Infinix Note 12i: ಭಾರತದಲ್ಲಿ ಇನ್‌ಫಿಕ್ಸ್ ಲಭ್ಯವಿರುವ ತನ್ನ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯನ್ನು ಇದು ಹೆಚ್ಚಿಸಿದೆ. ಕಡಿಮೆ ಬೆಲೆಯ ಶ್ರೇಣಿಯ ಹೊಚ್ಚಹೊಸ Infinix Note 12i ಸ್ಮಾರ್ಟ್‌ಫೋನ್ MediaTek Helio G85 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ ಅನ್ನು AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್ಸೆಟ್ ಮತ್ತು ಹೆಚ್ಚಿನವುಗಳೊಂದಿಗೆ ಬಿಡುಗಡೆ ಮಾಡಲಾಗಿದೆ. Infinix Note 12i ಜಿಯೋ ಗ್ರಾಹಕರಿಗೆ ವಿಶೇಷ ಕೊಡುಗೆಯೊಂದಿಗೆ ಜನವರಿ 30 ರಿಂದ ಮಾರಾಟವಾಗಲಿದೆ. ಇದು ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ 10- ಲೇಯರ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಡಿವೈಸ್‌ನ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.
Infinix Note 12i ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ವೇರಿಯಂಟ್ ಮೂಲಕ ಲಭ್ಯವಿದ್ದು 4GB RAM ಮತ್ತು 64GB ಇಂಟೆರ್‌ನಲ್ ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ರೂ 9,999 ಆಗಿದೆ. ದೇಶದಲ್ಲಿ ಜನವರಿ 30 ರಿಂದ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಪರಿಚಯಾತ್ಮಕ ಆಫರ್ಸಗಳ ಮೂಲಕ Jio ಬಳಕರದಾರರಿಗೆ 1,000 ರೂ ಕ್ಯಾಶ್‌ಬ್ಯಾಕ್ ಅನ್ನು ನೀಡಲಾಗುತ್ತದೆ. ಮೆಟಾವರ್ಸ್ ಬ್ಲೂ, ಆಲ್ಪೈನ್ ವೈಟ್ ಮತ್ತು ಫೋರ್ಸ್ ಬ್ಲ್ಯಾಕ್ ಈ ಮೂರು ವಿಭಿನ್ನ ಕಲರ್ ಗಳ ಆಯ್ಕೆಯಲ್ಲಿ ಈ ಫೋನ್ ಸಿಗಲಿದೆ.
Infinix Note 12i ಪ್ರೊಸೆಸರ್ MediaTek Helio G85 ಆಗಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಆಧಾರಿತ XOS 12 ಕಸ್ಟಮ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂದೆ ಹೇಳಿದಂತೆ ಈ ಫೋನ್ 4GB RAM ಅನ್ನು ಹೊಂದಿದ್ದು 3GB ವರೆಗೆ ವರ್ಚುವಲ್ RAM ಅನ್ನು ಬೆಂಬಲಿಸಬಹುದು. ಈ ಸ್ಮಾರ್ಟ್‌ಫೋನ್ 64GB ಇಂಟೆರ್‌ನಲ್ ಸ್ಟೋರೇಜ್ ಅನ್ನು ಹೊಂದಿದ್ದು ಇದನ್ನು ಮೈಕ್ರೊ SD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. Infinix Note 12i 6.7 ಇಂಚಿನ FHD+ AMOLED ಸ್ಕ್ರೀನ್ ಅನ್ನು ಒಳಗೊಂಡಿದ್ದು ಇದರ ಡಿಸ್ಪ್ಲೇಯಲ್ಲಿ 1080p ಮಲ್ಟಿಮೀಡಿಯಾ ವೀಕ್ಷಣೆಗಾಗಿ Widevine L1 ಅನ್ನು ಅನುಮೋದಿಸಲಾಗಿದೆ.
Infinix Note 12i ಸ್ಮಾರ್ಟ್ಫೋನ್ 1000 nits ನ ಗರಿಷ್ಠ ಬ್ರೈಟ್ ನೆಸ್ ಅನ್ನು ಇದು ಹೊಂದಿದೆ. ಸ್ಮಾರ್ಟ್‌ಫೋನ್‌ನ ಫ್ರಂಟ್ ಕ್ಯಾಮೆರಾ 8MP ರೆಸಲ್ಯೂಶನ್ ಹೊಂದಿದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದ್ದು 50 MP ಪ್ರೈಮರಿ ಸೆನ್ಸರ್ ಅನ್ನು f/1.75 ಅಪರ್ಚರ್ ಜೊತೆಗೆ ಡೆಪ್ತ್ ಸೆನ್ಸರ್ ಮತ್ತು AI ಲೆನ್ಸ್ ಅನ್ನು ನೀಡಲಾಗಿದೆ. ಇದು 5000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. Infinix Note 12i ನಲ್ಲಿ ಬ್ಲೂಟೂತ್ 5.0, Wi-Fi, 4G, ಡ್ಯುಯಲ್-ಸಿಮ್ ಮತ್ತು GPS ನಂತಹ ಕನೆಕ್ಟಿವಿಟಿ ಫೀಚರ್ ಗಳನ್ನು ನೀಡಲಾಗಿದೆ.