8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Infinix Hot 40i ಸ್ಮಾರ್ಟ್‌ಫೋನ್‌ನ ಟಾಪ್ 5 ಫೀಚರ್ಗಳು!

Updated on 21-Feb-2024
HIGHLIGHTS

Infinix Hot 40i ಸ್ಮಾರ್ಟ್‌ಫೋನ್‌ ಬೆಸ್ಟ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ.

ಸ್ಮಾರ್ಟ್ಫೋನ್ 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ ಸ್ಮಾರ್ಟ್ಫೋನ್ ಈ ಬಜೆಟ್ ಬೆಲೆಯಲ್ಲಿ ನಿಮಗೆ ಅತ್ಯುತ್ತಮ ಆಯ್ಕೆ.

Infinix Hot 40i ಭಾರತದಲ್ಲಿ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ 8GB + 128GB ರೂಪಾಂತರಕ್ಕೆ 8,999 ರೂಗಳಾಗಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ತನ್ನ ಲೇಟೆಸ್ಟ್ Infinix Hot 40i ಸ್ಮಾರ್ಟ್‌ಫೋನ್‌ನ ಅನ್ನು ಬೆಸ್ಟ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಇಂದು ಅಂದ್ರೆ 21ನೇ ಫೆಬ್ರವರಿ 2024 ರಿಂದ ಇದರ ಮೊದಲ ಮಾರಾಟವನ್ನು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮೂಲಕ ಪ್ರಾರಂಭಿಸಲಾಗಿದೆ. ಸ್ಮಾರ್ಟ್ಫೋನ್ 5,000mAh ಬ್ಯಾಟರಿಯೊಂದಿಗೆ 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ ಸ್ಮಾರ್ಟ್ಫೋನ್ ಈ ಬಜೆಟ್ ಬೆಲೆಯಲ್ಲಿ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. Infinix Hot 40i ಫೋನ್ ಅನ್ನು 4 ಬಣ್ಣ ಆಯ್ಕೆಗಳಲ್ಲಿ ನೀಡಲಾಗಿದ್ದು ಇದರ ಬೆಲೆ ಮತ್ತು ಲಭ್ಯತೆಯೊಂದಿಗೆ ನೀವು ಖರೀದಿಸಲು ಯೋಚಿಸುತ್ತಿದ್ದರೆ ಮೊದಲು Infinix Hot 40i ಸ್ಮಾರ್ಟ್ಫೋನ್ ಟಾಪ್ 5 ಫೀಚರ್ಗಳನ್ನು ತಿಳಿಯಿರಿ.

Also Read: Upcoming Phones 2024: ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು!

ಭಾರತದಲ್ಲಿ Infinix Hot 40i ಬೆಲೆ ಮತ್ತು ಲಭ್ಯತೆ

ಹೊರೈಸನ್ ಗೋಲ್ಡ್, ಪಾಮ್ ಬ್ಲೂ, ಸ್ಟಾರ್‌ಲಿಟ್ ಬ್ಲಾಕ್ ಮತ್ತು ಸ್ಟಾರ್‌ಫಾಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. Infinix Hot 40i ಭಾರತದಲ್ಲಿ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ 8GB + 128GB ರೂಪಾಂತರಕ್ಕೆ 8,999 ರೂಗಳಾಗಿವೆ. ಇದರ ಕ್ರಮವಾಗಿ 8GB + 256GB ಕಾನ್ಫಿಗರೇಶನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 9,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಭಾರತದಲ್ಲಿ Infinix Hot 40i ಇಂದಿನಿಂದ ಅಂದ್ರೆ 21ನೇ ಫೆಬ್ರವರಿ 2024 ರಿಂದ ಮೊದಲ ಮಾರಾಟದ ಮೂಲಕ ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ.

Infinix Hot 40i smartphone top 5 features

Infinix Hot 40i ಡಿಸ್ಪ್ಲೇ

90Hz ರಿಫ್ರೆಶ್ ರೇಟ್‌ನೊಂದಿಗೆ 6.5 ಇಂಚಿನ HD+ ಡಿಸ್ಪ್ಲೇಯೊಂದಿಗೆ 1612 x 720 ಪಿಕ್ಸೆಲ್‌ಗಳ ರೆಸುಲ್ಯೂಷನ್ IPS LCD ಪ್ಯಾನೆಲ್ ಮತ್ತು 480nits ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ Infinix Hot 40i ಸ್ಮಾರ್ಟ್ಫೋನ್ 89.7% ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರುತ್ತದೆ. ಇದು ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಬಾಗಿಕೊಳ್ಳಬಹುದಾದ ಟ್ಯಾಬ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ನಿಮಗೆ Palm Blue, Starfall Green, Horizon Gold ಮತ್ತು Starlit Black ಬಣ್ಣಗಳಲ್ಲಿ ಲಭ್ಯವಿದೆ.

Infinix ಹಾಟ್ 40i ಹಾರ್ಡ್ವೇರ್

ಈ ಸ್ಮಾರ್ಟ್ಫೋನ್ 128GB ಆರಂಭಿಕ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ 8GB RAM ಅನ್ನು ಒಳಗೊಂಡಿದೆ. ಅಲ್ಲದೆ ಇದನ್ನು ಮೈಕ್ರೊ SD ಕಾರ್ಡ್ ಸೇರಿಸುವ ಮೂಲಕ ನೀವು 1TB ವರೆಗೆ ಸ್ಟೋರೇಜ್ ಸ್ಥಳವನ್ನು ಸಹ ವಿಸ್ತರಿಸಬಹುದು. ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ Unisoc T606 ಚಿಪ್‌ಸೆಟ್‌ನೊಂದಿಗೆ ಮಾಲಿ-G57 MC1 GPU ಜೋಡಿಯಾಗಿದೆ. ಇದರ RAM ಅನ್ನು ಸಹ ವಾಸ್ತವಿಕವಾಗಿ 16GB ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 13 ಆಧಾರಿತ ತಮ್ಮದೇಯಾದ XOS 13.0 ನೊಂದಿಗೆ ನಡೆಯುತ್ತದೆ.

Infinix Hot 40i smartphone top 5 features

Infinix ಹಾಟ್ 40i ಕ್ಯಾಮೆರಾ

Infinix Hot 40i ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ ಮಾತನಾಡುವುದಾದರೆ ನಿಮಗೆ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ f/1.6 ಅಪರ್ಚರ್ನೊಂದಿಗೆ ವೈಡ್ ಏಂಗಲ್ ಆಟೋ ಫೋಕಸ್ ಸೆನ್ಸರ್ ಮತ್ತು 0.08MP ಮೆಗಾಪಿಕ್ಸೆಲ್ AI-ಬೆಂಬಲಿತ ಸಂವೇದಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಫೋನ್ ಜೊತೆಗೆ ಕ್ವಾಡ್ LED ರಿಂಗ್ ಡುಯಲ್ ಫ್ಲ್ಯಾಷ್ ಜೊತೆಗೆ ಬರುತ್ತದೆ. ಫೋನ್ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಕ್ಯಾಮೆರಾವನ್ನು ಹೊಂದಿದೆ.

Infinix Hot 40i ಬ್ಯಾಟರಿ ಮತ್ತು ಕನೆಕ್ಟಿವಿಟಿ

Infinix Hot 40i ಸ್ಮಾರ್ಟ್ಫೋನ್ 18W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು ವೈ-ಫೈ, ಬ್ಲೂಟೂತ್ 5.0, ಯುಎಸ್‌ಬಿ ಟೈಪ್-ಸಿ, ಜಿಪಿಎಸ್, ಎಫ್‌ಎಂ ಮತ್ತು NFC ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್, 3.5mm ಹೆಡ್ಫೋನ್ ಜ್ಯಾಕ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ನೊಂದಿಗೆ ಬರುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :