ಹೊಸ Infinix Note 40 5G ಸ್ಮಾರ್ಟ್ಫೋನ್ ಅನ್ನು ಕೇವಲ 15,999 ರೂಗಳಿಗೆ ಇದೆ 26ನೇ ಜೂನ್ 2024 ರಿಂದ ಫ್ಲಿಪ್ಕಾರ್ಟ್ ಮೂಲಕ ಮೊದಲ ಮಾರಾಟದಲ್ಲಿ ಖರೀದಿಸಬಹುದು.

Infinix Note 40 5G ಡಿಸ್‌ಪ್ಲೇ:

Infinix Note 40 5G ಸ್ಮಾರ್ಟ್ಫೋನ್ 6.78 ಇಂಚಿನ Full HD+ (2436 x 1080 ಪಿಕಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ ಗಾಢ ಬಣ್ಣಗಳು, ಹೆಚ್ಚಿನ ಕಂಟ್ರಾಸ್ಟ್ ಅನುಪಾತದೊಂದಿಗೆ ಕೋನಗಳನ್ನು ಒದಗಿಸುತ್ತದೆ. ಇದು ಮಲ್ಟಿಮೀಡಿಯಾ ವಿಷಯವನ್ನು ವೀಕ್ಷಿಸಲು ಮತ್ತು ಗೇಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ. 120Hz ರಿಫ್ರೆಶ್ ರೇಟ್ ಸ್ಮೂತ್ ಸ್ಕ್ರೋಲಿಂಗ್ ಅನುಭವವನ್ನು ಖಾತ್ರಿಪಡಿಸುತ್ತದೆ. ಆದರೆ ಬ್ಯಾಟರಿ ಉಳಿತಾಯಕ್ಕೆ ಆದ್ಯತೆ ನೀಡಿದರೆ ಇದನ್ನು 60Hz ಹೊಂದಿಸಬಹುದು.

Also Read: 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ Vivo Y58 5G ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ ತಿಳಿಯಿರಿ!

ಇನ್ಫಿನಿಕ್ಸ್ Note 40 5G ಕ್ಯಾಮೆರಾ ಮಾಹಿತಿ:

Infinix Note 40 5G ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬಿಡುಗಡೆಯಾಗಿದ್ದು ಇದರ ಪ್ರೈಮರಿ 108MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತೊಂದು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಜೊತೆಗೆ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಅಲ್ಲದೆ ಉತ್ತಮ ಬೆಳಕಿನ ಸಂದರ್ಭಗಳಲ್ಲಿ 108MP ಸೆನ್ಸರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್ ಮಾಡುವುದರೊಂದಿಗೆ ವಿವರವಾದ ಚಿತ್ರಗಳನ್ನು ತೆಗೆದುಕೊಳ್ಳಬಲ್ಲದು. ಅಲ್ಲದೆ ಕಡಿಮೆ ಬೆಳಕಿನಲ್ಲಿ ಕಾರ್ಯಾಚರಣೆ ಕುಸಿಯಬಹುದು. ಮ್ಯಾಕ್ರೋ ಸೆನ್ಸರ್ ಹತ್ತಿರದ ವಸ್ತುಗಳ ವಿವರವಾದ ಚಿತ್ರಗಳನ್ನು ಸೆರೆಹಿಡಿಯಲು ಸೂಕ್ತವಾಗಿದೆ. ಡೆಪ್ತ್ ಸೆನ್ಸರ್ ಪೋರ್ಟ್ರೇಟ್ ಮೋಡ್‌ನಲ್ಲಿ ಹಿನ್ನೆಲೆಯನ್ನು ಮಬ್ಬಗೆ ಮಾಡಲು ಮತ್ತು ಇತರ ಪೋಟ್ರೇಟ್ ಪರಿಣಾಮಗಳಿಗೆ ಸಹಕರಿಸುತ್ತದೆ. 32MP ಮುಂಭಾಗದ ಕ್ಯಾಮೆರಾವು ಉತ್ತಮ ಗುಣಮಟ್ಟದ ಸೆಲ್ಫಿ ಮತ್ತು ವಿಡಿಯೋ ಕರೆಗಳನ್ನು ನೀಡುತ್ತದೆ.

Infinix Note 40 5G launched in India
Infinix Note 40 5G launched in India

ಇನ್ಫಿನಿಕ್ಸ್ Note 40 5G ಹಾರ್ಡ್ವೇರ್ ಹೇಗಿದೆ?

Infinix Note 40 5G ಸ್ಮಾರ್ಟ್ಫೋನ್ MediaTek Dimensity 7020 ಪ್ರೊಸೆಸರ್ ಮತ್ತು 8GB RAM ಮತ್ತು 256GB ಸ್ಟೋರೇಜ್ ಅನ್ನು ಹೊಂದಿದೆ. ಈ ಸಂಯೋಜನೆಯು ವೆಬ್ ಬ್ರೌಸಿಂಗ್, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸುವುದು ಆನ್‌ಲೈನ್ ಸ್ಟ್ರೀಮಿಂಗ್‌ನಂತಹ ದೈನಂದಿನ ಕಾರ್ಯಗಳನ್ನು ನಿರ್ವಹಿಸುವಲ್ಲಿ ಉತ್ತಮವಾಗಿದೆ. ಆದಾಗ್ಯೂ ಹೆಚ್ಚು ಗ್ರಾಫಿಕ್ಸ್‌ ಭಾರೀ ಗೇಮ್ಗಳು ಅಥವಾ ಮುಂದುವರಿದ ಎಡಿಟಿಂಗ್ ಅಪ್ಲಿಕೇಶನ್‌ಗಳಂತಹ ಕಾರ್ಯಗಳಿಗೆ ಇದು ಸೂಕ್ತವಾಗಿಲ್ಲ. ಹೆಚ್ಚು ಬೇಡಿಕೆಯಿರುವ ಅಪ್ಲಿಕೇಶನ್‌ಗಳನ್ನು ಆಡುವ ಸಂದರ್ಭದಲ್ಲಿ ಫ್ರೇಮ್ ದರ ಕುಸಿಯಬಹುದು. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಮೂಲಕ ನಡೆಯಲಿದ್ದು

Infinix Note 40 5G ಬ್ಯಾಟರಿ ಮಾಹಿತಿ

ಈ ಲೇಟೆಸ್ಟ್ Infinix Note 40 5G ಸ್ಮಾರ್ಟ್ಫೋನ್ ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದ್ದು ಇದು ಒಂದೇ ಚಾರ್ಜ್‌ನಲ್ಲಿ ದಿನವಿಡೀ ಬಾಳಿಕೆ ಬರುತ್ತದೆ ಎಂದು ನಿರೀಕ್ಷಿಸಬಹುದು. ನಿರಂತರವಾಗಿ ಗೇಮ್ ಆಡುವ ಅಥವಾ ವಿಡಿಯೋಗಳನ್ನು ವೀಕ್ಷಿಸುವ ಹೆವಿ ಬಳಕೆದಾರರಿಗೆ ಸಹ ಇದು ಸಾಕಷ್ಟು ಇರಬೇಕು. ಸ್ಮಾರ್ಟ್ಫೋನ್ ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆಯೇ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಆದರೆ ಫೋನ್‌ ಚಾರ್ಜ್ ಮಾಡಲು ತಗುಲುವ ಸಮಯವನ್ನು ಕಡಿಮೆ ಮಾಡಲು 18W ವೇಗದ ಚಾರ್ಜರ್‌ ಅನ್ನು ಬಳಸಬಹುದು ಎಂದು ಊಹಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo