Cheapest 5G Phone 2023: ಇದು ದೇಶದ ಅತ್ಯಂತ ಕಡಿಮೆ ಬೆಲೆಯ 108MP ಕ್ಯಾಮೆರಾದ 5G ಸ್ಮಾರ್ಟ್‌ಫೋನ್!

Cheapest 5G Phone 2023: ಇದು ದೇಶದ ಅತ್ಯಂತ ಕಡಿಮೆ ಬೆಲೆಯ 108MP ಕ್ಯಾಮೆರಾದ 5G ಸ್ಮಾರ್ಟ್‌ಫೋನ್!
HIGHLIGHTS

ಈ Infinix Note 30 5G ಫೋನ್ 108MP ಪ್ರೈಮರಿ ಕ್ಯಾಮೆರಾ ಮತ್ತು 120Hz ರಿಫ್ರೆಶ್ ರೇಟ್ ಪ್ಯಾಕ್ ಮಾಡುತ್ತದೆ.

Infinix Note 30 5G ಸ್ಮಾರ್ಟ್ಫೋನ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ನೀಡುತ್ತದೆ.

ಭಾರತದಲ್ಲಿ Infinix Note 30 5G ಸ್ಮಾರ್ಟ್ಫೋನ್ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 14,999 ರೂಗಳಾಗಿವೆ.

ಭಾರತದಲ್ಲಿ ಇನ್ಫಿನಿಕ್ಸ್ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ ಅನ್ನು ಅತಿ ಕಡಿಮೆ ಬೆಳೆಗೆ ಅದ್ದೂರಿಯ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ Infinix Note 30 5G ಫೋನ್ 108MP ಪ್ರೈಮರಿ ಕ್ಯಾಮೆರಾ ಮತ್ತು 120Hz ರಿಫ್ರೆಶ್ ರೇಟ್ ಜೊತೆಗೆ MediaTek Dimensity 6080 ಪ್ರೊಸೆಸರ್ ಅನ್ನು 8GB RAM ಮೂಲಕ ಪ್ಯಾಕ್ ಮಾಡುತ್ತದೆ. JBL ಆಡಿಯೋದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ನೀಡುತ್ತದೆ. Infinix Note 30 5G ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ನೀಡುತ್ತದೆ. ಅಲ್ಲದೆ ನಿಮ್ಮ ಪ್ರತಿದಿನದ ಬಳಕೆ ಮತ್ತು ಗೇಮಿಂಗ್‌ನಲ್ಲಿ ಅತಿಯಾಗಿ ಬಿಸಿಯಾಗುವುದನ್ನು ಕಡಿಮೆ ಮಾಡಲು ಬೈಪಾಸ್ ಚಾರ್ಜಿಂಗ್ ಮೋಡ್ ಅನ್ನು ಸಹ ಒಳಗೊಂಡಿದೆ.

ಭಾರತದಲ್ಲಿ Infinix Note 30 5G ಬೆಲೆ ಮತ್ತು ಆಫರ್ 

ಅದ್ಬುತ ಫೀಚರ್ಗಳೊಂದಿಗೆ ಬಿಡುಗಡೆಯಾಗಿರುವ ಈ Infinix Note 30 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಭಾರತದಲ್ಲಿ ಇದರ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 14,999 ರೂಗಳಾಗಿವೆ. ಇದರ ಕ್ರಮವಾಗಿ ಇದರ ಹೈ ಎಂಡ್ ವೇರಿಯಂಟ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 15,999 ರೂಗಳಾಗಿವೆ. ಅಲ್ಲದೆ ನೀವು ಆಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ರೂ.1000 ಗಳ ರಿಯಾಯಿತಿಯನ್ನು ಆನಂದಿಸಬಹುದು.

Infinix Note 30 5G ಡಿಸ್ಪ್ಲೇ 

ಈ ಹೊಸ ಇನ್ಫಿನಿಕ್ಸ್ Infinix Note 30 5G ಸ್ಮಾರ್ಟ್ಫೋನ್ 6.78 ಇಂಚಿನ FHD+ IPS ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮಗೆ ಪ್ರೊಟೆಕ್ಷನ್ ಬಗ್ಗೆ ಅಷ್ಟಾಗಿ ಏನು ಹೇಳಿಲ್ಲವಾದರೂ ಉತ್ತಮ್ನ ಡಿಸೈನಿಂಗ್ ಇನ್ಫಿನಿಟಿ ಡಿಸ್ಪ್ಲೇಯನ್ನು 1080×2460 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ವಿಡಿಯೋ ಮತ್ತು ಡೇ ಲೈಟ್ ಅಲ್ಲಿ ನಿಮಗೆ ಸಾಕಾಗುವಷ್ಟು ಬ್ರೈಟ್‌ನೆಸ್ ನೀಡುತ್ತದೆ.  

Infinix Note 30 5G ಪ್ರೊಸೆಸರ್ ಮತ್ತು ಸ್ಟೋರೇಜ್ 

Infinix Note 30 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13-ಆಧಾರಿತ XOS 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಪೂರ್ವ-ಸ್ಥಾಪಿತವಾಗಿದೆ. ಸಾಧನವನ್ನು ಪವರ್ ಮಾಡುವುದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಜೊತೆಗೆ Mali G57 MC2 GPU ಮತ್ತು 8GB RAM ವರೆಗೆ ವಿಸ್ತರಿಸಬಹುದು. ಅಲ್ಲದೆ ಇದನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಬಳಸಿ ವಿಸ್ತರಿಸಬಹುದು. ಭಾರತದಲ್ಲಿ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯೊಂದಿಗೆ ಇದರ ಕ್ರಮವಾಗಿ ಇದರ ಹೈ ಎಂಡ್ ವೇರಿಯಂಟ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಹೊಂದಿದೆ. 

Infinix Note 30 5G ಕ್ಯಾಮೆರಾ 

ಇದರ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಂದಾಗ ಫೋನ್ ಹೆಚ್ಚಿನ ರೆಸಲ್ಯೂಶನ್ 108-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಎರಡು ಹೆಚ್ಚುವರಿ ಸೆನ್ಸರ್ ವಿಶೇಷಣಗಳನ್ನು ನಿರ್ದಿಷ್ಟಪಡಿಸಲಾಗಿಲ್ಲ. ಇದರ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. Infinix Note 30 5G JBL ಧ್ವನಿಯನ್ನು ನೀಡುವ ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿರುವ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

Infinix Note 30 5G ಬ್ಯಾಟರಿ ಮತ್ತು ಸೆನ್ಸರ್ 

ಇದು 5G, 4G, Wi-Fi, ಬ್ಲೂಟೂತ್, GPS, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ವಿವಿಧ ಸಂಪರ್ಕ ಆಯ್ಕೆಗಳನ್ನು ಬೆಂಬಲಿಸುತ್ತದೆ. ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಗೈರೊಸ್ಕೋಪ್, ಲೈಟ್ ಸೆನ್ಸರ್ ಮತ್ತು ಸಾಮೀಪ್ಯ ಸೆನ್ಸರ್ದಂತಹ ಹಲವಾರು ಸೆನ್ಸರ್ಗಳನ್ನು ಫೋನ್ ಹೊಂದಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ Note 30 5G ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo